ತಾಜ್ ಮಹಲ್ ವೀಕ್ಷಿಸಲು ಮೂರು ಗಂಟೆ ಸಮಯಾವಕಾಶ ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಮಂಗಳವಾರ, ಮಾರ್ಚ್ 27, 2018

ತಾಜ್ ಮಹಲ್ ವೀಕ್ಷಿಸಲು ಮೂರು ಗಂಟೆ ಸಮಯಾವಕಾಶ ...!

ಹೊಸದಿಲ್ಲಿ, ಮಾ.28: ಪ್ರತಿ ಪ್ರವಾಸಿಗನಿಗೆ ವಿಶ್ವ ಪರಂಪರೆಯ ಸ್ಮಾರಕ ತಾಜ್ ಮಹಲ್ ವೀಕ್ಷಿಸಲು ಮೂರು ಗಂಟೆ ಸಮಯಾವಕಾಶ ನೀಡುವ ಕುರಿತು ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ) ನಿರ್ಧರಿಸಿದೆ.
ಪ್ರವಾಸಿಗ ತಾಜ್‌ಮಹಲ್ ವೀಕ್ಷಣೆಗೆ ಮೂರು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡರೆ ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ. ಇದು ಎಲ್ಲ ಪ್ರವಾಸಿಗರಿಗೆ ಅನ್ವಯವಾಗುತ್ತದೆ.
ಎಎಸ್‌ಐ ಈ ಕುರಿತು ಸಾರ್ವಜನಿಕ ಸೂಚನೆಯೊಂದನ್ನು ಹೊರಡಿಸಿದೆ. ಪ್ರವೇಶ ಹಾಗೂ ನಿರ್ಗಮನ ದ್ವಾರದಲ್ಲಿ ಟಿಕೆಟ್‌ಗಳ ಸಮಯ ಪರೀಕ್ಷಿಸಲು ನಮಗೆ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿದೆ. ಹೀಗಾಗಿ ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಪ್ರತಿದಿನ 50,000ಕ್ಕೂ ಅಧಿಕ ಪ್ರವಾಸಿಗರು ತಾಜ್ ಮಹಲ್ ವೀಕ್ಷಣೆಗೆ ದೇಶ-ವಿದೇಶಗಳಿಂದ ಆಗಮಿಸುತ್ತಾರೆ. ಸ್ಮಾರಕ ಜಾಗ ಸೀಮಿತವಾಗಿದ್ದು, ಅದನ್ನು ವಿಸ್ತರಿಸಲು ಸಾಧ್ಯವಿಲ್ಲ. ಲಭ್ಯವಿರುವ ಜಾಗದಲ್ಲಿ ಪ್ರವಾಸಿಗರನ್ನು ನಿಭಾಯಿಸಬೇಕಾಗಿದೆ. ಕೆಲವೊಮ್ಮೆ ಪ್ರವಾಸಿಗರನ್ನು ನಿಯಂತ್ರಿಸಲು ತುಂಬಾ ಕಷ್ಟವಾಗುತ್ತದೆ. ಇದು ನಮಗೆ ಹೆಚ್ಚುವರಿ ಒತ್ತಡ ಉಂಟು ಮಾಡುತ್ತದೆ. ಟಿಕೆಟ್‌ಗಳ ಮೇಲೆ ಸಮಯಾವಕಾಶ ನಿಗದಿಯಿಂದ ಈ ಸಮಸ್ಯೆ ನಿವಾರಿಸಿಕೊಳ್ಳಬಹುದು ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಈಗ ತಾಜ್‌ಮಹಲ್ ವೀಕ್ಷಣೆಗೆ ಪ್ರತಿಯೊಬ್ಬ ಭಾರತೀಯನಿಗೆ ಟಿಕೆಟ್ ಶುಲ್ಕ 40 ರೂ., ಸಾರ್ಕ್ ರಾಷ್ಟ್ರದವರಿಗೆ 530 ರೂ. ಹಾಗೂ ಇತರ ವಿದೇಶಿ ಪ್ರವಾಸಿಗರಿಗೆ 1,000 ರೂ. ನಿಗದಿಪಡಿಸಲಾಗಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here