ಭವಿಷ್ಯ 28-03-2018 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಮಂಗಳವಾರ, ಮಾರ್ಚ್ 27, 2018

ಭವಿಷ್ಯ 28-03-2018

ಭವಿಷ್ಯ

ಮೇಷ ರಾಶಿ
ನೀವು ಇತರರೊಡನೆ ನಿಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಂತೆ ನಿಮ್ಮ ಆರೋಗ್ಯ ಅರಳುತ್ತದೆ. ಆದರೆ ಇದನ್ನು ನಿರ್ಲಕ್ಷಿಸುವುದು ನಿಮಗೆ ತೊಂದರೆ ತರುತ್ತದೆ. ಹಠಾತ್ ಅನಿರೀಕ್ಷಿತ ವೆಚ್ಚಗಳು ಆರ್ಥಿಕ ಒತ್ತಡ ತರಬಹುದು. ಇಂದು ನಿಮಗೆ ಗೊತ್ತಿರುವವರ ಮೇಲೆ ನೀವು ಯಾವುದೇ ನಿರ್ಧಾರ ಹೇರಲು ಪ್ರಯತ್ನಿಸಿದಲ್ಲಿ ನೀವು ನಿಮ್ಮದೇ ಹಿತಾಸಕ್ತಿಗೆ ಧಕ್ಕೆ ತರುತ್ತೀರಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಪರಿಸ್ಥಿತಿಯನ್ನು ತಾಳ್ಮೆಯಿಂದ ನಿರ್ವಹಿಸುವುದೊಂದೇ ದಾರಿ. ಯಾರಾದರೂ ನಿಮ್ಮ ಹೆಸರು ಕೆಡಿಸಲು ಪ್ರಯತ್ನಿಸಬಹುದದ್ದರಿಂದ ಜಾಗರೂಕರಾಗಿರಿ. ಇಂದು ವಿಶ್ರಾಂತಿ ಪಡೆಯಲು ಸಮಯವಿಲ್ಲ ಬಾಕಿಯಿರುವ ಕೆಲಸಗಳು ನಿಮ್ಮನ್ನು ವ್ಯಸ್ತವಾಗಿಡುತ್ತವೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ನಿಮ್ಮ ಸಂಗಾತಿ ನಿಮ್ಮ ಜೊತೆಗಿರುವ ಬಗ್ಗೆ ನಿಮಗೆ ಕೆಲವು ಅಷ್ಟೇನೂ ಒಳ್ಳೆಯದಲ್ಲದ ವಿಷಯಗಳನ್ನು ಹೇಳಬಹುದು.
ವೃಷಭ ರಾಶಿ
ಇತ್ತೀಚೆಗೆ ನಿಮ್ಮಲ್ಲಿ ಕೆಲವರು ಓವರ್‌ಟೈಮ್ ಮಾಡುತ್ತಿರುತ್ತಾರೆ ಹಾಗೂ ನಿಮ್ಮ ಚೈತನ್ಯ ಉಡುಗುತ್ತಿರುತ್ತದೆ- ಇಂದು ನೀವು ಒತ್ತಡ ಹಾಗೂ ಸಂದಿಗ್ಧತೆಯನ್ನು ಬಯಸುವುದಿಲ್ಲ. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ಸೋದರಿಯ ಪ್ರೀತಿ ನಿಮ್ಮನ್ನು ಉತ್ತೇಜಿಸುತ್ತದೆ. ಅದರೆ ನೀವು ಚಿಕ್ಕ ವಿಷಯಳಿಗೆ ತಾಳ್ಮೆ ಕಳೆದುಕೊಳ್ಳಬಾರದು ಏಕೆಂದರೆ ಅದು ನಿಮ್ಮ ಆಸಕ್ತಿಗಳನ್ನು ಹಾಳು ಮಾಡುತ್ತದೆ. ಪ್ರಣಯ ನಿಮ್ಮ ಪ್ರೀತಿಪಾತ್ರರು ಇಂದು ಅತಿಯಾದ ಬೇಡಿಕೆಗಳನ್ನಿಡುವುದರಿಂದ ಪ್ರಣಯದಲ್ಲಿ ಹಿನ್ನೆಡೆಯಿರುತ್ತದೆ. ಕೆಲಸದಲ್ಲಿನ ಒತ್ತಡ ಇಂದು ಆಯಾಸ ಉಂಟುಮಾಡಬಹುದು. ನಿರ್ಲಕ್ಷಿಸಲು ಪ್ರಯತ್ನಿಸಿ. ಪ್ರವಾಸಗಳು ಮತ್ತು ಪ್ರಯಾಣಗಳು ಆನಂದ ತರುತ್ತವೆ ಮತ್ತು ಹೆಚ್ಚು ಶಿಕ್ಷಣ ನೀಡುತ್ತವೆ. ಇಂದು ನಿಮ್ಮ ಜೀವನ ಸಂಗಾತಿಯ ವಟಗುಟ್ಟುವಿಕೆಯಿಂದಾಗಿ ನಿಮಗೆ ಸಿಟ್ಟು ಬರಬಹುದು, ಆದರೆ ಅವನು / ಅವಳು ನಿಮಗೆ ನಿಜವಾಗಿಯೂ ಏನಾದರೂ ಒಳ್ಳೆಯದನ್ನು ಮಾಡುತ್ತಾರೆ.
ಮಿಥುನ ರಾಶಿ
ಒತ್ತಡ ಸಣ್ಣ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಸ್ಯವನ್ನು ಆಧರಿಸಿದ ಊಹಾಪೋಹಗಳಿಗೆ ಕಿವಿಗೊಡಬೇಡಿ ಒಂದು ಹಳೆಯ ಸಂಪರ್ಕ ನಿಮಗೆ ಕೆಲವು ಸಮಸ್ಯೆಗಳನ್ನು ಸೃಷ್ಟಿಸಬಹುದು ಏಕಪಕ್ಷೀಯ ವ್ಯಾಮೋಹ ಇಂದು ಹಾನಿಕಾರಕವೆಂದು ಸಾಬೀತಾಗುತ್ತದೆ. ಸಹ ಕಾರ್ಮಿಕರು ಮತ್ತು ಕೈಕೆಳಗೆ ಕೆಲಸ ಮಾಡುವವರು ಚಿಂತೆ ಹಾಗೂ ಒತ್ತಡದ ಕ್ಷಣಗಳನ್ನು ತರುತ್ತಾರೆ. ಅನಕೂಲಕರ ಗ್ರಹಗಳು ಇಂದು ನೀವು ಸಂತೋಷ ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ. ನಿಮ್ಮ ಸಂಗಾತಿಯ ಇಂದು ನಿಮಗೆ ನಷ್ಟ ಉಂಟುಮಾಡಬಹುದು.
ಕರ್ಕ ರಾಶಿ
ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ದೊಡ್ಡ ಗುಂಪಿನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮನರಂಜನಾತ್ಮಕವಾಗಿರುತ್ತದೆ- ಆದರೆ ನಿಮ್ಮ ವೆಚ್ಚಗಳು ಹಚ್ಚಾಗುತ್ತವೆ. ಪೋಷಕರ ಆರೋಗ್ಯದ ಬಗೆಗಿನ ನಿಮ್ಮ ನಿರ್ಲಕ್ಷ್ಯ ಅಪಾಯಕಾರಿಯಾಗಬಹುದು ಮತ್ತು ಅವರ ಅನಾರೋಗ್ಯವನ್ನು ಹೆಚ್ಚಿಸಬಹುದು. ತಕ್ಷಣ ಪರಿಹಾರ ನೀಡಲು ವೈದ್ಯರ ಸಲಹೆ ಪಡೆಯಿರಿ. ಸ್ನೇಹ ಆಳವಾದ ಹಾಗೆ ಪ್ರಣಯ ನಿಮ್ಮೆಡೆ ಬರುತ್ತದೆ. ನಿಮಗೆ ಇತ್ತೀಚಿನ ತಂತ್ರಜ್ಞಾನಗಳನ್ನು ಮತ್ತು ಕೌಶಲಗಳನ್ನು ಕಲಿಯಲು ಸಹಾಯವಾಗುವ ಅಲ್ಪಾವಧಿ ಕಾರ್ಯಕ್ರಮಗಳಿಗೆ ದಾಖಲಾಗಿ. ನೀವು ಅತುರದ ನಿರ್ಣಯಗಳನ್ನು ಕೈಗೊಂಡರೆ ಮತ್ತು ಅನಗತ್ಯ ಕ್ರಮಗಳನ್ನು ಕೈಗೊಂಡರೆ ಈ ದಿನ ನಿಮ್ಮನ್ನು ನಿರಾಸೆಗೊಳಿಸುತ್ತದೆ. ಕೆಲಸದಲ್ಲಿ ನಿಮ್ಮ ಮೇಲಿನವರು ಇಂದು ದೇವದೂತರಂತೆ ಕೆಲಸ ಮಾಡುವಂತೆ ಕಾಣುತ್ತದೆ.
ಸಿಂಹ ರಾಶಿ
ಧ್ಯಾನ ಮತ್ತು ಆತ್ಮ ಸಾಕ್ಷಾತ್ಕಾರ ಪ್ರಯೋಜನಕಾರಿಯಾಗಬಹುದು. ನಿಮ್ಮ ಅವಾಸ್ತವಿಕ ಯೋಜನೆ ಹಣದ ಕೊರತೆಗೆ ಕಾರಣವಾಗುತ್ತದೆ. ಸ್ನೇಹಿತರು ಇಂದು ರಾತ್ರಿ ರೋಮಾಂಚಕವಾದದ್ದನ್ನೇನಾದರೂ ಯೋಜಿಸಿ ನಿಮಗೆ ಆನಂದ ತರುತ್ತಾರೆ. ಪ್ರೀತಿ ಮತ್ತು ಪ್ರಣಯ ನಿಮ್ಮನ್ನು ಸಂತೋಷದ ಮನೋಭಾವದಲ್ಲಿಡುತ್ತದೆ. ಇಂದು ನೀವು ಕೇಂದ್ರಬಿಂದುವಾಗಿರುತ್ತೀರಿ- ಮತ್ತು ಯಶಸ್ಸು ನಿಮ್ಮ ನಿಲುಕಿನೊಳಗಿದೆ. ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಿ. ಕೆಲಸದಲ್ಲಿ ನಿಮ್ಮ ಮೇಲಿನವರು ಇಂದು ದೇವದೂತರಂತೆ ಕೆಲಸ ಮಾಡುವಂತೆ ಕಾಣುತ್ತದೆ.
ಕನ್ಯಾ ರಾಶಿ
ಭಾವನಾತ್ಮಕವಾಗಿ ಇದು ಒಳ್ಳೆಯ ದಿನವಾಗಿರುವುದಿಲ್ಲ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಮನೆಯಲ್ಲಿನ ಕೆಲವು ಬದಲಾವಣೆಗಳು ಪ್ರೀತಿಪಾತ್ರರೊಡನೆ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂದು ನಿಮ್ಮ ಹೃದಯ ಬಡಿತವು ನಿಮ್ಮ ಸಂಗಾತಿಯೊಡನೆ ಲಯದಲ್ಲಿ ಪ್ರೀತಿಯ ಸಂಗೀತವನ್ನು ನುಡಿಸುತ್ತದೆ. ನಿಮ್ಮ ಬಾಸ್ ಗಮನಿಸುವ ಮೊದಲೇ ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಿ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ, ನಿಮ್ಮ ಸಂಗಾತಿ ಇಂದು ನಿಮಗೆ ಇದನ್ನು ಸಾಬೀತು ಮಾಡುತ್ತಾಳೆ.
ತುಲಾ ರಾಶಿ
ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು ಮತ್ತು ನಿಮ್ಮ ಭಯವನ್ನು ಸಾಧ್ಯವಾದಷ್ಟೂ ಬೇಗ ತೊಡೆದುಹಾಕಬೇಕು ಏಕೆಂದರೆ ಇವು ತಕ್ಷಣವೇ ನಿಮ್ಮ ಆರೋಗ್ಯವನ್ನು ಬಾಧಿಸಬಹುದು ಮತ್ತು ಒಳ್ಳೆಯ ಆರೋಗ್ಯವನ್ನು ಅನುಭವಿಸುವ ನಿಮ್ಮ ಹಾದಿಯಲ್ಲಿ ಅಡ್ಡ ಬರಬಹುದು. ಯೋಜಿತವಲ್ಲದ ಮೂಲಗಳಿಂದ ಹಣದ ಲಾಭ ನಿಮ್ಮ ದಿನವನ್ನು ಬೆಳಗಿಸುತ್ತದೆ. ಕುಟುಂಬದವರು, ಮಕ್ಕಳು ಮತ್ತು ಸ್ನೇಹಿತರೊಂದಿಗೆ ಕಳೆದ ಸಮಯ ನಿಮ್ಮ ಚೈತನ್ಯವನ್ನು ಮರಳಿ ನೀಡಲು ಮುಕ್ತವಾಗಿರುತ್ತದೆ. ಸ್ನೇಹ ಕಳೆದುಕೊಳ್ಳುವ ಸಾಧ್ಯತೆಗಳು ಇಂದು ಹೆಚ್ಚಾಗಿರುವುದರಿಂದ ಎಚ್ಚರಿಕೆಯಿಂದಿರಿ. ನೀವು ನಿರಾಸೆ ಅನುಭವಿಸುತ್ತೀರಿ – ಅದೇಕೆಂದರೆ ನೀವು ಬಯಸುತ್ತಿದ್ದ ಗುರುತಿಸುವಿಕೆ ಮತ್ತು ಪ್ರತಿಫಲಗಳು ಮುಂದೂಡಲ್ಪಡುತ್ತವೆ. ನೀವು ಇಂದು ಜನರೊಡನೆ ಬೆರೆಯಲು ಬಿಡುವಿನ ವೇಳೆಯನ್ನು ಹೊಂದಿದ್ದೀರಿ ಮತ್ತು ನೀವು ಅಧಿಕವಾಗಿ ಮಾಡಬಯಸುವ ವಿಷಯಗಳನ್ನು ಮಾಡುತ್ತೀರಿ. ನಿಮ್ಮ ಸಂಗಾತಿ ಇಂದು ನಿಮ್ಮನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸಬಹುದಾಗಿದ್ದು ಇದರಿಂದ ನಿಮಗೆ ಸ್ವಲ್ಪ ನೋವಾಗಬಹುದು.
ವೃಶ್ಚಿಕ ರಾಶಿ
ಏನೇ ಆದರೂ ಶಾಂತತೆ ಕಳೆದಕೊಳ್ಳಬೇಡಿ, ಏಕೆಂದರೆ ಇದು ಶಾಶ್ವತ ಬಿರುಕನ್ನು ಉಂಟುಮಾಡುತ್ತವೆ. ನೀವು ಪ್ರಯತ್ನಿಸಿದಲ್ಲಿ ನೀವು ಸಾಮರಸ್ಯ ಹಾಗೂ ಶಾಂತಿಯನ್ನು ಉಳಿಸಿಕೊಳ್ಳಬಹುದು. ಒಂದು ವಿಭಜಿತ ಮನೆ ನಿಲ್ಲಲು ಸಾಧ್ಯವಿಲ್ಲ. ಹಣಕಾಸು ಸ್ಥಿತಿ ಊಹಾಪೋಹ ಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ. ಕುಟುಂಬದಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯ ಆರೋಗ್ಯ ಸ್ವಲ್ಪ ಒತ್ತಡಕ್ಕೆ ಕಾರಣವಾಗಬಹುದು. ಪ್ರೀತಿ ಇಂದ್ರಿಯಗಳ ಮಿತಿಯನ್ನು ಮೀರಿದ್ದಾಗಿದೆ, ಆದರೆ ನಿಮ್ಮ ಇಂದ್ರಿಯಗಳು ಇಂದು ಪ್ರೀತಿಯ ಭಾವಪರವಶತೆಯನ್ನು ಅನುಭವಿಸುತ್ತವೆ. ದಿಟ್ಟ ಕ್ರಮಗಳು ಮತ್ತು ನಿರ್ಧಾರಗಳು ಅನುಕೂಲಕರ ಲಾಭಗಳನ್ನು ತರುತ್ತದೆ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ಇಂದು, ನಿಮ್ಮ ಸಂಗಾತಿಯು ಪ್ರಪಂಚದಲ್ಲಿ ನೀವೊಬ್ಬರೇ ಇರುವ ಹಾಗೇ ನಡೆದುಕೊಳ್ಳುತ್ತಾರೆ.
ಧನು ರಾಶಿ
ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯದಿರಿ. ಆತ್ಮವಿಶ್ವಾಸದ ನಿಮ್ಮನ್ನು ಆವರಿಸಲು ಬಿಡಬೇಡಿ, ಏಕೆಂದರೆ ಅದು ಕೇವಲ ನಿಮ್ಮ ಸಮಸ್ಯೆಯನ್ನು ಮಾತ್ರ ಸಂಕೀರ್ಣಗೊಳಿಸುತ್ತದೆ ಮತ್ತು ನಿಮ್ಮ ಪ್ರಗತಿಯನ್ನು ಹಾಳುಗೆಡವಬಲ್ಲದು. ನಿಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ನಿಮ್ಮನ್ನು ವ್ಯಕ್ತಪಡಿಸಿ ಮತ್ತು ಸಮಸ್ಯೆಯನ್ನು ನಿಭಾಯಿಸಲು ಹೃತ್ಪೂರ್ವಕವಾದ ನಗು ಚೆಲ್ಲಿ. ಹಣಕಾಸನ್ನು ನಿರ್ವಹಿಸುವಾಗ ಹೆಚ್ಚುವರಿ ಎಚ್ಚರಿಕೆ ಅವಶ್ಯಕವಾಗಿದೆ. ಇಂದು ಕುಟುಂಬದ ಒಬ್ಬ ಸದಸ್ಯರು ನಿಮಗೆ ಕೋಪ ಬರಿಸಬಹುದು- ಪರಿಸ್ಥಿತಿ ಕೈಮೀರುವ ಮೊದಲು ಮಿತಿಗಳನ್ನು ಅಳವಡಿಸಲು ಮರೆಯಬೇಡಿ. ಪ್ರೇಮ ಜೀವನ ಭರವಸೆ ತರುತ್ತದೆ ಕಚೇರಿ ಪರಿಸರವು ಇಂದು ನಿಮ್ಮೊಂದಿಗೆ ತುಂಬಾ ಒರಟಾಗಬಹುದು. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಇಂದು ನೀವು ನಿಮ್ಮ ಸಂಗಾತಿಯ ಜೊತೆಗೆ ಒಂದು ಸಂತೋಷಕರ ಮಾತುಕತೆಯನ್ನು ಹೊಂದುತ್ತೀರಿ, ಮತ್ತು ನೀವು ಪರಸ್ಪರರನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಅರಿತುಕೊಳ್ಳುತ್ತೀರಿ.
ಮಕರ ರಾಶಿ
ಸ್ವಲ್ಪ ಮನರಂಜನೆಗಾಗಿ ನಿಮ್ಮ ಕಚೇರಿಯಿಂದ ಬೇಗನೇ ಹೊರಬರಲು ಪ್ರಯತ್ನಿಸಿ. ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ಇಂದು ಮನೆಯಲ್ಲಿ ನೀವು ಇತರರನ್ನು ಮುಜುಗರಪಡಿಸದೇ ನಿಮ್ಮ ಕುಟುಂಬದ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಯತ್ನಿಸಬೇಕು. ಚಿಂತಿಸಬೇಡಿ, ನಿಮ್ಮ ದುಃಖ ಇಂದು ಮಂಜುಗಡ್ಡೆಯ ಹಾಗೆ ಕರಗುತ್ತದೆ. ಇಂದು ನೀವು ಸಾಮಾನ್ಯವಾಗಿ ನಿಗದಿಪಡಿಸುವುದಕ್ಕಿಂತ ಹೆಚ್ಚಾಗಿ ನಿಮ್ಮ ನಿರೀಕ್ಷೆಗಳನ್ನು ಅಳವಡಿಸಿಕೊಳ್ಳುವ ಪ್ರವೃತ್ತಿ ಹೊಂದಿರುತ್ತೀರಿ – ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಂತೆ ಇರದಿದ್ದಲ್ಲಿ ನಿರಾಸೆ ಹೊಂದಬೇಡಿ. ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸಂಗಾತಿ ನಿಮ್ಮ ಹೃದಯವನ್ನು ಆಲಿಸಲು ನಿಮಗೆ ಸಮಯ ಸಾಕಷ್ಟು ನೀಡುತ್ತಾರೆ.
ಕುಂಭ ರಾಶಿ
ನಿಮ್ಮ ಮಗುವಿಗೆ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಛೀಮಾರಿ ಹಾಕಬೇಡಿ. ಬದಲಿಗೆ ನೀವು ಮುಂದಿನ ಬಾರಿ ಚೆನ್ನಾಗಿ ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕು. ನೀವು ಎಲ್ಲರೂ ಸಮಾನರಲ್ಲ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು. ಹೂಡಿಕೆಯ ಬಗೆಗಿನ ನಿರ್ಣಾಯಕ ನಿರ್ಧಾರಗಳನ್ನು ಇನ್ನೊಂದು ದಿನಕ್ಕೆ ಮುಂದೂಡಬೇಕು. ಇಂದು ನೀವು ಮನೆಯಲ್ಲಿ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಪ್ರಭಾವವನ್ನು ಬಳಸಬೇಕಾಗುತ್ತದೆ. ಪ್ರೇಮ ಜೀವನ ಕಡಿಮೆ ಚೈತನ್ಯದಾಯಕವಾಗಿರುವ ಸಾಧ್ಯತೆಯಿದೆ. ನಿಮ್ಮ ಪಾಲುದಾರರು ಅವರ ಮಾತು ನಡೆಸದಿದ್ದರೆ ಬೇಸರಿಸಿಕೊಳ್ಳಬೇಡಿ-ನೀವು ಕುಳಿತುಕೊಂಡು ಮಾತನಾಡಬೇಕಾದ ಅಗತ್ಯವಿದೆ. ಸಂವಹನವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ನೀವು ಯಾರಾದ್ದಾದರೂ ಜೊತೆಗಿದ್ದಾಗ, ಜಗಳಗಳು ಅನಿವಾರ್ಯ. ನೀವು ನಿಮ್ಮ ಸಂಗಾತಿಯ ಜೊತೆ ವಾದಕ್ಕೆ ಬೀಳಬಹುದು.
ಮೀನ ರಾಶಿ
ನಿಮ್ಮ ಆರೋಗ್ಯ ಸುಧಾರಿಸವುದನ್ನು ಪ್ರಾರಂಭಿಸಲು ಅತ್ಯುತ್ತಮ ದಿನ. ನೀವು ಇಂದು ಹಣ ಉಳಿಸುವುದು ಕಷ್ಟ – ನೀವು ಇಂದು ಅತಿಯಾಗಿ ಖರ್ಚು ಮಾಡುವ ಅಥವಾ ನಿಮ್ಮ ಪರ್ಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ –ನಿರ್ಲಕ್ಷ್ಯತನದಿಂದ ಕೆಲವು ಸಮಸ್ಯೆಗಳು ಖಂಡಿತ. ನಿಮ್ಮ ಅಸಡ್ಡೆಯ ವರ್ತನೆ ಪೋಷಕರನ್ನು ಚಿಂತೆಗೀಡು ಮಾಡಬಹುದು. ನೀವು ಯಾವುದೇ ಹೊಸ ಯೋಜನೆಯನ್ನು ಆರಂಭಿಸುವ ಮೊದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು. ಇಂದು ನಿಮ್ಮ ಪ್ರಿಯತಮೆಯ ಚಿತ್ತ ಓಲಾಡಬಹುದಾದ್ದರಿಂದ ಪ್ರಣಯ ಇಂದು ಅನಿಶ್ಚಿತವಾಗಿರುತ್ತದೆ. ಇಂದು ಅನುಭವಿಗಳ ಒಡನಾಟ ಹೊಂದಿ ಮತ್ತು ಅವರು ಏನು ಹೇಳುತ್ತಾರೆಂದು ಕಲಿಯಿರಿ. ನಿಮ್ಮ ಸ್ಪರ್ಧಾತ್ಮಕ ಸ್ವಭಾವ ನೀವು ಪ್ರವೇಶಿಸುವ ಯಾವುದೇ ಸ್ಪರ್ಧೆಯಲ್ಲೂ ನಿಮ್ಮನ್ನು ಗೆಲ್ಲಿಸುತ್ತದೆ. ನಿಮಗೆ ಇಂದು ನಿಮ್ಮ ಸಂಗಾತಿಯಿಂದ ಹಾನಿಗೊಳಗಾದಂತೆ ಅನ್ನಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here