ಭವಿಷ್ಯ 08-10-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶನಿವಾರ, ಅಕ್ಟೋಬರ್ 7, 2017

ಭವಿಷ್ಯ 08-10-2017

ಭವಿಷ್ಯ
ಮೇಷ ರಾಶಿ 
ವಿಶೇಷವಾಗಿ ದಾಟುವಿಕೆಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ- ಆದ್ದರಿಂದ ನೀವು ಕಷ್ಟಪಟ್ಟುಗಳಿಸಿದ ನಿಮ್ಮ ಹಣವನ್ನು ಎಲ್ಲಿ ಹೂಡಬಯಸುತ್ತೀರೆನ್ನುವಲ್ಲಿ ಖಚಿತತೆಯಿರಲಿ. ನಿಮ್ಮ ಕುಟುಂಬ ಸದಸ್ಯರು ಹೇಳಿದ್ದೆಲ್ಲವಕ್ಕೂ ನೀವು ಒಪ್ಪದಿರಬಹುದು - ಆದರೆ ನೀವು ಅವರ ಅನುಭವದಿಂದ ಕಲಿಯಲು ಪ್ರಯತ್ನಿಸಬೇಕು. ಇಂದು ನೀವು ನಿಮ್ಮ ಸಂಗಾತಿಯ ಹೃದಯ ಬಡಿತಗಳ ಜೊತೆಗಿರುತ್ತೀರಿ. ಹೌದು, ಇದು ನೀವು ಪ್ರೀತಿಯಲ್ಲಿದ್ದೀರಿ ಎನ್ನುವ ಸಂಕೇತವಾಗಿದೆ! ಇತರರನ್ನು ಒಪ್ಪಿಸುವ ನಿಮ್ಮ ಸಾಮರ್ಥ್ಯ ನಿಮಗೆ ಸಮೃದ್ಧ ಲಾಭ ತಂದುಕೊಡುತ್ತದೆ. ನೀವು ಜಗಳಗಳ ಸರಣಿಯನ್ನೇ ಹೊಂದಿರುತ್ತಿದ್ದು ನಿಮ್ಮ ಸಂಬಂಧವನ್ನು ಬಿಟ್ಟುಬಿಡುವ ಭಾವನೆಯನ್ನು ಇದು ಮೂಡಿಸುತ್ತದೆ. ಆದರೆ, ಅಷ್ಟು ಸುಲಭವಾಗಿ ಬಿಡಬೇಡಿ.
ವೃಷಭ ರಾಶಿ 
ನಿಮ್ಮ ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ನೀವು ಹೆಚ್ಚೇನೂ ಮಾಡದೇ ಇತರರ ಗಮನ ಸೆಳೆಯಲು ಇದೊಂದು ಪರಿಪೂರ್ಣ ದಿನ. ಪ್ರೀತಿ ಮಿತಿಯಿಲ್ಲದ್ದಾಗಿದೆ, ಅಪಾರವಾಗಿದೆ; ನೀವು ಈ ಮುಂಚೆ ಈ ವಿಷಯಗಳನ್ನು ಕೇಳಿರಬೇಕು. ಆದರೆ ಇಂದು, ನೀವು ಇದನ್ನು ಅನುಭವಿಸುತ್ತೀರಿ. ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಸಂಗಾತಿ ಏನೋ ವಿಶೇಷವಾದದ್ದನ್ನು ಯೋಜಿಸಿರುವುದರಿಂದ ಜೀವನ ಇಂದು ನಿಜವಾಗಿಯೂ ಅದ್ಭುತವಾಗಿರುತ್ತದೆ.
ಮಿಥುನ ರಾಶಿ 
ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವುದು ಆನಂದಮಯವಾಗಿರುತ್ತದೆ. ನೀವು ಎಂದಾದರೂ ಶುಂಠಿ ಮತ್ತು ಗುಲಾಬಿಗಳ ಚಾಕೋಲೇಟ್ ಅನ್ನು ಆಘ್ರಾಣಿಸಿದ್ದೀರೇ? ನಿಮ್ಮ ಪ್ರೇಮ ಜೀವನ ಇಂದು ಈ ರೀತಿಯಾಗಿರುತ್ತದೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಇದು ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಅದ್ಭುತವಾದ ದಿನವಾಗಿದೆ.
ಕರ್ಕ ರಾಶಿ 
ಕಿರಿಕಿರಿ ನಿಮ್ಮ ಮಾನಸಿಕ ಶಾಂತಿಗೆ ತೊಂದರೆ ತಂದರೂ ಒಬ್ಬ ಸ್ನೇಹಿತರು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಪಾರವಾದ ಸಹಾಯ ಮಾಡುತ್ತಾರೆ. ಒತ್ತಡ ತೊಡೆದುಹಾಕಲು ಹಿತವಾದ ಸಂಗೀತವನ್ನು ಆಲಿಸಿ. ಯಶಸ್ಸಿಗೆ ಇಂದಿನ ಸೂತ್ರವೆಂದರೆ ನಾವೀನ್ಯತೆಯಿರವ ಮತ್ತು ಉತ್ತಮ ಅನುಭವ ಹೊಂದಿರುವ ಜನರ ಸಲಹೆಯಂತೆ ನಿಮ್ಮ ಹಣವನ್ನು ಹೂಡುವುದಾಗಿದೆ. ಕಿರಿಯ ಸಹೋದರ ಅಥವಾ ಸಹೋದರಿ ನಿಮ್ಮ ಸಲಹೆ ಪಡೆಯಸಬಹುದು. ಪ್ರಿಯತಮೆಯ ಜೊತೆ ಕೆಲವು ಭಿನ್ನಾಭಿಪ್ರಾಯ ತಲೆದೋರಬಹುದು -ನಿಮ್ಮ ಸಂಗಾತಿಗೆ ನಿಮ್ಮ ಸ್ಥಾನವನ್ನು ತಿಳಿಸಕೊಡುವಲ್ಲಿ ಸಮಸ್ಯೆ ಹೊಂದಿರುತ್ತೀರಿ. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ಚಟುವಟಿಕೆಗಳ ನಿಮ್ಮ ಆಯ್ಕೆ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ಸಂಬಂಧಿಕರಿಂದಾಗಿ ವ್ಯಾಜ್ಯವುಂಟಾಗುವ ಸಾಧ್ಯತೆಯಿದೆ, ಆದರೆ ಕೊನೆಯಲ್ಲಿ ಎಲ್ಲವೂ ಸುಂದರವಾಗಿಯೇ ಕೊನೆಗೊಳ್ಳುತ್ತದೆ.
ಸಿಂಹ ರಾಶಿ 
ಹಣದ ಸ್ಥಾನ ಮತ್ತು ಆರ್ಥಿಕ ಸಮಸ್ಯೆಗಳು ಒತ್ತಡದ ಮೂಲವಾಗಿರುತ್ತವೆ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಪ್ರೀತಿಪಾತ್ರರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಹುಳಿ ಹಿಂಡಬಹುದಾದ ಸಮಸ್ಯೆಗಳನ್ನು ಕೆದಕುವುದನ್ನು ತಪ್ಪಿಸುವುದು ಅತ್ಯುತ್ತಮ. ಏಕಪಕ್ಷೀಯ ವ್ಯಾಮೋಹ ನಿಮ್ಮ ಸಂತೋಷವನ್ನು ಹಾಳುಮಾಡುತ್ತದೆ. ಪ್ರವಾಸ ಮನರಂಜನೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇಂದು ನಿಮ್ಮ ಕಾರ್ಯಸೂಚಿಯಲ್ಲಿರುತ್ತವೆ. ಈ ದಿನ ನಿಮ್ಮ ಸಂಗಾತಿ ಮತ್ತು ಬೇರೆ ಯಾರೂ / ಯಾರಾದ್ದೋ ನಡುವೆ ಆಯ್ಕೆ ಮಾಡುವ ಸಂದಿಗ್ಧತೆಗೆ ನಿಮ್ಮನ್ನು ತಳ್ಳಬಹುದು.
ಕನ್ಯಾ ರಾಶಿ 
ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ನಿಮ್ಮ ಖರ್ಚುಗಳು ನಿಮ್ಮ ಬಜೆಟ್ ಅನ್ನು ಮೀರಬಹುದು ಹಾಗೂ ಅನೇಕ ಪ್ರಗತಿಯಲ್ಲಿರುವ ಯೋಜನೆಗಳನ್ನು ಹಠಾತ್ತನೆ ಸ್ಥಗಿತಗೊಳಿಸಬಹುದು. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಇಂದು ನೀವು ನಿಮ್ಮ ಜೀವನದಲ್ಲಿ ನಿಜವಾದ ಪ್ರೀತಿಯ ಅನುಪಸ್ಥಿತಿಯನ್ನು ಅನುಭವಿಸುತ್ತೀರಿ. ಚಿಂತಿಸಬೇಡಿ, ಕಾಲಕಳೆದಂತೆ ಎಲ್ಲವೂ ಬದಲಾಗುತ್ತದೆ, ನಿಮ್ಮ ಪ್ರಣಯ ಜೀವನವೂ ಸಹ. ಇಂದು ಬೇರೆಯವರಿಗೆ ನೀವು ನೀಡಿದ ನೆರವನ್ನು ಒಪ್ಪಿಕೊಂಡಾಗ ನೀವೇ ಕೇಂದ್ರಬಿಂದುವಾಗಿರುತ್ತೀರಿ. ನಿಮ್ಮ ಸಂಗಾತಿ ನಿಮ್ಮ ಒತ್ತಡದ ಕಾರ್ಯಬಾಹುಳ್ಯದಿಂದಾಗಿ ನಿಮ್ಮ ನಿಷ್ಠೆಯ ಮೇಲೆ ಅನುಮಾನ ಪಡಬಹುದು, ಆದರೆ ದಿನದ ಕೊನೆಯಲ್ಲಿ ಅವರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಿಮ್ಮನ್ನು ಆಲಂಗಿಸುತ್ತಾರೆ.
ತುಲಾ ರಾಶಿ 
ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ವೆಚ್ಚಗಳ ಮೇಲೆ ಮಿತಿ ಹೇರಿ. ಅತಿಸ್ನೇಹಿ ಅಪರಿಚಿತರಿಂದ ಸೂಕ್ತ ದೂರವನ್ನು ಕಾಯ್ದುಕೊಳ್ಳಿ. ಪ್ರೀತಿ ಮತ್ತು ಪ್ರಣಯ ನಿಮ್ಮನ್ನು ಸಂತೋಷದ ಮನೋಭಾವದಲ್ಲಿಡುತ್ತದೆ. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ. ಒಳ್ಳೆಯ ಭೋಜನದ ಜೊತೆಗಿನ ಉತ್ತಮ ರಾತ್ರಿಯ ನಿದ್ರೆಯನ್ನು ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ನಿರೀಕ್ಷಿಸಲಾಗಿದೆ.
ವೃಶ್ಚಿಕ ರಾಶಿ 
ನಿಮ್ಮ ಸಂತೋಷದ ಪ್ರಕೃತಿ ಇತರರಿಗೆ ಸಂತೋಷ ತರುತ್ತದೆ. ದೀರ್ಘಕಾಲದ ದೃಷ್ಟಿಕೋನದಿಂದ ಹೂಡಿಕೆ ಮಾಡಬೇಕು. ನೀವು ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜೊತೆ ಕಳೆಯಲು ಸಾಕಷ್ಟು ಸಮಯ ಸಿಗುತ್ತದೆ. ನಿಮ್ಮ ಸಂಗಾತಿಯ ಕೆಟ್ಟ ಆರೋಗ್ಯದಿಂದಾಗಿ ಇಂದು ಪ್ರಣಯಕ್ಕೆ ಧಕ್ಕೆಯಾಗುತ್ತದೆ. ನೀವು ಇಂದು ಜನರೊಡನೆ ಬೆರೆಯಲು ಬಿಡುವಿನ ವೇಳೆಯನ್ನು ಹೊಂದಿದ್ದೀರಿ ಮತ್ತು ನೀವು ಅಧಿಕವಾಗಿ ಮಾಡಬಯಸುವ ವಿಷಯಗಳನ್ನು ಮಾಡುತ್ತೀರಿ. ಸಂಬಂಧಿಗಳು ಇಂದು ನಿಮ್ಮ ಸಂಗಾತಿಯ ಜೊತೆಗೆ ವಾದಕ್ಕೆ ಕಾರಣವಾಗಬಹುದು.
ಧನು ರಾಶಿ 
ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದಾದರೂ ನಿಮ್ಮ ಬದುಕನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಹಾಗೂ ಜೀವನದ ರಕ್ಷಣೆ ನಿಮ್ಮ ನಿಜವಾದ ಹೊಣೆಗಾರಿಕೆಯೆಂದು ಅರ್ಥ ಮಾಡಿಕೊಳ್ಳಿ. ನೀವು ಸ್ವಲ್ಪ ಹೆಚ್ಚುವರಿ ಹಣ ಮಾಡಲು ಯೋಜಿಸುತ್ತದ್ದಲ್ಲಿ ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಸಾಮಾಜಿಕ ಚಟುವಟಿಕೆಗಳು ಆನಂದಮಯವಾಗಿದ್ದರೂ ನೀವು ಇತರರೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬಾರದು. ನಿಮ್ಮ ಪ್ರೀತಿಪಾತ್ರರ ಅತೃಪ್ತಿಗೆ ನಿಮ್ಮ ನಗು ನಿಮ್ಮ ಅತ್ಯುತ್ತಮ ಔಷಧವಾಗಿದೆ. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ಒದಗಿಸುತ್ತಾರೆ. ನಿಮ್ಮ ಸಂಗಾತಿಯು ಇಂದು ಆ ಆರಂಭಿಕ ಹಂತದ ಪ್ರೀತಿ ಮತ್ತು ಪ್ರಣಯದ ಗುಂಡಿಯನ್ನು ಒತ್ತುತ್ತಾಳೆ.
ಮಕರ ರಾಶಿ 
ನಿಮ್ಮನ್ನು ನೀವೇ ನೋಡಿಕೊಳ್ಳುವ ಬಯಕೆಗೆ ಇತರರ ಅಗತ್ಯಗಳು ಕಡಿವಾಣ ಹಾಕುತ್ತವೆ. ನಿಮ್ಮ ಭಾವನೆಗಳನ್ನು ತಡೆಹಿಡಿಯಬೇಡಿ ಹಾಗೂ ವಿಶ್ರಾಂತಿ ಪಡೆಯುವ ಸಲುವಾಗಿ ನೀವು ಇಷ್ಟಪಡುವುದನ್ನೇನಾದರೂ ಮಾಡಿ. ತರಾತುರಿಯಲ್ಲಿ ಹೂಡಿಕೆಗಳನ್ನು ಮಾಡಬೇಡಿ - ನೀವು ಎಲ್ಲಾ ಸಾಧ್ಯವಿರುವ ಕೋನಗಳಿಂದ ಹೂಡಿಕೆಯನ್ನು ಪರಿಶೀಲಿಸದೇ ಹೋದರೆ ನಷ್ಟ ಖಚಿತ. ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಸಹೋದರರು ನಿಮ್ಮ ಅಗತ್ಯಗಳಿಗೆ ಬೆಂಬಲ ನೀಡುತ್ತಾರೆ. ಉಡುಗೊರೆಗಳು / ಪಾರಿತೋಷಕಗಳೂ ಸಹ ಇಂದು ನಿಮ್ಮ ಪ್ರಿಯತಮೆಯ ಮನಸ್ಸು ಬದಲಿಸುವ ಸಾಧ್ಯವಾಗದಿರಬಹುದು. ಪ್ರವಾಸ ಮನರಂಜನೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇಂದು ನಿಮ್ಮ ಕಾರ್ಯಸೂಚಿಯಲ್ಲಿರುತ್ತವೆ. ನೀವು ಇಂದು ಒಂದು ಪ್ರಮಾದ ಮಾಡಬಹುದಾಗಿದ್ದು ಇದು ನಿಮ್ಮ ವೈವಾಹಿಕ ಜೀವನಕ್ಕೆ ಧಕ್ಕೆ ತರಬಹುದು.
ಕುಂಭ ರಾಶಿ 
ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಲು ಆಸಕ್ತಿದಾಯಕವಾದದ್ದನ್ನೇನಾದರೂ ಓದುವ ಮೂಲಕ ಸ್ವಲ್ಪ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ. ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಪ್ರೇಮ ಜೀವನ ರೋಮಾಂಚಕವಾಗಿರುತ್ತದೆ. ಅತಿ ವೇಗದ ಚಾಲನೆ ಮತ್ತು ಅಪಾಯ ರಸ್ತೆ ಸಂದರ್ಭದಲ್ಲಿ ಸೇವಿಸಬಾರದು. ಇಂದು ನೀವು ಮತ್ತೆ ನಿಮ್ಮ ಸಂಗಾತಿಯ ಪ್ರೀತಿಯಲ್ಲಿ ಬೀಳಬಹುದು ಹಾಗೂ ಅವರು ಅದಕ್ಕೆ ಅರ್ಹರಾಗಿರುತ್ತಾರೆ.
ಮೀನ ರಾಶಿ 
ನಿಮ್ಮ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ನೀವು ಕಮಿಷನ್‌ಗಳಿಂದ – ಡಿವಿಡೆಂಡ್‌ಗಳಿಂದ- ಅಥವಾ ರಾಯಧನಗಳಿಂದ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಸಕಾಲಿಕ ಸಹಾಯ ಇನ್ನೊಬ್ಬರ ಜೀವ ಉಳಿಸುತ್ತದೆ. ಈ ಸುದ್ದಿ ನಿಮ್ಮ ಕುಟುಂಬದ ಸದಸ್ಯರಿಗೆ ಹೆಮ್ಮೆ ತರುತ್ತದೆ ಮತ್ತು ಅವರಿಗೆ ಸ್ಪೂರ್ತಿಯಾಗುತ್ತದೆ. ಪ್ರಣಯದ ಅವಕಾಶಗಳಿವೆ - ಆದರೆ ಅವು ಕ್ಷಣಿಕವಾಗಿರುತ್ತವೆ. ನಿಮ್ಮ ನೋಟ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲು ಮಾಡಿದ ಯತ್ನಗಳು ನಿಮಗೆ ತೃಪ್ತಿ ನೀಡುತ್ತವೆ. ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಎಲ್ಲವೂ ಸಂತೋಷಕರವಾಗಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here