ನವದೆಹಲಿ : ಕಾಶ್ಮೀರದ ವಿಚಾರದಲ್ಲಿ ಅನವಶ್ಯಕ ಮೂಗು ತೂರಿಸಿದ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಆಫ್ರಿದಿ ವಿರುದ್ಧ ಸಚಿನ್ ತೆಂಡೂಲ್ಕರ್ ಅವರು ಗುಡುಗಿದ್ದಾರೆ.
ಭಾರತಕ್ಕೆ ಹೊರಗಿನವರು ಸಲಹೆ ನೀಡುವ ಅಗತ್ಯವಿಲ್ಲ. ಕಾಶ್ಮೀರ ವಿಷಯವಾಗಿ ಆಫ್ರಿದಿ ಧ್ವನಿಯನ್ನು ಅಡಗಿಸಲು ಅಲ್ಲಿನ ಸರ್ಕಾರ ಮುಗ್ದ ಜನರನ್ನು ಗುಂಡು ಹಾರಿಸಿ ಕೊಲ್ಲುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಆಫ್ರಿದಿ ಟ್ವೀಟ್ ಬೆನ್ನಲ್ಲೇ ಭಾರತೀಯ ಆಟಗಾರರು ಟ್ವೀಟರ್ ನಲ್ಲೇ ಶಾಹಿದ್ ಆಫ್ರಿದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ಸಚಿನ್ ತೆಂಡೂಲ್ಕರ್ ಆಫ್ರಿದಿ ವಿರುದ್ಧ ಗುಡುಗಿದ್ದು, ನಮ್ಮ ದೇಶದ ಆಡಳಿತ ವ್ಯವಸ್ಥೆಯನ್ನು ನಿಭಾಯಿಸಲು ಸಮರ್ಥರನ್ನು ಹೊಂದಿದ್ದೇವೆ. ಭಾರತದ ಯಾವುದೇ ವಿಷಯದ ಬಗ್ಗೆ ಹೊರಗಿನವರು ನಮಗೆ ಸಲಹೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ