ಬೆಂಗಳೂರು, ಅಕ್ಟೋಬರ್ 04: ನಾಗರಿಕ ಗುರುತಿನ ಚೀಟಿ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ಎಂಬ ಸುದ್ದಿ ಕಿವಿಗೆ ಬೀಳುತ್ತಲೇ ಇರುತ್ತದೆ. ನಾಳೆ ಮಾಡಿದರೆ ಆಯ್ತು ಎಂದುಕೊಳ್ಳುವಷ್ಟರಲ್ಲೇ ಡೆಡ್ ಲೈನ್ ಮುಂದೆ ನಿಂತಿರುತ್ತದೆ.
ಆಧಾರ್ ಕಾರ್ಡ್ ಜೋಡಣೆ ಪ್ರಮುಖ ನಾಲ್ಕು ಡೆಡ್ ಲೈನ್ ಗಳ ಬಗ್ಗೆ ವಿವರ ಇಲ್ಲಿದೆ. ಆದಷ್ಟು ಬೇಗ ಆಧಾರ್ ಜೋಡಣೆ ಮಾಡಿಕೊಳ್ಳಿ ಇಲ್ಲದಿದ್ದರೆ ಬ್ಯಾಂಕ್ ವ್ಯವಹಾರ ಕಷ್ಟವಾಗಲಿದೆ.
ಸರ್ಕಾರಿ ಸವಲತ್ತು ಸೇವೆಯ ಫಲಾಕಾಂಕ್ಷಿಗಳಾಗಿದ್ದರೆ ಆಧಾರ್ ಕಡ್ಡಾಯವಾಗಿ ಜೋಡಣೆ ಮಾಡಿಕೊಳ್ಳಬೇಕಾಗುತ್ತದೆ. ಅನೇಕ ಸೇವೆಗಳಿಗೆ ಆಧಾರ್ ಜೋಡಣೆ ಮಾಡಿಕೊಳ್ಳಲು ಡಿಸೆಂಬರ್ 31, 2017 ಕೊನೆ ದಿನಾಂಕವಾಗಿದೆ. ಮೊಬೈಲ್ ನಂಬರ್ ಜತೆ ಜೋಡಣೆಗೂ ಇದು ಕೊನೆ ದಿನವಾಗಿದೆ.
ಸರ್ಕಾರಿ ಸವಲತ್ತು ಪಡೆಯಲು ಆಧಾರ್ ಕಡ್ಡಾಯವಾಗಬೇಕೇ? ಬೇಡವೇ? ಎಂಬ ಚರ್ಚೆ, ವಾದ, ಪ್ರತಿವಾದ ಸದ್ಯ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಏನು ಆದೇಶ ನೀಡುವುದೋ ಕಾದುನೋಡಬೇಕಿದೆ. ಸದ್ಯಕ್ಕಂತೂ ಆಧಾರ್ ಕಡ್ಡಾಯವಾಗಿರುವ ನಾಲ್ಕು ಪ್ರಮುಖ ಸೇವೆಗಳ ವಿವರ ಮುಂದಿದೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ