ಗದಾಯುದ್ಧದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಮಂಗಳವಾರ, ನವೆಂಬರ್ 21, 2017

ಗದಾಯುದ್ಧದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್...!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆಗಸ್ಟ್ ನಲ್ಲಿ ಸೆಟ್ಟೇರಿದ್ದ ಈ ಚಿತ್ರ ಸೆಪ್ಟಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆದಿದೆ.
ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿದ್ದು, ಡಿಸೆಂಬರ್ 20 ಕ್ಕೆ ಕಂಪ್ಲೀಟ್ ಆಗಲಿದೆ. ದುರ್ಯೋಧನ ಪಾತ್ರಧಾರಿ ದರ್ಶನ್ ಹಾಗೂ ಭೀಮನ ಪಾತ್ರಧಾರಿ ಸೈಫಿ ಅಖ್ತರ್ ಅಲಿ ನಡುವೆ ಗದಾಯುದ್ಧ ನಡೆಯಲಿದೆ. ಚಿತ್ರದ ರೋಚಕ ಸನ್ನಿವೇಶ ಇದಾಗಿದ್ದು, 2 ಡಿ ಮತ್ತು 3 ಡಿ ಯಲ್ಲಿ ಚಿತ್ರೀಕರಣ ಮಾಡಲಾಗ್ತಿದೆ.
ಚಿತ್ರದ ಕೆಲವೊಂದು ಭಾಗಗಳಿಗೆ ಪ್ರಾಣಿಗಳ ಬಳಸಲು ಪ್ರಾಣಿಗಳ ಕಲ್ಯಾಣ ಮಂಡಳಿಯ ಅನುಮತಿ ಪಡೆಯಲಾಗ್ತಿದೆ. ಇನ್ನು ಚಿತ್ರಕ್ಕಾಗಿ 800 ಕ್ಕೂ ಅಧಿಕ ಮಂದಿ ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿ ನಂತರದಲ್ಲಿ ಗ್ರಾಫಿಕ್ಸ್, ವಿ.ಎಫ್.ಎಕ್ಸ್. ಕೆಲಸಗಳು ನಡೆಯಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆ ಕಾಣಲಿದೆ.
ಮುನಿರತ್ನ ನಿರ್ಮಾಣ, ನಾಗಣ್ಣ ನಿರ್ದೇಶನ ಚಿತ್ರಕ್ಕಿದ್ದು, ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ತಯಾರಾಗ್ತಿದೆ. 'ಕುರುಕ್ಷೇತ್ರ'ದಲ್ಲಿ ಅದ್ಧೂರಿ ತಾರಾಗಣವಿದೆ. ಅಂಬರೀಶ್, ಅರ್ಜುನ್ ಸರ್ಜಾ, ರವಿಚಂದ್ರನ್, ನಿಖಿಲ್ ಕುಮಾರ್, ಭಾರತಿ ವಿಷ್ಣುವರ್ಧನ್ ಮೊದಲಾದವರು ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here