ಭವಿಷ್ಯ 21-11-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ನವೆಂಬರ್ 20, 2017

ಭವಿಷ್ಯ 21-11-2017

ಭವಿಷ್ಯ 
ಮೇಷ ರಾಶಿ
ವಿಶ್ರಾಂತಿ ಪ್ರಮುಖವಾದ ಒಂದು ದಿನ – ಇತ್ತೀಚೆಗೆ ನೀವು ಬಹಳಷ್ಟು ಮಾನಸಿಕ ಒತ್ತಡ ಎದುರಿಸುತ್ತಿದ್ದೀರಿ - ಮನೋಲ್ಲಾಸ ಮತ್ತು ಮನೋರಂಜನೆ ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಸಮೂಹ ಪಾಲ್ಗೊಳ್ಳುವಿಕೆ ಮನರಂಜನಾತ್ಮಕವಾಗಿದ್ದರೂ ನೀವು ಇತರರ ಮೇಲೆ ಖರ್ಚು ಮಾಡುವುದನ್ನು ನಿಲ್ಲಿಸದಿದ್ದರೆ ಅದು ದುಬಾರಿಯಾಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ನಿಮ್ಮನ್ನು ಚಿಂತೆಗೀಡುಮಾಡಬಹುದು. ಇಂದು ಪ್ರಣಯದ ಯಾವುದೇ ಆಸೆಯಿಲ್ಲ ಇಂದು ನೀವು ಒಬ್ಬ ಗುಪ್ತ ಎದುರಾಳಿಯನ್ನು ಹೊಂದಿರುತ್ತೀರಿ ಅವರು ನಿಮ್ಮನ್ನು ತಪ್ಪಾಗಿ ಸಾಬೀತುಪಡಿಸುವುದನ್ನು ಪ್ರೀತಿಸುತ್ತಾರೆ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯು ಈ ಅಗತ್ಯದ ಕಾಲದಲ್ಲಿ ಅವರ ಕುಟುಂಬದ ಸದಸ್ಯರಿಗೆ ಹೋಲಿಸಿದರೆ ನಿಮ್ಮ ಕುಟುಂಬದ ಸದಸ್ಯರಿಗೆ ಕಡಿಮೆ ಕಾಳಜಿ ಮತ್ತು ಪ್ರಾಮುಖ್ಯತೆಯನ್ನು ನೀಡಬಹುದು.
ವೃಷಭ ರಾಶಿ
ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಖಾಲಿ ಮೆದುಳು ದೆವ್ವಗಳ ಕಾರ್ಖಾನೆಯಾದ್ದರಿಂದ ದೈಹಿಕ ವ್ಯಾಯಾಮದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ - ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ಒಬ್ಬ ಹತ್ತಿರದ ಸಂಬಂಧಿಗೆ ಹೆಚ್ಚು ಗಮನ ನೀಡಬೇಕಾಗಬಹುದಾದರೂ ಅವರು ಬೆಂಬಲ ಮತ್ತು ಆರೈಕೆ ನೀಡಬಹುದು. ನೀವು ಪ್ರೀತಿಯ ನೋವನ್ನು ಅನುಭವಿಸಬಹುದು. ಇಂದು ವಿಶ್ರಾಂತಿ ಪಡೆಯಲು ಸಮಯವಿಲ್ಲ ಬಾಕಿಯಿರುವ ಕೆಲಸಗಳು ನಿಮ್ಮನ್ನು ವ್ಯಸ್ತವಾಗಿಡುತ್ತವೆ. ನೀವು ಅನಿರೀಕ್ಷಿತ ಮೂಲಗಳಿಂದ ಪ್ರಮುಖ ಆಮಂತ್ರಣವನ್ನು ಸ್ವೀಕರಿಸುತ್ತೀರಿ. ಇಂದು ನೀವು ನಿಮ್ಮ ಸಂಗಾತಿ ನಿಮ್ಮ ಹುಟ್ಟುಹಬ್ಬವನ್ನು ಮರೆತಂಥ ಹಳೆಯ ವಿಷಯದ ಬಗ್ಗೆ ಜಗಳವಾಡಬಹುದು. ಆದರೆ ಕೊನೆಗೆ ಎಲ್ಲವೂ ಸರಿಹೋಗುತ್ತದೆ.
ಮಿಥುನ ರಾಶಿ
ತಮ್ಮ ಕನಸು ಮತ್ತು ಹವ್ಯಾಸವದ ಬೆನ್ನು ಹತ್ತಿ ತಮ್ಮ ಮನೆ ಹಾಗೂ ಆರೋಗ್ಯವನ್ನು ಕೈಬಿಡುವವರಂತೆ ವರ್ತಿಸಬೇಡಿ. ನೀವು ಆರ್ಥಿಕವಾಗಿ ವ್ಯವಹರಿಸುವರ ಜೊತೆಗೆ ಎಚ್ಚರಿಕೆಯಿಂದಿರಿ. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ-ನಿಮ್ಮ ಹಠಾತ್ ಟೀಕೆಗಳಿಗೆ ನೀವು ತೀವ್ರವಾಗಿ ಟೀಕೆ ಎದುರಿಸಬೇಕಾಗಬಹುದು. ನಿಮ್ಮ ಪ್ರಿಯತಮೆಯ ಕಠಿಣ ಪದಗಳಿಂದ ನಿಮ್ಮ ಮನಸ್ಥಿತಿ ಹಾಳಾಗಬಹುದು. ಯಾವುದೇ ಪಾಲುದಾರಿಕೆಗೆ ಒಪ್ಪುವ ಮೊದಲು ನಿಮ್ಮ ಅಂತಸ್ಸತ್ವದ ಭಾವನೆಯನ್ನು ಆಲಿಸಿ. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ಒದಗಿಸುತ್ತಾರೆ. ನಿಮ್ಮ ಸಂಗಾತಿಯ ಜೊತೆ ಗಂಭೀರವಾದ ವಾದವನ್ನು ಹೊಂದಿರಬಹುದು.
ಕರ್ಕ ರಾಶಿ 
ನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ವ್ಯಾಪಾರ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನಿಮ್ಮನ್ನು ಕೆಳಗೆಳೆಯಲು ಪ್ರಯತ್ನಿಸುತ್ತಿರುವ ಜನರನ್ನು ನಿರ್ವಹಿಸುವುದು ನಿಮಗೆ ಅತ್ಯಂತ ಕಷ್ಟವಾಗಬಹುದು. ನಿಮ್ಮ ಪ್ರೀತಿಪಾತ್ರರೊಡನೆ ಪ್ರಯಾಣಕ್ಕೆ ಹೋಗುವ ಮೂಲಕ ನಿಮ್ಮ ಅಮೂಲ್ಯ ಕ್ಷಣಗಳನ್ನು ಪುನಃ ಜೀವಿಸಿ. ಉನ್ನತ ಮಟ್ಟದಲ್ಲಿ ಕೆಲಸ ಮಾಡುವ ಕೆಲವರಿಂದ ಸ್ವಲ್ಪ ವಿರೋಧ ಬರಬಹುದಾದರೂ ನ ಶಾಂತವಾಗಿರುವುದು ಮುಖ್ಯ. ಇಂದು ತಕ್ಷಣ ಗಮನ ಬೇಕಾಗಿರುವ ಬಹಳಷ್ಟು ಸಮಸ್ಯೆಗಳಿರುತ್ತವೆ. ವೈವಾಹಿಕ ಜೀವನವನ್ನು ಉತ್ತಮವಾಗಿಸುವ ನಿಮ್ಮ ಪ್ರಯತ್ನಗಳು ಇವತ್ತು ನಿರೀಕ್ಷೆಗೂ ಮೀರಿ ಫಲ ನೀಡುತ್ತವೆ.
ಸಿಂಹ ರಾಶಿ 
ನಿಮ್ಮ ಸಂತೋಷದ ಪ್ರಕೃತಿ ಇತರರಿಗೆ ಸಂತೋಷ ತರುತ್ತದೆ. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಕಳೆದ ಸಂತೋಷದ ನೆನಪುಗಳು ನಿಮ್ಮನ್ನು ವ್ಯಸ್ತವಾಗಿಡುತ್ತವೆ. ಉದ್ಯಮಿಗಳಿಗೆ ಒಳ್ಳೆಯ ದಿನ. ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಒಂದು ಹಠಾತ್ ಪ್ರವಾಸ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ಇದು ಮದುವೆಯ ಉಜ್ವಲವಾದ ದಿನವನ್ನು ಅನುಭವಿಸುವ ದಿನವಾಗಿದೆ.
ಕನ್ಯಾ ರಾಶಿ 
ನೀವು ಸೇವಿಸುವುದರ ಬಗ್ಗೆ ಜಾಗರೂಕರಾಗಿರಿ. ರಸ್ತೆಬದಿಯ ಆಹಾರ ತಪ್ಪಿಸಿ. ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಕಲ್ಪನೆಗಳನ್ನು ಪ್ರಸ್ತುತಪಡಿಸುತ್ತೀರಿ. ನಿಕಟ ಕುಟುಂಬದ ಸದಸ್ಯರು ನಿಮಗೆ ಅಸೂಯೆಯುಂಟಾಗುವಂತೆ ಮತ್ತು ಕಿರಕಿರಿಯುಂಟಾಗುವಂತೆ ಮಾಡುತ್ತಾರೆ- ಇದನ್ನು ದೊಡ್ಡದಾಗಿಸುವ ಬದಲು ನಿಮಗೆ ಏನನಿಸುತ್ತಿದೆಯೆಂದು ನೀವು ಹೇಳಬೇಕು. ನೀವು ಸ್ವಲ್ಪ ಪ್ರೀತಿ ಹಂಚಿಕೊಂಡಲ್ಲಿ ಇಂದು ನಿಮ್ಮ ಪ್ರಿಯತಮೆ ನಿಮ್ಮ ದೇವತೆಯಾಗುತ್ತಾಳೆ. ಯಾವುದೇ ಜಂಟಿ ಯೋಜ್ನಯ್ಲಲಿ ಭಾಗವಹಿಸಬೇಡಿ - ಪಾಲುದಾರರು ನಿಮ್ಮ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ನಿಮ್ಮ ಸಂಗಾತಿ ನಿಜವಾಗಿಯೂ ಸ್ಪೂರ್ತಿದಾಯಕವಾಗಿದ್ದಾಗ ಜೀವನ ಸುಂದರವಾಗಿರುತ್ತಿದ್ದು, ನೀವು ಇಂದು ಅದನ್ನು ಅನುಭವಿಸಲಿದ್ದೀರಿ.
ತುಲಾ ರಾಶಿ 
ಮಾನಸಿಕ ಶಾಂತಿಗಾಗಿ ನಿಮ್ಮ ಒತ್ತಡವನ್ನು ಪರಿಹರಿಸಿ. ಮೌಲ್ಯ ಹೆಚ್ಚಾಗುವ ವಸ್ತುಗಳನ್ನು ಖರೀದಿಸಲು ಪರಿಪೂರ್ಣ ದಿನ. ನಿಮ್ಮ ಕುಟುಂಬ ಸದಸ್ಯರಿಗೆ ಧನಾತ್ಮಕ ಪ್ರಯೋಜನಗಳ ಸಲಹೆಗಳನ್ನು ನೀಡುವ ಮೂಲಕ ನಿಮ್ಮ ಉಪಯುಕ್ತತೆಯ ಬಲವನ್ನು ಅಭಿವೃದ್ಧಿಪಡಿಸಿ. ನಿಮ್ಮ ಪ್ರೀತಿಪಾತ್ರರಿಗೆ ಒರಟಾಗಿ ಏನೂ ಹೇಳಬೇಡಿ-ಇಲ್ಲದಿದ್ದರೆ ನೀವು ನಂತರ ಪಶ್ಚಾತ್ತಾಪಪಡಬಹುದು. ನಿಮ್ಮ ಪಾಲುದಾರರು ನಿಮ್ಮ ಯೋಜನೆಗಳಿಗೆ ಅಂಟಿಕೊಂಡಿರುವಂತೆ ಮಾಡುವಲ್ಲಿ ನೀವು ಸಮಸ್ಯೆಗಳನ್ನು ಹೊಂದಿರುತ್ತೀರಿ. ನೀವು ಸಹಾಯಕ್ಕಾಗಿ ನಿಮ್ಮ ಬಳಿ ಬರುವ ಜನರಿಗೆ ಬದ್ಧತೆ ನೀಡುತ್ತೀರಿ. ನಿಮ್ಮ ಸಂಗಾತಿಯ ಇಂದು ಅವರ ಕೆಲಸದಲ್ಲಿ ಮುಳುಗಿಹೋಗಬಹುದು ಹಾಗೂ ಇದು ನಿಮ್ಮನ್ನು ಬೇಸರಗೊಳಿಸುತ್ತದೆ.
ವೃಶ್ಚಿಕ ರಾಶಿ 
ನಿಮ್ಮ ನಿರಾಶಾದಾಯಕ ನಡವಳಿಕೆಯಂದಾಗಿ ನೀವು ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಚಿಂತೆ ನಿಮ್ಮ ಚಿಂತನಾ ಶಕ್ತಿ ಯನ್ನು ಕುಂಠಿತಗೊಳಿಸಿದೆಯಂದು ಕಂಡುಕೊಳ್ಳಲು ಇದು ಸಕಾಲ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಇಂದು ನೀವು ಇತರರ ಅಗತ್ಯಗಳಿಗೆ ಗಮನ ನೀಡಬೇಕಾದರೂ ಮಕ್ಕಳೊಂದಿಗೆ ಅತೀ ಉದಾರತೆ ತೋರಿಸುವುದು ತೊಂದರೆಗೆ ಕಾರಣವಾಗುತ್ತದೆ. ನೀವು ಯಾವಾಗಲೂ ಪರಸ್ಪರರ ಪ್ರೀತಿಯಲ್ಲಿದ್ದೀರೆಂದು ಅನಿಸುವುದರಿಂದ ಭೌತಿಕ ಅಸ್ತಿತ್ವಕ್ಕೆ ಯಾವುದೇ ಮಹತ್ವವಿರುವುದಿಲ್ಲ. ಹೊಸ ಯೋಜನೆಗಳು ಮತ್ತು ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ದಿನ. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಇಂದು, ನೀವು ನಿಮ್ಮ ಪ್ರಿಯತಮೆಯ ಜೊತೆಗಿರುವುದೇನೆಂದು ಅರ್ಥ ಮಾಡಿಕೊಳ್ಳುತ್ತೀರಿ. ಹೌದು, ನಿಮ್ಮ ಸಂಗಾತಿಯೇ ನಿಮ್ಮ ಪ್ರಿಯತಮೆ.
ಧನು ರಾಶಿ 
ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ನೀವು ಇಂದು ಹಣ ಉಳಿಸುವುದು ಕಷ್ಟ – ನೀವು ಇಂದು ಅತಿಯಾಗಿ ಖರ್ಚು ಮಾಡುವ ಅಥವಾ ನಿಮ್ಮ ಪರ್ಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ –ನಿರ್ಲಕ್ಷ್ಯತನದಿಂದ ಕೆಲವು ಸಮಸ್ಯೆಗಳು ಖಂಡಿತ. ಕೆಲಸದ ಒತ್ತಡ ನಿಮ್ಮ ಮನಸ್ಸನ್ನು ಆವರಿಸುತ್ತದೆ ಹಾಗೂ ಇದು ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಸಮಯವಿಲ್ಲದಂತೆ ಮಾಡುತ್ತದೆ. ಪ್ರೀತಿ ಮತ್ತು ಪ್ರಣಯ ನಿಮ್ಮನ್ನು ಸಂತೋಷದ ಮನೋಭಾವದಲ್ಲಿಡುತ್ತದೆ. ಕೆಲಸದಲ್ಲಿನ ಒತ್ತಡ ಇಂದು ಆಯಾಸ ಉಂಟುಮಾಡಬಹುದು. ನಿರ್ಲಕ್ಷಿಸಲು ಪ್ರಯತ್ನಿಸಿ. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ಕೆಲವರು ವೈವಾಹಿಕ ಜೀವನ ಕೇವಲ ಜಗಳ ಮತ್ತು ಲೈಂಗಿಕತೆಯ ಬಗೆಗಿದೆಯೆಂದುಕೊಳ್ಳುತ್ತಾರೆ, ಆದರೆ ಇಂದು ಎಲ್ಲವೂ ಪ್ರಶಾಂತವಾಗಿರುತ್ತದೆ.
ಮಕರ ರಾಶಿ 
ನಿಮ್ಮ ಪ್ರಚಂಡ ಬೌದ್ಧಿಕ ಸಾಮರ್ಥ್ಯ ಅಂಗವೈಕಲ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೇವಲ ಸಕಾರಾತ್ಮಕ ಆಲೋಚನೆಗಳ ಜೊತೆ ಮಾತ್ರ ನೀವು ಈ ಸಮಸ್ಯೆಯ ವಿರುದ್ಧ ಹೋರಾಡಬೇಕು. ದೀರ್ಘಕಾಲದ ಲಾಭಗಳಿಗೆ ಸ್ಟಾಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗಿದೆ. ತಪ್ಪು ಸಮಯದಲ್ಲಿ ತಪ್ಪು ವಿಷಯಗಳನ್ನು ಹೇಳದಿರಲು ಪ್ರಯತ್ನಿಸಿ - ನೀವು ಪ್ರೀತಿಸುವವರನ್ನು ನೋಯಿಸದಂತೆ ಎಚ್ಚರ ವಹಿಸಿ. ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿರುತ್ತವೆ. ನೀವು ಕೆಲಸ ಮಾಡುವ ಬಗ್ಗೆ ಖಚಿತವಾಗಿಲ್ಲದಿದ್ದರೆ ಯಾವ ಭರವಸೆಯನ್ನೂ ನೀಡಬೇಡಿ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ಈ ದಿನ ನಿಮ್ಮ ಜೀವನದ ವಸಂತದ ಹಾಗೆ; ಪ್ರೀತಿಪೂರ್ಣ, ಇಲ್ಲಿ ಕೇವಲ ನೀವು ಮತ್ತು ನಿಮ್ಮ ಸಂಗಾತಿ ಮಾತ್ರವಿರುತ್ತೀರಿ.
ಕುಂಭ ರಾಶಿ 
ವಿಶೇಷವಾಗಿ ಕೆಂಪು ದೀಪವಿರುವಾಗ ರಸ್ತೆ ದಾಟುವಾಗ ಎಚ್ಚರಿಕೆ ವಹಿಸಿ. ಯಾರಾದರೊಬ್ಬರ ಉದಾಸೀನತೆ ನಿಮಗೆ ಹಾನಿಯುಂಟುಮಾಡಬಹುದು. ವೆಚ್ಚದ ಏರಿದರೂ ಆದಾಯದಲ್ಲಿನ ಹೆಚ್ಚಳ ನಿಮ್ಮ ಖರ್ಚುಗಳನ್ನು ನೋಡಿಕೊಳ್ಳುತ್ತದೆ. ಮನೆಯ ಕೆಲಸ ಸುಸ್ತು ಮಾಡುತ್ತದೆ ಮತ್ತು ನಿಮ್ಮನ್ನು ಮಾನಸಿಕ ಒತ್ತಡದಲ್ಲಿರಿಸುತ್ತದೆ. ನಿಮ್ಮ ಕೆಟ್ಟದಾದ ಪ್ರಣಯ ನಿಮ್ಮನ್ನು ಖಿನ್ನತೆಗೆ ದೂಡಬಹುದು. ಯಾವುದೇ ಹೊಸ ಜಂಟಿ ಯೋಜನೆಗಳು ಮತ್ತು ಪಾಲುದಾರಿಕೆಗಳಿಗೆ ಸಹಿ ಹಾಕಬೇಡಿ. ನೀವು ದಿನವನ್ನು ಅತ್ಯುತ್ತಮವಾಗಿಸಲು ನಿಮ್ಮ ಗುಪ್ತ ಗುಣಗಳನ್ನು ಬಳಸುತ್ತೀರಿ. ನಿಮಗೆ ನಿಜವಾಗಿಯೂ ಕೆಲಸದಲ್ಲಿ ನಿಮ್ಮ ಇಂದಿನ ಸವಾಲು ನೀರಸವೆನಿಸಬಹುದು; ಬಹುಶಃ ಆಲಸ್ಯ ಇದಕ್ಕೆ ಕಾರಣವಾಗಿರಬಹುದು.
ಮೀನ ರಾಶಿ 
ಸೃಜನಶೀಲ ಕೆಲಸ ನಿಮ್ಮನ್ನು ಶಾಂತವಾಗಿರಿಸುತ್ತವೆ. ನೀವು ಇಂದು ನಿಮಗೆ ನೀಡಲಾದ ಹೂಡಿಕೆಯ ಯೋಜನೆಗಳ ಬಗ್ಗೆ ಚೆನ್ನಾಗಿ ಆಲೋಚಿಸಬೇಕು. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ನಿಮ್ಮ ಮನದನ್ನೆಯ ಹೊಯ್ದಾಟ ಇಂದು ಅನಿಶ್ಚಿತವಾಗಿರುತ್ತದೆ. ಇತರ ದೇಶಗಳಲ್ಲಿ ವೃತ್ತಿಪರ ಸಂಪರ್ಕಗಳನ್ನು ಅಭಿವೃದ್ಧಿಪಡಿಸಲು ಇದು ಉತ್ತಮ ಸಮಯ. ನೀವು ಶಾಪಿಂಗ್ ಹೋಗುತ್ತಿದ್ದಲ್ಲಿ ದುಂದುವೆಚ್ಛವನ್ನು ತಪ್ಪಿಸಿ. ನೀವು ಶಾಂತವಾಗಿರದಿದ್ದಲ್ಲಿ ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ನಿಜವಾಗಿಯೂ ತೊಂದರೆ ಅನುಭವಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here