'ನನ್ನ ಮಿದುಳೇ ನನ್ನ ಶತ್ರು'; ಡೆತ್ ನೋಟ್ ಬರೆದಿಟ್ಟು ಟಿವಿ ನಿರೂಪಕಿ ರಾಧಿಕಾ ರೆಡ್ಡಿ ಆತ್ಮಹತ್ಯೆ - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ಏಪ್ರಿಲ್ 2, 2018

'ನನ್ನ ಮಿದುಳೇ ನನ್ನ ಶತ್ರು'; ಡೆತ್ ನೋಟ್ ಬರೆದಿಟ್ಟು ಟಿವಿ ನಿರೂಪಕಿ ರಾಧಿಕಾ ರೆಡ್ಡಿ ಆತ್ಮಹತ್ಯೆ

ಹೈದರಾಬಾದ್‌: 'ನನ್ನ ಮಿದುಳೇ ನನ್ನ ಶತ್ರು' ಎಂದು ಡೆತ್ ನೋಟ್ ಬರೆದಿಟ್ಟು ಟಿವಿ ನಿರೂಪಕಿ ರಾಧಿಕಾ ರೆಡ್ಡಿ(36), ಐದು ಅಂತಸ್ಥಿನ ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮೂಸಾಪೇಟ್‌ನಲ್ಲಿ ನಡೆದಿದೆ.
ರಾಧಿಕಾ ಅವರ ಬ್ಯಾಗ್‌ನಲ್ಲಿ ಡೆತ್‌ ನೋಟ್‌ ಸಿಕ್ಕಿದ್ದು, ಅದನ್ನು ಆಧರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದನೇ ಮಹಡಿಯಿಂದ ಜಿಗಿದಿರುವ ಪರಿಣಾಮ ಅವರ ತಲೆಗೆ ಪೆಟ್ಟು ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರು ಖಿನ್ನತೆ ಒಳಗಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಚೇರಿಯಿಂದ ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ ರಾಧಿಕಾ, ನೇರವಾಗಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರು ತಿಂಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದ ರಾಧಿಕಾ,14 ವರ್ಷದ ಮಗ ಹಾಗೂ ಪಾಲಕರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಅವರ ಮಗ ಮಾನಸಿಕ ನೂನ್ಯತೆಯಿಂದ ಬಳಲುತ್ತಿದ್ದಾನೆ ಎಂದು ಪೊಲೀಸರು ವರದಿಯಲ್ಲಿ ವಿವರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here