ಬಿಸಿಸಿಐಗೆ ಐದು ವರ್ಷಗಳ ಅವಧಿಗೆ ದಾಖಲೆಯ 6,138 ಕೋಟಿ ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಗುರುವಾರ, ಏಪ್ರಿಲ್ 5, 2018

ಬಿಸಿಸಿಐಗೆ ಐದು ವರ್ಷಗಳ ಅವಧಿಗೆ ದಾಖಲೆಯ 6,138 ಕೋಟಿ ...!

ಮುಂಬೈ: ಭಾರತೀಯ ಕ್ರಿಕೆಟ್​ನ ಜಾಗತಿಕ ನೇರಪ್ರಸಾರ ಒಪ್ಪಂದವನ್ನು ಮುಂದಿನ ಐದು ವರ್ಷಗಳ ಅವಧಿಗೆ (2018-2023) ದಾಖಲೆಯ 6,138 ಕೋಟಿ ರೂಪಾಯಿಗೆ ಸ್ಟಾರ್ ಇಂಡಿಯಾ ಖರೀದಿ ಮಾಡಿದ್ದು ಈ ಮೂಲಕಕೆಟ್​ನ ನೇರಪ್ರಸಾರ ಹಾಗೂ ಡಿಜಿಟಲ್ ಹಕ್ಕುಗಳಲ್ಲಿ ತನ್ನ ಭಾರತದಲ್ಲಿ ಪ್ರಾಬಲ್ಯವನ್ನು ಮುಂದುವರಿಸಿದೆ.
ಇದೇ ಮೊದಲ ಬಾರಿಗೆ ಇ-ಹರಾಜಿನ ಮೂಲಕ ಬಿಸಿಸಿಐ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿತು. ಮೂರು ದಿನಗಳ ಕಾಲ ನಡೆದ ಪ್ರಕ್ರಿಯೆಯಲ್ಲಿ ಸ್ಟಾರ್ ಇಂಡಿಯಾಗೆ ಸೋನಿ ಪಿಕ್ಚರ್ಸ್ ನೆಟ್​ವರ್ಕ್ (ಎಸ್​ಪಿಎನ್) ಹಾಗೂ ರಿಲಾಯನ್ಸ್ ಜಿಯೋ ನಿಕಟ ಪೈಪೋಟಿ ನೀಡಿತ್ತು. ಸ್ಟಾರ್ ಗೆಲುವಿನ ಬಿಡ್ ಕಳೆದ ಸಾಲಿನ ಭಾರತೀಯ ಕ್ರಿಕೆಟ್ ಹಕ್ಕುಗಳಿಗೆ ಹೋಲಿಸಿದರೆ ಶೇ. 59 ಹೆಚ್ಚಳವಾಗಿದೆ. 2012ರಿಂದ 2018ರವರೆಗೆ ನೇರಪ್ರಸಾರದ ಹಕ್ಕುಗಳನ್ನು ಹೊಂದಿದ್ದ ಸ್ಟಾರ್ ಇಂಡಿಯಾ ಅದಕ್ಕಾಗಿ ಬಿಸಿಸಿಐಗೆ 3,851 ಕೋಟಿ ರೂ. ಪಾವತಿ ಮಾಡಿದೆ.
ಸ್ಟಾರ್ ಇಂಡಿಯಾ ಈ ಅವಧಿಯಲ್ಲಿ ಪುರುಷರ ಕ್ರಿಕೆಟ್​ನ 102 ಅಂತಾರಾಷ್ಟ್ರೀಯ ಪಂದ್ಯಗಳನ್ನು ನೇರಪ್ರಸಾರ ಮಾಡಲಿದೆ. ಕಳೆದ ಅವಧಿಯಲ್ಲಿ 96 ಪಂದ್ಯಗಳನ್ನು ನೇರಪ್ರಸಾರ ಮಾಡಲಾಗಿತ್ತು. 2018-19ರ ಋತುವಿನಲ್ಲಿ 18 ಪಂದ್ಯ, 2019-20ರಲ್ಲಿ 26, 2020-21ರಲ್ಲಿ 14, 2021-22ರಲ್ಲಿ 23 ಹಾಗೂ 2022-23ರಲ್ಲಿ 21 ಪಂದ್ಯಗಳನ್ನು ನೇರಪ್ರಸಾರ ಮಾಡಲಿದೆ. ಅದರೊಂದಿಗೆ ಪುರುಷರ ಕ್ರಿಕೆಟ್​ನ ದೇಶೀಯ ಹಾಗೂ ಮಹಿಳಾ ಕ್ರಿಕೆಟ್​ನ ಅಂತಾರಾಷ್ಟ್ರೀಯ ಪಂದ್ಯಗಳ ನೇರಪ್ರಸಾರವನ್ನೂ ಮಾಡಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here