ಧಾರವಾಡ : 18 ತಿಂಗಳ ಪುಟ್ಟ ಮಗುವನ್ನು ಕೆಂಡದ ಮೇಲೆ ಮಲಗಿಸಿದ ಹೆತ್ತವರು - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ಅಕ್ಟೋಬರ್ 2, 2017

ಧಾರವಾಡ : 18 ತಿಂಗಳ ಪುಟ್ಟ ಮಗುವನ್ನು ಕೆಂಡದ ಮೇಲೆ ಮಲಗಿಸಿದ ಹೆತ್ತವರು

ಧಾರವಾಡದ ಅಲ್ಲಾಪುರದಲ್ಲಿ ಮೊಹರಂ ಸಂದರ್ಭದಲ್ಲಿ ನಡೆದ ಅಮಾನವೀಯ ಆಚರಣೆಯೊಂದು ಬೆಳಕಿಗೆ ಬಂದಿದೆ.
ದರ್ಗಾ ಒಂದರಲ್ಲಿ 18 ತಿಂಗಳ ಪುಟ್ಟ ಮಗುವನ್ನು ಬಾಳೆ ಎಲೆಯಲ್ಲಿ ಸುತ್ತಿ ಬಿಸಿ ಕೆಂಡದ ಮೇಲೆ ಮಲಗಿಸಲಾಗಿತ್ತು. ಕೆಂಡದ ಬಿಸಿ ಹಾಗೂ ಹೊಗೆಯನ್ನು ತಾಳಲಾರದೆ ಮಗು ಚಡಪಡಿಸುತ್ತಿತ್ತು. ಜೋರಾಗಿ ಅಳುತ್ತಿತ್ತು.
ಗಂಡು ಮಗು ಆಗಲಿ ಅಂತಾ 2 ವರ್ಷಗಳ ಹಿಂದೆ ದಂಪತಿ ಹರಕೆ ಹೊತ್ತಿದ್ದರಂತೆ. ತಮ್ಮ ಆಸೆಯನ್ನು ಭಗವಂತ ಈಡೇರಿಸಿದ್ದರಿಂದ ಹರಕೆ ತೀರಿಸಲು ಈ ರೀತಿ ಮಗುವಿಗೆ ಹಿಂಸೆ ನೀಡಿದ್ದಾರೆ. ಕೆಂಡ ಹೆಚ್ಚು ಬಿಸಿ ಇರಲಿಲ್ಲ, ಬೆಂಕಿ ಆರಿಸಲಾಗಿತ್ತು ಅಂತಾ ಪೊಲೀಸರು ಹೇಳ್ತಿದ್ದಾರೆ.
ಈ ವಿಚಿತ್ರ ಆಚರಣೆ ಬಗ್ಗೆ ದೂರು ಕೂಡ ದಾಖಲಾಗಿಲ್ಲ. ಆದ್ರೆ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಲಾಗಿದೆ. ಇಂತಹ ಅಮಾನವೀಯ ದುಷ್ಟ ಆಚರಣೆಗಳನ್ನು ತಡೆಯಲು ಸರ್ಕಾರ ಸಿದ್ಧಪಡಿಸಿರುವ ಹೊಸ ಕಾನೂನು ಜಾರಿಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ ಈ ಕೃತ್ಯ ಬೆಳಕಿಗೆ ಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here