ಮೇಘನಾರಾಜ್ - ಚಿರಂಜೀವಿ ಸರ್ಜಾರ ನಿಶ್ಚಿತಾರ್ಥ..!! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ಅಕ್ಟೋಬರ್ 9, 2017

ಮೇಘನಾರಾಜ್ - ಚಿರಂಜೀವಿ ಸರ್ಜಾರ ನಿಶ್ಚಿತಾರ್ಥ..!!

ಸ್ಯಾಂಡಲ್ ವುಡ್ ನಲ್ಲಿ ತಾರಾ ಜೋಡಿಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಲಿದೆ. ಹಿರಿಯ ತಾರಾ ದಂಪತಿ ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್ ಮತ್ತು ನಟ ಅರ್ಜುನ್ ಸರ್ಜಾ ಅಳಿಯ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ನಿಶ್ಚಿತಾರ್ಥ ಇದೇ ಅಕ್ಟೋಬರ್ 22 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎನ್ನಲಾಗಿದೆ.
'ಆಟಗಾರ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದು, ಇವರು ಪ್ರೀತಿ ಕುರಿತಾಗಿ ಗಾಳಿ ಸುದ್ದಿ ಹರಿದಾಡುತ್ತಿದ್ದವು. ಈ ಗಾಳಿ ಸುದ್ದಿಗೆ ತೆರೆ ಬಿದ್ದಿದ್ದು, ಇದೇ ತಿಂಗಳು ನಿಶ್ಚಿತಾರ್ಥ, ವರ್ಷಾಂತ್ಯಕ್ಕೆ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.
'ವಾಯುಪುತ್ರ', 'ವರದನಾಯಕ' ಮೊದಲಾದ ಚಿತ್ರಗಳಲ್ಲಿ ಚಿರಂಜೀವಿ ಸರ್ಜಾ ಅಭಿನಯಿಸಿದ್ದಾರೆ. ಮೇಘನಾ ರಾಜ್ 'ರಾಜಾಹುಲಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಇವರಿಬ್ಬರು ಜೊತೆಯಾಗುತ್ತಿರುವುದು ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ತಾರಾ ಜೋಡಿ ಸೇರ್ಪಡೆಯಾದಂತಾಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here