ಜೈಲು ಸೇರಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಗುರುವಾರ, ಏಪ್ರಿಲ್ 5, 2018

ಜೈಲು ಸೇರಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ...!

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಜೋದ್ಪುರ ಜೈಲಿನಲ್ಲಿ ರಾತ್ರಿ ಕಳೆದಿದ್ದಾರೆ. ಈ ಹಿಂದೆ ಕೂಡ ಸಲ್ಮಾನ್ ಜೋದ್ಪುರ ಜೈಲಿನಲ್ಲಿದ್ದರು. ಆಗ 18 ದಿನಗಳ ಕಾಲ ಜೈಲಿನಲ್ಲಿದ್ದ ಸಲ್ಮಾನ್ ಈಗ 19ನೇ ರಾತ್ರಿ ಕಳೆದಿದ್ದಾರೆ. ಸಲ್ಮಾನ್ ಖೈದಿ ಸಂಖ್ಯೆ 106 ಆಗಿದ್ದು, ಸಲ್ಮಾನ್ ಖಾನ್ ಅಸರಾಮ್ ಜೊತೆ ಮಲಗಿದ್ದರು.
ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಅಸರಾಮ್ ಹಾಗೂ ಸಲ್ಮಾನ್ ಒಂದೇ ಬ್ಯಾರಕ್ ನಲ್ಲಿದ್ದರು. ಒಂದು ಬ್ಯಾರಕನ್ನು ಒಂದು ಪರದೆ ಮೂಲಕ ಎರಡು ಮಾಡಲಾಗಿದೆ. ಒಂದು ಭಾಗದಲ್ಲಿ ಸಲ್ಮಾನ್ ಮಲಗಿದ್ರೆ ಇನ್ನೊಂದು ಭಾಗದಲ್ಲಿ ಅಸರಾಮ್ ಮಲಗಿದ್ದರು.
ರಾತ್ರಿ ಸರಿಯಾಗಿ ನಿದ್ರೆ ಮಾಡದ ಸಲ್ಮಾನ್ ಖಾನ್ ಚಡಪಡಿಸುತ್ತಿದ್ದರು ಎನ್ನಲಾಗಿದೆ. ಸಲ್ಮಾನ್ ಖಾನ್ ಗೆ ಅಸರಾಮ್ ರಗ್ ಆಫರ್ ಮಾಡಿದ್ದರು ಎನ್ನಲಾಗಿದೆ. ಸಂಜೆ ಅಸರಾಮ್ ಗೆ ಆಶ್ರಮದಿಂದ ಆಹಾರ ಬರುತ್ತದೆ. ಅದನ್ನು ಸಲ್ಮಾನ್ ತಿಂದಿದ್ದಾರಂತೆ.
ರಾತ್ರಿ ಪೂರ್ತಿ ಮೌನಿಯಾಗಿದ್ದ ಸಲ್ಮಾನ್ ಬೆಳಿಗ್ಗೆ 4 ಗಂಟೆಗೆ ಬಾತ್ ರೂಂಗೆ ಹೋಗಿದ್ದರು. ಹಳೆಯ ಬಾತ್ ರೂಂನಲ್ಲಿ ಮಡಿಕೆ ಹಾಗೂ ಲೋಟ ಇಡಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here