ವಿಶ್ವ ದಾಖಲೆ ನಿರ್ಮಿಸಿದ ಲಿಯಾಂಡರ್ ಪೇಸ್... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶುಕ್ರವಾರ, ಏಪ್ರಿಲ್ 6, 2018

ವಿಶ್ವ ದಾಖಲೆ ನಿರ್ಮಿಸಿದ ಲಿಯಾಂಡರ್ ಪೇಸ್...

ಟಿಯಾಂಜಿನ್, ಎ.7: ಭಾರತದ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಡೇವಿಸ್ ಕಪ್‌ನಲ್ಲಿ ಗರಿಷ್ಠ ಡಬಲ್ಸ್ ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಶನಿವಾರ ಚೀನಾ ವಿರುದ್ಧ ಡೇವಿಸ್‌ಕಪ್‌ನ ಏಷ್ಯಾ-ಒಶಿಯಾನಿಯಾ ಗುಂಪು-1ರ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣರೊಂದಿಗೆ ಕಣಕ್ಕಿಳಿದ ಪೇಸ್ 43ನೇ ಜಯ ದಾಖಲಿಸಿದರು. ಈ ಮೂಲಕ ಡೇವಿಸ್‌ಕಪ್ ಇತಿಹಾಸದಲ್ಲಿ ಓರ್ವ ಯಶಸ್ವಿ ಆಟಗಾರ ನಾಗಿ ಹೊರಹೊಮ್ಮಿದರು.
ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದ್ದ ಡಬಲ್ಸ್ ಪಂದ್ಯದಲ್ಲಿ ರೋಹನ್ ಜೊತೆಗೂಡಿ ಆಡಿದ 44ರ ಹರೆಯದ ಪೇಸ್ ಚೀನಾದ ಮೊ ಕ್ಸಿನ್ ಗಾಂಗ್ ಹಾಗೂ ಝೀ ಝಾಂಗ್‌ರನ್ನು 5-7, 7-6(5),7-6(5) ಸೆಟ್‌ಗಳ ಅಂತರದಿಂದ ಸೋಲಿಸಿದರು.
ಚೀನಾ ವಿರುದ್ಧ ಶುಕ್ರವಾರ ನಡೆದ ಮೊದಲೆರಡು ಸಿಂಗಲ್ಸ್ ಪಂದ್ಯಗಳಲ್ಲಿ ರಾಮ್‌ಕುಮಾರ್ ಹಾಗೂ ಸುಮಿತ್ ನಗಾಲ್ ಸೋತಿದ್ದರು. ಹೀಗಾಗಿ ಭಾರತ 0-2 ಹಿನ್ನಡೆಯಲ್ಲಿತ್ತು. ಪೇಸ್-ಬೋಪಣ್ಣ ಗೆಲುವಿನೊಂದಿಗೆ ಭಾರತ ಮರು ಹೋರಾಟ ನೀಡುವಂತಾಗಿದೆ. ರಾಮ್‌ಕುಮಾರ್ ಹಾಗೂ ಸುಮಿತ್ ರಿವರ್ಸ್ ಸಿಂಗಲ್ಸ್ ಪಂದ್ಯಗಳನ್ನು ಜಯಿಸಿದರೆ ಭಾರತ ವಿಶ್ವ ಗ್ರೂಪ್ ಪ್ಲೇ-ಆಫ್‌ಗೆ ತೇರ್ಗಡೆಯಾಗಬಹುದು.
ಕಳೆದ ಕೆಲವು ವರ್ಷಗಳಿಂದ ಭಾರತದ ಡೇವಿಸ್‌ಕಪ್ ಹೀರೋ ಆಗಿರುವ ಪೇಸ್ ಡಬಲ್ಸ್‌ನಲ್ಲಿ 42 ಪಂದ್ಯಗಳಲ್ಲಿ ಜಯ ಸಾಧಿಸಿ ಇಟಲಿಯ ಖ್ಯಾತ ಟೆನಿಸ್ ಆಟಗಾರ ನಿಕೊಲಾ ಪೀಟ್ರಂಜಲಿ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಕೊನೆಗೂ ನಿಕೊಲಾ ದಾಖಲೆಯನ್ನು ಮುರಿದ ಪೇಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
1990ರಲ್ಲಿ ಡೇವಿಸ್‌ಕಪ್‌ನಲ್ಲಿ ಝೀಶನ್ ಅಲಿ ಅವರೊಂದಿಗೆ ಚೊಚ್ಚಲ ಡಬಲ್ಸ್ ಪಂದ್ಯ ಆಡಿದ್ದ ಪೇಸ್ ಅವರು ಮಹೇಶ್ ಭೂಪತಿ ಜೊತೆಗೂಡಿ ಟೆನಿಸ್ ದಂತಕತೆಯಾಗಿ ಬೆಳೆದಿದ್ದರು.
ಪೇಸ್ ಹಾಗೂ ಭೂಪತಿ 90ರ ದಶಕದಲ್ಲಿ ಎಟಿಪಿ ಟೂರ್ನಿಗಳಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಭಾರತದ ಓರ್ವ ಯಶಸ್ವಿ ಡಬಲ್ಸ್ ಜೋಡಿಯಾಗಿದ್ದ ಪೇಸ್-ಭೂಪತಿ 24 ಪಂದ್ಯಗಳಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here