ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಮತ್ತು ಮ್ಯೂಸಿಯಂ ರಸ್ತೆಗಳು ಇನ್ನಷ್ಟು ಆಕರ್ಷಕವಾಗಲಿದೆ. - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶುಕ್ರವಾರ, ಮಾರ್ಚ್ 30, 2018

ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಮತ್ತು ಮ್ಯೂಸಿಯಂ ರಸ್ತೆಗಳು ಇನ್ನಷ್ಟು ಆಕರ್ಷಕವಾಗಲಿದೆ.

ನಗರದ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಮತ್ತು ಮ್ಯೂಸಿಯಂ ರಸ್ತೆಗಳು ಇನ್ನಷ್ಟು ಆಕರ್ಷಕವಾಗಲಿದೆ.
ಏಕೆಂದರೆ ಚರ್ಚ್ ಸ್ಟ್ರೀಟ್ ರಸ್ತೆ ಮಾದರಿಯಲ್ಲೇ ಈ ಮೂರು ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.
ವಾರಾಂತ್ಯದಲ್ಲಿ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗೆ ಜನರು ಬಾರದೇ ಹೋಗುವದಿಲ್ಲ, ಆದರೆ ಇನ್ನುಮುಂದೆ ಈ ರಸ್ತೆಗಳಿಗೆ ಜನರು ಬಂದೇ ಬರಬೇಕು ಎನ್ನುವಂತೆ ಅಭಿವೃದ್ಧಿಪಡಿಸಲು ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಕಾಬೂನ್ ಗ್ರಾನೈಟ್ ಬಳಕೆ ಮಾಡಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಅದರ ಜತೆಗೆ ಕಸೂತಿ ಕಲೆಗಳನ್ನಾಧರಿಸಿ ಗ್ರಾನೈಟ್ ನ್ನು ಜೋಡಿಸುವ ಮೂಲಕ ಪಾದಚಾರಿ ಸ್ನೇಹ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. ಉಳಿದಂತೆ ನೀರಿನ, ಒಳಚರಂಡಿ ಪೈಪ್ ಗಳು ಓಎಫ್ ಸಿ ಕೇಬಲ್, ವಿದ್ಯುತ್ ತಂತಿ ಸೇರಿ ಇನ್ನಿತರೆ ವಸ್ತುಗಳನ್ನು ಪಾದಚಾರಿ ಮಾರ್ಗದ ಕೆಳಭಾಗದಲ್ಲಿ ಅಳವಡಿಸಿ ಅವುಗಳ ದುರಸ್ತಿಗೆ ಡಕ್ಟ್ ಗಳನ್ನು ಅಳವಡಿಸಲಾಗುತ್ತದೆ.
1,580 ಮೀ. ಉದ್ದದ ರಸ್ತೆಗಳು: ಯೋಜನೆಯಂತೆ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಮತ್ತು ಮ್ಯೂಸಿಯಂ ರಸ್ತೆಗಳು ಹೈಟೆಕ್ ರಸ್ತೆಗಳಾಗಿ ಅಭಿವೃದ್ಧಿ ಹೊಂದಲಿವೆ. ಒಟ್ಟು 1,580ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಮೂರು ರಸ್ತೆಗಳಲ್ಲೂ ಪಾದಚಾರಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಯೋಜನೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಿಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here