ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟಿ ಜಯಂತಿ ಸೋಮವಾರ ಉಸಿರಾಟದ ತೊಂದರೆಯಿಂದಾಗಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಯಾಂಡಲ್ ವುಡ್ ಹಿರಿಯ ಕಿರಿಯ ಕಲಾವಿದರೆಲ್ಲಾ ಆಸ್ಪತ್ರೆಯತ್ತ ಆಗಮಿಸಿದರು. ಸದ್ಯ ಜಯಂತಿ ಆರೋಗ್ಯ ಸುಧಾರಿಸುತ್ತಿದೆ. ಆಸ್ಪತ್ರೆಗೆ ದಾಖಲಿಸಿದಾಗ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು, ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ನಾಲ್ಕೈದು ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುವ ವಿಶ್ವಾಸವನ್ನು ನಟಿ ಭಾರತಿ ವಿಷ್ಣುವರ್ಧನ್ ವ್ಯಕ್ತಪಡಿಸಿದರು.
ನಟಿ ಜಯಂತಿಗೆ ವಿಕ್ರಂ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ಸತೀಶ್ ಚಿಕಿತ್ಸೆ ನೀಡುತ್ತಿದ್ದಾರೆ. ಜಯಂತಿ ಅವರ ಆರೋಗ್ಯ ವಿಚಾರಿಸಲು ನಟಿ ತಾರಾ, ಹಿರಿಯ ನಟಿಯರಾದ ಲೀಲಾವತಿ, ಸರೋಜಾ ದೇವಿ, ಗಿರಿಜಾ ಲೋಕೇಶ್, ಹೇಮ ಚೌಧರಿ, ದೊಡ್ಡಣ್ಣ ಭೇಟಿ ನೀಡಿದರು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ