ಮೇಷ ರಾಶಿ
ಖಿನ್ನತೆಯನ್ನು ಹೊಡೆದೋಡಿಸಿ – ಇದ ನಿಮ್ಮನ್ನು ಆವರಿಸಿಕೊಳ್ಳುತ್ತಿದೆ ಮತ್ತು ನಿಮ್ಮ ಪ್ರಗತಿಗೆ ಅಡ್ಡಿಪಡಿಸುತ್ತಿದೆ. ಹಠಾತ್ ಅನಿರೀಕ್ಷಿತ ವೆಚ್ಚಗಳು ಆರ್ಥಿಕ ಒತ್ತಡ ತರಬಹುದು. ಮನೆಯಲ್ಲಿನ ಕೆಲವು ಬದಲಾವಣೆಗಳು ಪ್ರೀತಿಪಾತ್ರರೊಡನೆ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಪ್ರೇಮ ಜೀವನ ಶರದೃತುವಿನಲ್ಲಿನ ಮರದ ಎಲೆಯಂತಿರುತ್ತದೆ. ಕೈಗೊಂಡ ಹೊಸ ಕಾರ್ಯಯೋಜನೆಗಳು ನಿಮ್ಮ ನಿರೀಕ್ಷೆಗಳನ್ನು ತಲುಪುವುದಿಲ್ಲ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ಇಂದು, ನೀವು ನಿಮ್ಮ ಸಂಗಾತಿಯ ಆರೋಗ್ಯದ ಕಾರಣ ಒತ್ತಡಕ್ಕೊಳಗಾಗಬಹುದು.
ವೃಷಭ ರಾಶಿ
ನಿಮ್ಮನ್ನು ನೀವೇ ನೋಡಿಕೊಳ್ಳುವ ಬಯಕೆಗೆ ಇತರರ ಅಗತ್ಯಗಳು ಕಡಿವಾಣ ಹಾಕುತ್ತವೆ. ನಿಮ್ಮ ಭಾವನೆಗಳನ್ನು ತಡೆಹಿಡಿಯಬೇಡಿ ಹಾಗೂ ವಿಶ್ರಾಂತಿ ಪಡೆಯುವ ಸಲುವಾಗಿ ನೀವು ಇಷ್ಟಪಡುವುದನ್ನೇನಾದರೂ ಮಾಡಿ. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಸಾಮಾಜಿಕ ಜೀವನವನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಿಡುವಿರದ ಕೆಲಸದಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ ಹಾಗೂ ನಿಮ್ಮ ಕುಟುಂಬದೊಂದಿಗೆ ಯಾವುದಾದರೂ ಪಾರ್ಟಿಗೆ ಹೋಗಿ. ಇದು ನಿಮ್ಮ ಒತ್ತಡ ನಿವಾರಿಸುವುದಲ್ಲದೇ ಆದರೆ ನಿಮ್ಮ ಹಿಂಜಿರಿಕೆಯನ್ನೂ ತೆಗೆದುಹಾಕುತ್ತದೆ. ನಿಮ್ಮ ಗೆಳತಿ ನಿಮಗೆ ಮೋಸ ಮಾಡಬಹುದು. ನಿಮ್ಮ ಆರೋಗ್ಯ ಮತ್ತು ಶಕ್ತಿ ಕೆಲಸದಲ್ಲಿ ಇಂದು ನಿಮ್ಮನ್ನು ಬೆಂಬಲಿಸದಿರಬಹುದು. ನೀವು ಮಾನಸಿಕವಾಗಿ ಗಟ್ಟಿಯಾಗಿರಬೇಕು. ನೀವು ಶಾಪಿಂಗ್ ಹೋಗುತ್ತಿದ್ದಲ್ಲಿ ದುಂದುವೆಚ್ಛವನ್ನು ತಪ್ಪಿಸಿ. ನಿಮ್ಮ ಸಂಗಾತಿ ನಿಮಗೆ ಮನಸ್ಸಿಲ್ಲದಿದ್ದರೂ ಹೊರಗೆ ಹೋಗುವಂತೆ ಅಥವಾ ಮನೆಯಲ್ಲುಳಿಯುವಂತೆ ನಿಮ್ಮನ್ನು ಒತ್ತಾಯಿಸಬಹುದು, ಹಾಗೂ ಇದು ಅಂತಿಮವಾಗಿ ನಿಮಗೆ ಕಿರಿಕಿರಿಯುಂಟುಮಾಡಬಹುದು.
ಮಿಥುನ ರಾಶಿ
ಸಣ್ಣ ಸಣ್ಣ ವಿಷಯಗಳು ನಿಮ್ಮ ಮನಸ್ಸು ಕೆಡಿಸಲು ಬಿಡಬೇಡಿ. ಆವತ್ತಿಗಾಗಿ ಮಾತ್ರ ಬದುಕುವ ಮತ್ತು ಮನೋರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿಯನ್ನು ನಿಯಂತ್ರಿಸಿ. ಪ್ರೀತಿಪಾತ್ರರೊಡನೆ ನೀವು ಸಮಯ ಕಳೆಯದಿದ್ದರೆ ಅವರಿಗೆ ಕೋಪ ಬರಬಹುದು. ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ಒಬ್ಬರೊನ್ನಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಮಯ ವ್ಯಯಿಸಬೇಕು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರಕಲಿದೆ. ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ಈ ದಿನ ನಿಜವಾಗಿಯೂ ಪ್ರೇಮಭರಿತವಾಗಿದೆ. ಒಳ್ಳೆಯ ಆಹಾರ, ಸುಗಂಧ, ಸಂತೋಷಗಳ ಜೊತೆ ನೀವು ನಿಮ್ಮ ಅರ್ಧಾಂಗಿಯ ಜೊತೆ ಒಳ್ಳೆಯ ಸಮಯ ಕಳೆಯುತ್ತೀರಿ.
ಕರ್ಕ ರಾಶಿ
ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ನಿಮ್ಮ ಅವಾಸ್ತವಿಕ ಯೋಜನೆ ಹಣದ ಕೊರತೆಗೆ ಕಾರಣವಾಗುತ್ತದೆ. ಜಮೀನು ವಿವಾದ ಹೋರಾಟಕ್ಕೆ ಕಾರಣವಾಗುತ್ತದೆ. ವಿಷಯವನ್ನು ಬಗೆಹರಿಸಲು ನಿಮ್ಮ ಪೋಷಕರ ಸಹಾಯ ತೆಗೆದುಕೊಳ್ಳಿ. ಅವರ ಮಾರ್ಗದರ್ಶನದ ಪ್ರಕಾರ ನಡೆದುಕೊಳ್ಳಿ ಮತ್ತು ನೀವು ಖಂಡಿತವಾಗಿಯೂ ಸಮಸ್ಯೆಯನ್ನು ಪರಿಹರಿಸಬಹುದು. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಸಂತೋಷವಾಗಿರಿಸಲು ಕೆಲಸಗಳನ್ನು ಮಾಡುತ್ತಾರೆ. ನೀವು ನಿರಾಸೆ ಅನುಭವಿಸುತ್ತೀರಿ – ಅದೇಕೆಂದರೆ ನೀವು ಬಯಸುತ್ತಿದ್ದ ಗುರುತಿಸುವಿಕೆ ಮತ್ತು ಪ್ರತಿಫಲಗಳು ಮುಂದೂಡಲ್ಪಡುತ್ತವೆ. ಇಂದು ಬೇರೆಯವರಿಗೆ ನೀವು ನೀಡಿದ ನೆರವನ್ನು ಒಪ್ಪಿಕೊಂಡಾಗ ನೀವೇ ಕೇಂದ್ರಬಿಂದುವಾಗಿರುತ್ತೀರಿ. ಇಂದು, ನೀವು ಮತ್ತೆ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ.
ಸಿಂಹ ರಾಶಿ
ಸ್ವಲ್ಪ ಮನರಂಜನೆಗಾಗಿ ನಿಮ್ಮ ಕಚೇರಿಯಿಂದ ಬೇಗನೇ ಹೊರಬರಲು ಪ್ರಯತ್ನಿಸಿ. ಆರ್ಥಿಕ ಸಮಸ್ಯೆ ರಚನಾತ್ಮಕವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯವನ್ನು ಹಾಳುಮಾಡುತ್ತದೆ. ಒಬ್ಬ ಹಳೆಯ ಸ್ನೇಹಿತರು ಸಂಜೆ ನಿಮಗೆ ಕರೆ ಮಾಡುತ್ತಾರೆ ಮತ್ತು ಹಳೆಯ ನೆನಪುಗಳನ್ನು ತೆರೆದಿಡುತ್ತಾರೆ. ಸ್ನೇಹ ಆಳವಾದ ಹಾಗೆ ಪ್ರಣಯ ನಿಮ್ಮೆಡೆ ಬರುತ್ತದೆ. ನೀವೆಣಿಸಿದಂತೆ ಏನೂ ನಡೆಯುತ್ತಿಲ್ಲ ಎಂದುಜ್ ನಿಮಗನಿಸಬಹುದು, ಆದರೆ ಇದು ಕೇವಲ ಒಂದು ನಕಾರಾತ್ಮಕ ಚಿಂತನೆ. ಸಾಧ್ಯವಾದಷ್ಟೂ ಸಕಾರಾತ್ಮಕವಾಗಿರಿ. ಇಂದು ತಕ್ಷಣ ಗಮನ ಬೇಕಾಗಿರುವ ಬಹಳಷ್ಟು ಸಮಸ್ಯೆಗಳಿರುತ್ತವೆ. ನೀವು ಇಂದು ನಿಮ್ಮ ಸಂಗಾತಿಯ ಒಂದು ಭಾವಪೂರ್ಣ ಚರ್ಚೆಯನ್ನು ಹೊಂದುತ್ತೀರಿ.
ಕನ್ಯಾ ರಾಶಿ
ಇಂದಿನ ಮನರಂಜನೆ ಕ್ರೀಡಾ ಚಟುವಟಿಕೆಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳನ್ನು ಒಳಗೊಂಡಿರಬೇಕು. ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ- ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ಕೆಲವರು ಅವರಿಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ನೀಡುವ ಭರವಸೆ ನೀಡುತ್ತಾರೆ – ಕೇವಲ ಮಾತನಾಡುವ ಮತ್ತು ಯಾವುದೇ ಫಲಿತಾಂಶಗಳ ನೀಡದ ಇಂಥ ಜನರನ್ನು ಮರೆತುಬಿಡಿ. ಇಂದು ಪ್ರಣಯದ ಭಾವನೆಗಳಿಗೆ ಪ್ರತಿಕ್ರಿಯೆ ದೊರಕುತ್ತದೆ. ನೀವು ಇಂದು ನಿಮ್ಮ ಕೆಲಸದಲ್ಲಿ ಒಂದು ಪ್ರಗತಿಯನ್ನು ನೋಡಬಹುದು. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ನಿಮಗೆ ಗೊತ್ತೇ? ನಿಮ್ಮ ಸಂಗಾತಿ ನಿಜವಾಗಿಯೂ ಒಬ್ಬ ದೇವತೆ. ನಂಬಿಕೆಯಿಲ್ಲವೇ? ಇಂದು ನೋಡಿ ಹಾಗೂ ಅನುಭವಿಸಿ.
ತುಲಾ ರಾಶಿ
ನಿರಾಶಾದಾಯಕ ಮನೋಭಾವವು ಕೇವಲ ನಿಮ್ಮ ಅವಕಾಶಗಳನ್ನು ಸೀಮಿತಗೊಳಿಸುವುದಷ್ಟೇ ಅಲ್ಲದೇ ದೇಹದ ಸಾಮರಸ್ಯವನ್ನೂ ಭಂಗಪಡಿಸುವುದರಿಂದ ಅವುಗಳನ್ನು ತಡೆಯಬೇಕು. ಊಹೆ ಅಪಾಯಕಾರಿಯಾಗುತ್ತದೆ - ಆದ್ದರಿಂದ ಎಲ್ಲಾ ಹೂಡಿಕೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕು. ಒಂದು ವೈವಾಹಿಕ ಸಂಬಂಧವನ್ನು ಹೊಂದಲು ಒಳ್ಳೆಯ ಸಮಯ. ನಿಮ್ಮ ಪ್ರೀತಿಪಾತ್ರರ ಅನುಪಸ್ಥಿತಿ ನಿಮ್ಮ ಹೃದಯವನ್ನು ಕೋಮಲಗೊಳಿಸುತ್ತದೆ. ಇತರರನ್ನು ನಿಮಗೆ ಬೇಕಾದ ಕೆಲಸಗಳನ್ನು ಮಾಡಲು ಒತ್ತಾಯಿಸಲು ಪ್ರಯತ್ನಿಸಬೇಡಿ. ಇತರರನ್ನು ಒಪ್ಪಿಸುವ ನಿಮ್ಮ ಸಾಮರ್ಥ್ಯ ನಿಮಗೆ ಸಮೃದ್ಧ ಲಾಭ ತಂದುಕೊಡುತ್ತದೆ. ನಿಮ್ಮ ಸಂಗಾತಿಗೆ ನಿಜವಾಗಿಯೂ ಗಮನದ ಅವಶ್ಯಕತೆಯಿದೆ; ಇದರಿಂದಾಗಿ ನಿಮಗೆ ಮನೆಯಲ್ಲಿ ಕಠಿಣವಾದ ಸಮಯ ಎದುರಾಗಬಹುದು.
ವೃಶ್ಚಿಕ ರಾಶಿ
ಮನೆಯಲ್ಲಿ ಒತ್ತಡ ನಿಮಗೆ ಸಿಟ್ಟು ತರಿಸಬಹುದು. ಅವುಗಳನ್ನು ದಮನಗೊಳಿಸುವುದು ಕೇವಲ ದೈಹಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದೈಹಿಕ ಚಟುವಟಿಕೆಯೊಂದಿಗೆ ಇದನ್ನು ತೊಡೆದುಹಾಕಿ. ಕಿರಿಕಿರಿಯುಂಟುಮಾಡುವ ಪರಿಸ್ಥಿತಿಯಿಂದ ಹೊರಬರುವುದು ಉತ್ತಮ. ಮನರಂಜನೆ ಮತ್ತು ವೈಭೋಗಗಳ ಮೇಲೆ ಅತಿಯಾಗಿ ಖರ್ಚು ಮಾಡಬೇಡಿ. ಇಂದು ನೀವು ಮನೆಯಲ್ಲಿ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಪ್ರಭಾವವನ್ನು ಬಳಸಬೇಕಾಗುತ್ತದೆ. ನೀವು ಇಂದು ನಿಮ್ಮ ಸಿಹಿಯಾದ ಪ್ರೀತಿಯ ಜೀವನದಲ್ಲಿನ ಉತ್ಕಟತೆಯನ್ನು ಆನಂದಿಸುತ್ತೀರಿ. ಇಂದು, ನೀವು ನಿಮ್ಮ ಪ್ರಿಯತಮೆ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿದುಕೊಳ್ಳುತ್ತೀರಿ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ಇದು ನಿಮ್ಮ ವೈವಾಹಿಕ ಜೀವನದ ಅತ್ಯಂತ ಪ್ರೇಮಮಯ ದಿನವಾಗಿರುತ್ತದೆ.
ಧನು ರಾಶಿ
ನೀವು ಒಂದು ಅಹಿತಕರ, ಮುಜುಗರದ ಮತ್ತು ನಿರುತ್ಸಾಹಿಗಳನ್ನಾಗಿಸುವ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಇದು ನಿಮ್ಮನ್ನು ನಿರುತ್ಸಾಹಿಗಳಾಗಿಸುವ ಬದಲಿಗೆ ನೀವು ಇದರಿಂದ ಕೆಲವು ಪಾಠ ಕಲಿಯಬೇಕು. ಹಣಕಾಸನ್ನು ನಿರ್ವಹಿಸುವಾಗ ಹೆಚ್ಚುವರಿ ಎಚ್ಚರಿಕೆ ಅವಶ್ಯಕವಾಗಿದೆ. ಇಂದು ನೀವು ಸೀಮಿತ ತಾಳ್ಮೆ ಹೊಂದಿರುತ್ತೀರಿ – ಆದರೆ ಕಠಿಣ ಅಥವಾ ಅಸಮತೋಲಿತ ಪದಗಳು ನಿಮ್ಮ ಸುತ್ತಲಿನ ಜನರ ಅಸಮಾಧಾನಕ್ಕೆ ಕಾರಣವಾಗಬಹುದಾದ್ದರಿಂದ ಎಚ್ಚರಿಕೆಯಿಂದಿರಿ. ಇಂದು ಪ್ರೀತಿಯ ಅನುಪಸ್ಥಿತಿಯ ಭಾವನೆ ಬರಬಹುದು. ನಿಮ್ಮ ಆಫೀಸ್ ಕೆಲಸ ಇಂದು ಹೆಚ್ಚು ಹಾಳಾಗುವ ಸಾಧ್ಯತೆಯಿದೆ. ನಿಮ್ಮ ವಸ್ತುಗಳ ಬಗ್ಗೆ ಅಸಡ್ಡೆ ಹೊಂದಿದ್ದಲ್ಲಿ ನಷ್ಟ ಅಥವಾ ಕಳ್ಳತನ ಆಗಬಹುದು. ಯಾರೋ ಒಬ್ಬ ವ್ಯಕ್ತಿ ಇಂದು ನಿಮ್ಮ ಸಂಗಾತಿಯಲ್ಲಿ ತುಂಬಾ ಆಸಕ್ತಿ ತೋರಿಸಬಹುದು, ಆದರೆ ಕೊನೆಗೆ ಇಲ್ಲಿ ಏನೂ ತಪ್ಪು ನಡೆಯುತ್ತಿಲ್ಲ ಎಂದು ನಿಮಗೆ ಅರಿವಾಗುತ್ತದೆ.
ಮಕರ ರಾಶಿ
ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ಇಂದು ಹೂಡಿಕೆಗಳನ್ನು ಮಾಡಬಾರದು. ನೀವು ಪ್ರೀತಿಪಾತ್ರರ ಜೊತೆ ವಾದಗಳಿಗೆ ಕಾರಣವಾಗಬಹುದಾದ ವಿವಾದಾತ್ಮಕ ವಿಷಯಗಳನ್ನು ತಪ್ಪಿಸಬೇಕು. ಹಠಾತ್ ಪ್ರಣಯ ಪ್ರಸಂಗಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ಯಾರಾದರೂ ಇಂದು ಕೆಲಸದಲ್ಲಿ ನಿಮಗೆ ಸಂತೋಷವಾಗುವ ಏನನ್ನಾದರೂ ಮಾಡಬಹುದು. ಅತಿ ವೇಗದ ಚಾಲನೆ ಮತ್ತು ಅಪಾಯ ರಸ್ತೆ ಸಂದರ್ಭದಲ್ಲಿ ಸೇವಿಸಬಾರದು. ನಿಮ್ಮ ವೈವಾಹಿಕ ಜೀವನದ ಹಳೆಯ ಪ್ರಣಯದ, ಬೆಂಬತ್ತುವ, ಮತ್ತು ಓಲೈಸುವ ಸುಂದರ ದಿನಗಳನ್ನು ನೀವು ಮತ್ತೆ ಜೀವಿಸುತ್ತೀರಿ.
ಕುಂಭ ರಾಶಿ
ನಿಮ್ಮ ಕುಟುಂಬದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಿಮ್ಮ ಕೋಪವನ್ನುನಿಯಂತ್ರಿಸಿ. ತರಾತುರಿಯಲ್ಲಿ ಹೂಡಿಕೆಗಳನ್ನು ಮಾಡಬೇಡಿ - ನೀವು ಎಲ್ಲಾ ಸಾಧ್ಯವಿರುವ ಕೋನಗಳಿಂದ ಹೂಡಿಕೆಯನ್ನು ಪರಿಶೀಲಿಸದೇ ಹೋದರೆ ನಷ್ಟ ಖಚಿತ. ನಿಮ್ಮ ಸಹಾನುಭೂತಿ ಮತ್ತು ತಿಳುವಳಿಕೆಗೆ ಪ್ರತಿಫಲ ದೊರಕುತ್ತದೆ. ಆದರೆ ಯಾವುದೇ ಆತುರದ ತೀರ್ಮಾನ ಒತ್ತಡ ಉಂಟುಮಾಡಬಹುದಾದ್ದರಿಂದ ಎಚ್ಚರಿಕೆಯಿಂದಿರಿ. ನಿಮ್ಮ ಕಠಿಣ ಪದಗಳು ಶಾಂತಿ ಹಾಳು ಮಾಡಿ ನಿಮ್ಮ ಪ್ರಿಯತಮೆಯ ಜೊತೆಗಿನ ಮಧುರ ಸಂಬಂಧವನ್ನು ಹಾಳು ಮಾಡಬಹುದಾದ್ದರಿಂದ ನಿಮ್ಮ ಮಾತುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಕೆಲಸದಲ್ಲಿ ನಿಮ್ಮ ತಂಡದ ಅತ್ಯಂತ ಕಿರಿಕಿರಿಯುಂಟುಮಾಡುವ ವ್ಯಕ್ತಿ ಇಂದು ಇದ್ದಕ್ಕಿದ್ದಂತೆ ಬೌದ್ಧಿಕವಾಗಿ ವರ್ತಿಸಬಹುದು. ನಿಮ್ಮ ನೋಟ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲು ಮಾಡಿದ ಯತ್ನಗಳು ನಿಮಗೆ ತೃಪ್ತಿ ನೀಡುತ್ತವೆ. ನಿಮ್ಮ ಸಂಗಾತಿ ಇಂದು ನಿಮ್ಮ ದೈನಂದಿನ ಅಗತ್ಯಗಳನ್ನು ಈಡೇರಿಸುವುದನ್ನು ನಿಲ್ಲಿಸಬಹುದು ಹಾಗೂ ಅಂತಿಮವಾಗಿ ಇದು ನಿಮ್ಮ ಮನಸ್ಥಿತಿಯನ್ನು ಹಾಳುಗೆಡವಬಹುದು.
ಮೀನ ರಾಶಿ
ನಿಮ್ಮ ದೈಹಿಕ ಬಲವನ್ನು ನಿರ್ವಹಿಸಲು ನೀವು ಕ್ರೀಡೆಯಲ್ಲಿ ಸಮಯ ಕಳೆಯುವ ಸಾಧ್ಯತೆಗಳಿವೆ. ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ಅನಿರೀಕ್ಷಿತ ಅತಿಥಿಗಳು ಸಂಜೆ ನಿಮ್ಮ ಮನೆಯಲ್ಲಿ ತುಂಬಿರುತ್ತಾರೆ. ನೀವು ವಾಸ್ತವಾಂಶಗಳನ್ನು ಎದುರಿಸುತ್ತಿದ್ದ ಹಾಗೆ ಪ್ರೀತಿಪಾತ್ರರನ್ನು ಮರೆಬೇಕಾಗುತ್ತದೆ. ಇಂದು ನೀವು ಕೇಂದ್ರಬಿಂದುವಾಗಿರುತ್ತೀರಿ- ಮತ್ತು ಯಶಸ್ಸು ನಿಮ್ಮ ನಿಲುಕಿನೊಳಗಿದೆ. ನಿಮ್ಮ ಆಯಸ್ಕಾಂತೀಯ- ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ ನಿಮ್ಮನ್ನು ಪ್ರಸಿದ್ಧರನ್ನಾಗಿಸುತ್ತದೆ. ಇಂದು ನಿಮ್ಮ ಜೀವನ ಸಂಗಾತಿಯ ವಟಗುಟ್ಟುವಿಕೆಯಿಂದಾಗಿ ನಿಮಗೆ ಸಿಟ್ಟು ಬರಬಹುದು, ಆದರೆ ಅವನು / ಅವಳು ನಿಮಗೆ ನಿಜವಾಗಿಯೂ ಏನಾದರೂ ಒಳ್ಳೆಯದನ್ನು ಮಾಡುತ್ತಾರೆ.














ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ