ಬಿ ಎಸ್ ಎನ್ ಎಲ್ ತನ್ನ ಕಾಂಬೋ ಪ್ರಿಪೇಯ್ಡ್ ಯೋಜನೆಯಲ್ಲಿ ಮತ್ತೊಂದು ಹೊಸ ಪ್ಲಾನ್ ಶುರು ಮಾಡಿದೆ. 118 ರೂಪಾಯಿ ಹೊಸ ಎಸ್ಟಿವಿ 28 ದಿನಗಳ ಕಾಲ ಮಾನ್ಯತೆ ಹೊಂದಿರಲಿದೆ. ಇದ್ರಲ್ಲಿ ಗ್ರಾಹಕರಿಗೆ 1ಜಿಬಿ ಡೇಟಾ ಹಾಗೂ ವೈಸ್ ಕಾಲಿಂಗ್ ಸಿಗಲಿದೆ.
ಈ ಯೋಜನೆ ಕೇವಲ ತಮಿಳುನಾಡು ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಏಪ್ರಿಲ್ 1, 2018ರಿಂದ ಇದು ಜಾರಿಗೆ ಬರಲಿದೆ. 118 ರೂಪಾಯಿ ಈ ಪ್ಲಾನ್ ನಲ್ಲಿ ಅನಿಯಮಿತ ವೈಸ್ ಕಾಲ್ ಸಿಗಲಿದೆ. ರೋಮಿಂಗ್ ಕೂಡ ಅನಿಯಮಿತವಾಗಿರಲಿದೆ. ವೈಸ್ ಕಾಲ್ ಮಿತಿ ಬಗ್ಗೆ ಬಿಎಸ್ ಎನ್ ಎಲ್ ಯಾವುದೇ ಮಾಹಿತಿ ನೀಡಿಲ್ಲ.
ಬಿ ಎಸ್ ಎನ್ ಎಲ್ ಜಿಯೋಗೆ ಟಕ್ಕರ್ ನೀಡಲು ಈ ಪ್ಲಾನ್ ಶುರು ಮಾಡಿದೆ. ಜಿಯೋ 98 ರೂಪಾಯಿ ಪ್ಲಾನ್ ನಲ್ಲಿ ಅನಿಯಮಿತ ವೈಸ್ ಕಾಲ್ ನೀಡ್ತಿದೆ. ಇದ್ರ ಜೊತೆ 2 ಜಿಬಿ ಡೇಟಾ ಹಾಗೂ 300 ಮೆಸ್ಸೇಜ್ ನೀಡ್ತಿದೆ. ಏರ್ಟೆಲ್ ಕೂಡ ಇಂಥಹದ್ದೇ ಪ್ಲಾನ್ ಶುರು ಮಾಡಿದೆ. ಅದ್ರ ಬೆಲೆ 93 ರೂಪಾಯಿ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ