ನ್ಯೂಸ್ ಡೆಸ್ಕ್ : ಕ್ರಿಕೆಟ್ ನಲ್ಲಿ ಇದುವರೆಗೂ ಅನೇಕ ದಾಖಲೆಗಳು ಸೃಷ್ಟಿಯಾಗಿ ಇತಿಹಾಸ ಸೃಷ್ಟಿಸಿವೆ. ಅದರಲ್ಲಿ ಕೆಲವೊಂದು ದಾಖಲೆಗಳು ಹಾಗೆ ಉಳಿದಿವೆ.
ಹೌದು, ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರು 1931 ರಲ್ಲಿ ನಡೆದ ಪಂದ್ಯವೊಂದರಲ್ಲಿ 3 ಓವರ್ ಗಳಲ್ಲಿ ಶತಕ ಸಿಡಿಸಿದ್ದರು. ಅಂದು ಓವರ್ ಗೆ 8 ಬಾಲ್ ಗಳಿತ್ತು. ಮೊದಲ ಓವರ್ ನಲ್ಲಿ 38 ರನ್ ನಂತರ 33 ರನ್, 40 ರನ್ ಗಳನ್ನು ಗಳಿಸಿ ಅವರು ಶತಕ ಸಿಡಿಸಿದ್ದರು.
ಇಂದಿಗೂ ಕ್ರಿಕೆಟ್ ಇತಿಹಾಸದಲ್ಲಿ ಆ ದಾಖಲೆ ಹಾಗೇ ಉಳಿದಿದೆ. 24 ಎಸೆತಗಳಲ್ಲಿ ಶತಕ ಸಿಡಿಸಿದ ದಾಖಲೆಯನ್ನು ಯಾರು ಮುರಿಯುತ್ತಾರೆ ಎಂಬುದನ್ನು ಇನ್ನು ಮುಂದೆ ಕಾದು ನೋಡಬೇಕು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ