ಸರಿಸುಮಾರು 60 ಸರಕುಗಳು ಮತ್ತು ಸೇವೆ ಅಗ್ಗವಾಗುವ ಸಾಧ್ಯತೆ ಇದೆ. ಮೂರು ವರ್ಷಗಳಲ್ಲೇ ಭಾರೀ ಕುಸಿತ ಕಂಡಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ 60 ಸರಕು ಮತ್ತು ಸೇವೆಗಳ ಮೇಲಿನ ಜಿಎಸ್ಟಿ ದರ ಕಡಿತ ಮಾಡುವ ಸಾಧ್ಯತೆ ಇದೆ.
ನಿನ್ನೆ ಅರುಣ್ ಜೇಟ್ಲಿ ಹಾಗೂ ಅಮಿತ್ ಶಾ ಜೊತೆಗೆ 3 ಗಂಟೆಗಳ ಕಾಲ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಜಿಎಸ್ಟಿ ದರ ಕಡಿತಕ್ಕೆ ಸೂಚನೆ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ. ನೋಟು ನಿಷೇಧ ಹಾಗೂ ಜಿಎಸ್ಟಿ ಜಾರಿ ದೇಶದ ಆರ್ಥಿಕತೆ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬ ಬಗ್ಗೆ ಕೂಡ ಚರ್ಚಿಸಿದ್ದಾರೆ.
ಶೇ.28ರಷ್ಟು ಜಿಎಸ್ಟಿ ವಿಧಿಸಿರುವ ವಸ್ತುಗಳ ಮೇಲಿನ ತೆರಿಗೆ ಕಡಿತಕ್ಕೆ ಕೇಂದ್ರ ಮುಂದಾಗಿದೆ. ಶೇ.18 ರಿಂದ 12ರಷ್ಟು ತೆರಿಗೆ ವಿಧಿಸಿರುವ ಸೇವೆಗಳ ಮೇಲಿನ ಜಿಎಸ್ಟಿ ಕೂಡ ಕಡಿಮೆಯಾಗಲಿದೆ. ದರ ಕಡಿತ ಇಂದು ಘೋಷಣೆಯಾದ್ರೆ ಜನಸಾಮಾನ್ಯರು ಕೊಂಚ ರಿಲೀಫ್ ಆಗಿ ದೀಪಾವಳಿಗೆ ಖರೀದಿ ಮಾಡಬಹುದು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ