ಭವಿಷ್ಯ
ಮೇಷ ರಾಶಿ
ದ್ವೇಷ ಪ್ರೀತಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು ನಿಮ್ಮ ದೇಹದ ಮೇಲೆ ಪ್ರಾಣಾಂತಿಕ ಪರಿಣಾಮ ಬೀರುವದರಿಂದ ನಿಮ್ಮ ದ್ವೇಷವನ್ನು ಸಾಯಿಸಲು ಒಂದು ಸಮರಸದ ಸ್ವಭಾವವನ್ನು ರೂಪಿಸಿಕೊಳ್ಳಿ. ದುಷ್ಟತೆಯು ಒಳಿತಿಗಿಂತ ಬೇಗ ವಿಜಯ ಸಾಧಿಸುತ್ತದೆಂದು ನೆನಪಿಡಿ. ಗೃಹ ಸೌಕರ್ಯಗಳ ಮೇಲೆ ಅಧಿಕವಾಗಿ ಖರ್ಚು ಮಾಡಬೇಡಿ. ವಿಶೇಷವಾಗಿ ಸ್ನೇಹಿತರ ವಲಯದಲ್ಲಿ ಹಠಮಾರಿ ಧೋರಣೆಯನ್ನು ತಡೆಯಬೇಕು. ಸಂಬಂಧ ತೀವ್ರ ಅಪಾಯಕ್ಕೆ ಸಿಲುಕಬಹುದಾದ್ದರಿಂದ ಇದ ನಿಮಗೆ ಬಹಳ ದುಬಾರಿಯಾಗಬಹುದು. ಇಂದು ರಾತ್ರಿ ಸಣ್ಣ ವಿಷಯಗಳಲ್ಲೂ ಕೂಡ ನಿಮ್ಮ ಪ್ರಿಯತಮೆಯ ಜೊತೆಗಿನ ಸಂಬಂಧಗಳು ಶಿಥಿಲಗೊಳ್ಳುತ್ತವೆ. ಸಹ ಕಾರ್ಮಿಕರು ಮತ್ತು ಕೈಕೆಳಗೆ ಕೆಲಸ ಮಾಡುವವರು ಚಿಂತೆ ಹಾಗೂ ಒತ್ತಡದ ಕ್ಷಣಗಳನ್ನು ತರುತ್ತಾರೆ. ಇಂದು ವಿಷಯಗಳು ನೀವು ಬಯಸುವ ರೀತಿಯಲ್ಲಿ ನಡೆಯದ ದಿನಗಳಲ್ಲಿ ಒಂದು. ನೀವು ಇಂದು ನಿಮ್ಮ ಸಂಗಾತಿಯಿಂದಾಗಿ ತೊಂದರೆಗೆ ಸಿಲುಕುತ್ತೀರಿ.
ವೃಷಭ ರಾಶಿ
ಸಂಘರ್ಷವು ನಿಮ್ಮ ಅನಾರೋಗ್ಯವನ್ನು ಇನ್ನಷ್ಟು ಹಾಳುಮಾಡಬಹುದಾದ್ದರಿಂದ ಅದನ್ನು ತಪ್ಪಿಸಿ. ಬ್ಯಾಂಕ್ ವ್ಯವಹರಗಳಲ್ಲಿ ಕಾಳಜಿ ವಹಿಸಬೇಕು. ನೀವು ಸ್ನೇಹಿತರೊಂದಿಗೆ ಒಳ್ಳೆಯ ಸಮಯ ಹೊಂದಿದ್ದರೂ ವಾಹನ ಚಾಲನೆ ಮಾಡುವಾಗ ಹೆಚ್ಚುವರಿ ಆರೈಕೆಯನ್ನು ಹೊಂದಿಕೊಳ್ಳಿ. ಕೆಲಸದ ಒತ್ತಡ ಹೆಚ್ಚುತ್ತಿದ್ದ ಹಾಗೆ ಮಾನಸಿಕ ಕ್ಷೋಭೆ ಮತ್ತು ಪ್ರಕ್ಷುಬ್ಧತೆ. ದಿನದ ಉತ್ತರಾರ್ಧದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ನೀವು ಇಂದು ಕೆಲಸದಲ್ಲಿ ಸಾಮಾಜಿಕ ತಾಣಗಳಲ್ಲಿ ಬಹಳ ಸಮಯ ಕಳೆದರೆ, ನೀವು ಸಿಕ್ಕಿಹಾಕಿಕೊಳ್ಳಬಹುದು. ವಿಷಯಗಳು ನಿಮ್ಮ ಪರವಾಗಿರುವಂತೆ ತೋರುವ ಒಂದು ಲಾಭಕರ ದಿನ ಮತ್ತು ನೀವು ತುಂಬ ಉತ್ಸಾಹದಿಂದಿರುತ್ತೀರಿ. ನೀವು ಮೂಡ್ ಆಫ್ ಆಗಿರುವುದರಿಂದ ನಿಮ್ಮ ಸಂಗಾತಿಯ ಮೆಲೆ ಸಿಟ್ಟಾಗಬಹುದು.
ಮಿಥುನ ರಾಶಿ
ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಆಸ್ಪತ್ರೆಗೆ ಭೇಟಿ ನೀಡಬೇಕಾಗಬಹುದು. ಊಹೆ ಅಪಾಯಕಾರಿಯಾಗುತ್ತದೆ - ಆದ್ದರಿಂದ ಎಲ್ಲಾ ಹೂಡಿಕೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕು. ಒಬ್ಬರು ಇನ್ನೊಬ್ಬರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಮೂಲಕ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿ. ಅವುಗಳನ್ನು ಸಾರ್ವಜನಿಕಗೊಳಿಸಿದರೆ ನಿಮಗೆ ಅಪಖ್ಯಾತಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂದು ಪ್ರಣಯದ ಯಾವುದೇ ಆಸೆಯಿಲ್ಲ ನಿಮ್ಮ ಸೃಜನಶೀಲತೆ ನಷ್ಟವಾಗಿದೆ ಎಂದು ನಿಮಗನಿಸುತ್ತದೆ ಮತ್ತು ನಿಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಕಷ್ಟವಾಗುತ್ತದೆ. ನಿಮ್ಮ ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ಇದನ್ನು ಒಂದು ಸ್ಮರಣೀಯ ದಿನವಾಗಿಸಬಹುದು. ನಿಮ್ಮ ಸಂಗಾತಿ ನೆರೆಹೊರೆಯಲ್ಲಿ ಕೇಳಿದ್ದನ್ನೇ ಏನೋ ಸಮಸ್ಯೆಯನ್ನಾಗಿ ಮಾಡಬಹುದು.
ಕರ್ಕ ರಾಶಿ
ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಹೊಸ ಒಪ್ಪಂದಗಳು ಲಾಭದಾಯಕವೆಂದು ಕಂಡರೂ ಬಯಸಿದ ಲಾಭ ತರುವುದಿಲ್ಲ - ಹಣವನ್ನು ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರಗಳನ್ನು ಮಾಡಬೇಡಿ. ಇಂದು ನೀವು ಒಬ್ಬಂಟಿ ಹಾಗೂ ಏಕಾಂಗಿಯಾಗಿರುತ್ತೀರಿ - ಮತ್ತು ಪ್ರತ್ಯೇಕತೆಯ ಭಾವನೆ ಸಂವೇದನಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುವರಿಂದ ನಿಮ್ಮನ್ನು ತಡೆಯಬಹುದು. ಕೆಲಸದ ಒತ್ತಡ ನಿಮ್ಮ ಮನಸ್ಸನ್ನು ಆಕ್ರಮಿಸಿದ್ದರೂ ಸಹ ನಿಮ್ಮ ಪ್ರೀತಿಪಾತ್ರರು ನಿಮಗೆ ಪ್ರಣಯದ ಅಪಾರ ಸಂತೋಷವನ್ನು ತರುತ್ತಾರೆ ಹೊಸ ಯೋಜನೆಗಳು ಮತ್ತು ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ದಿನ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಒಳ್ಳೆಯ ಭೋಜನದ ಜೊತೆಗಿನ ಉತ್ತಮ ರಾತ್ರಿಯ ನಿದ್ರೆಯನ್ನು ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ನಿರೀಕ್ಷಿಸಲಾಗಿದೆ.
ಸಿಂಹ ರಾಶಿ
ನಿಮ್ಮ ಆರೋಗ್ಯ ಸುಧಾರಿಸವುದನ್ನು ಪ್ರಾರಂಭಿಸಲು ಅತ್ಯುತ್ತಮ ದಿನ. ಬಾಕಿಯಿರುವ ವಿಷಯಗಳು ರಹಸ್ಯಮಯವಾಗುತ್ತವೆ ಮತ್ತು ವೆಚ್ಚಗಳು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಕುಟುಂಬದ ಕಾರ್ಯಕ್ರಮದಲ್ಲಿ ಹೊಸ ಸ್ನೇಹಿತರು ಕಾಣುತ್ತಾರೆ. ಆದರೆ ನಿಮ್ಮ ಆಯ್ಕೆಯಲ್ಲಿ ಎಚ್ಚರಿಕೆಯಿಂದಿರಿ. ಒಳ್ಳೆಯ ಸ್ನೇಹಿತರು ನೀವು ಯಾವಾಗಲೂ ಉಳಿಸಿಕೊಳ್ಳಬಯಸುವ ನಿಧಿಯಂತೆ. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ- ನೀವು ಕಾಯ್ದುಕೊಳ್ಳಲು ಕಷ್ಟವಾಗುವ ಭರವಸೆಯನ್ನು ನೀಡಬೇಡಿ. ಉದ್ಯಮಶೀಲ ಜನರ ಸಹಭಾಗಿತ್ವದಲ್ಲಿ ಉದ್ಯಮಗಳನ್ನು ಪ್ರಾರಂಭಿಸಿ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ಒಳ್ಳೆಯ ಭೋಜನದ ಜೊತೆಗಿನ ಉತ್ತಮ ರಾತ್ರಿಯ ನಿದ್ರೆಯನ್ನು ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ನಿರೀಕ್ಷಿಸಲಾಗಿದೆ.
ಕನ್ಯಾ ರಾಶಿ
ನೀವು ಒಂದು ಅಹಿತಕರ, ಮುಜುಗರದ ಮತ್ತು ನಿರುತ್ಸಾಹಿಗಳನ್ನಾಗಿಸುವ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಇದು ನಿಮ್ಮನ್ನು ನಿರುತ್ಸಾಹಿಗಳಾಗಿಸುವ ಬದಲಿಗೆ ನೀವು ಇದರಿಂದ ಕೆಲವು ಪಾಠ ಕಲಿಯಬೇಕು. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಸ್ನೇಹಿತರು ನಿಮ್ಮನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸಬಹುದು. ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿರುತ್ತವೆ. ಪ್ರಮುಖ ವ್ಯಾಪಾರ ಸಮಾಲೋಚನೆಯ ಬಗ್ಗೆ ಮಾತನಾಡುವಾಗ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಹತ್ತಿರದ ಸಹಯೋಗಿಗಳ ಜೊತೆ ಹಲವಾರು ಭಿನ್ನಾಭಿಪ್ರಾಯಗಳು ಉದ್ಭವಿಸಬಹುದಾದ ಒತ್ತಡ ತುಂಬಿದ ದಿನ. ನಿಮ್ಮ ಜೀವನ ಸಂಗಾತಿ ಇಂದು ನಿಮಗೆ ಹೆಚ್ಚುವರಿ ವಿಶೇಷ ಸಮಯವನ್ನು ನೀಡುತ್ತಾರೆ.
ತುಲಾ ರಾಶಿ
ಅಭದ್ರತೆ / ದಿಗ್ಭ್ರಮೆಯ ಭಾವನೆ ತಲೆತಿರುಗುವಿಕೆಯನ್ನು ಉಂಟುಮಾಡಬಹುದು. ನೀವು ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಗಳಿಕೆಯ ಸಾಧ್ಯತೆಯನ್ನು ಹೊಂದಿದ್ದೀರಿ. ನಿಮ್ಮ ಸಮಸ್ಯೆಗಳನ್ನು ಮರೆತು ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಸರಿಯಾದ ಜ್ಞಾನ ಮತ್ತು ತಿಳುವಳಿಕೆಯ ನಂತರ ಸ್ನೇಹಿತರಾಗಿ. ನಿಮ್ಮ ಬಾಸ್ ಮತ್ತು ಹಿರಿಯರನ್ನು ನಿಮ್ಮಲ್ಲಿ ಆಮಂತ್ರಿಸಲು ಒಳ್ಳೆಯ ದಿನವಲ್ಲ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಇಂದು ನಿಮ್ಮ ಸಂಗಾತಿಯ ಜೊತೆ ಒಂದು ಕಾವೇರಿದ ವಾದದಿಂದಾಗಿ ಗೋಡೆಗೆ ತಲೆ ಚಚ್ಚಿಕೊಳ್ಳುವಂತೆ ಅನಿಸಬಹುದು. ನೀವು ಸ್ವಲ್ಪ ಧ್ಯಾನ ಮಾಡುವುದೊಳ್ಳೆಯದು.
ವೃಶ್ಚಿಕ ರಾಶಿ
ಹಣಕಾಸಿನ ಮಿತಿಗಳು ನಿಮಗೆ ಸ್ವಲ್ಪ ಖಿನ್ನತೆ ತರುತ್ತವೆ. ನೀವು ಕಮಿಷನ್ಗಳಿಂದ – ಡಿವಿಡೆಂಡ್ಗಳಿಂದ- ಅಥವಾ ರಾಯಧನಗಳಿಂದ ಪ್ರಯೋಜನ ಪಡೆಯುತ್ತೀರಿ. ತಾಯಿಯ ಕಾಯಿಲೆಗೆ ಕೊಂಚ ಆತಂಕಕ್ಕೆ ಕಾರಣವಾಗಬಹುದು. ನೀವು ಆಕೆಯ ಅನಾರೋಗ್ಯವನ್ನು ಕಡಿಮೆ ಮಾಡಲು ಅವರ ಗಮನವನ್ನುಅನಾರೋಗ್ಯದಿಂದ ಬೇರೆಡೆಗೆ ತಿರುಗಿಸುವ ಅಗತ್ಯವಿದೆ. ನಿಮ್ಮ ಸಲಹೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಪ್ರೀತಿಯ ಇಂದ್ರಜಾಲ ಇಂದು ನಿಮ್ಮನ್ನು ಕಟ್ಟಿಹಾಕಲಿದೆ. ಕೇವಲ ಈ ಆನಂದವನ್ನು ಆಸ್ವಾದಿಸಿ. ನೀವು ಇಂದು ನಿಮ್ಮ ಸಿಹಿಯಾದ ಪ್ರೀತಿಯ ಜೀವನದಲ್ಲಿನ ಉತ್ಕಟತೆಯನ್ನು ಆನಂದಿಸುತ್ತೀರಿ. ಇಂದು ಜನರು ಹೊಗಳಿಕೆಗಳನ್ನು ನೀಡುತ್ತಾರೆ-ಇವುಗಳನ್ನು ನೀವು ಯಾವಾಗಲೂ ಕೇಳಬಯಸಿರುತ್ತೀರಿ. ನಿಮ್ಮ ಸಂಗಾತಿ ಏನೋ ವಿಶೇಷವಾದದ್ದನ್ನು ಯೋಜಿಸಿರುವುದರಿಂದ ಜೀವನ ಇಂದು ನಿಜವಾಗಿಯೂ ಅದ್ಭುತವಾಗಿರುತ್ತದೆ.
ಧನು ರಾಶಿ
ನೀವು ಚೈತನ್ಯದಿಂದ ತುಂಬಿರುತ್ತೀರಿ ಮತ್ತು ಇಂದು ಅಸಾಮಾನ್ಯವಾದದ್ದೇನಾದರೂ ಸಾಧಿಸುತ್ತೀರಿ. ಹಠಾತ್ ಅನಿರೀಕ್ಷಿತ ವೆಚ್ಚಗಳು ಆರ್ಥಿಕ ಒತ್ತಡ ತರಬಹುದು. ಪ್ರೀತಿಪಾತ್ರರೊಡನೆ ನೀವು ಸಮಯ ಕಳೆಯದಿದ್ದರೆ ಅವರಿಗೆ ಕೋಪ ಬರಬಹುದು. ನಿಮ್ಮ ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ. ಇದ್ದಕ್ಕಿದ್ದಂತೆ ಕೆಲಸದಲ್ಲಿ ನಿಮ್ಮ ಶಕ್ತಿ ನಿಜವಾಗಿಯೂ ಕಡಿಮೆಯಾಗಬಹುದು ಹಾಗೂ ಇದು ಅಂತಿಮವಾಗಿ ನಿಮಗೆ ತೊಂದರೆ ನೀಡುತ್ತದೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಇಂದು ತುಂಬಾ ನಿರೀಕ್ಷೆಗಳು ನಿಮ್ಮ ವೈವಾಹಿಕ ಜೀವನವನ್ನು ದುಃಖದೆಡೆಗೆ ನಡೆಸಬಹುದು.
ಮಕರ ರಾಶಿ
ವಿಶ್ರಾಂತಿ ಪ್ರಮುಖವಾದ ಒಂದು ದಿನ – ಇತ್ತೀಚೆಗೆ ನೀವು ಬಹಳಷ್ಟು ಮಾನಸಿಕ ಒತ್ತಡ ಎದುರಿಸುತ್ತಿದ್ದೀರಿ - ಮನೋಲ್ಲಾಸ ಮತ್ತು ಮನೋರಂಜನೆ ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ನಿಮ್ಮ ಜೀವನದಲ್ಲಿ ಒಂದು ಭವ್ಯವಾದ ಲಯವನ್ನು ರೂಪಿಸಿಕೊಳ್ಳಿ ಮತ್ತು ಶರಣಾಗತಿಯ ಮತ್ತು ಹೃದಯದಲ್ಲಿ ಪ್ರೀತಿಯ ಜೊತೆ ನೇರವಾಗಿ ಮತ್ತು ಕೃತಜ್ಞತೆಯಿಂದ ನಡೆಯುವ ಕಲೆಯ ಮೌಲ್ಯಗಳನ್ನು ತಿಳಿದುಕೊಳ್ಳಿ. ಇದು ನಿಮ್ಮ ಕೌಟುಂಬಿಕ ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ. ಹೊಸ ಪ್ರೀತಿಯ ಸಂಪರ್ಕವನ್ನು ಹೊಂದುವ ಅವಕಾಶಗಳು ಬಲವಾಗಿದ್ದರೂ ವೈಯಕ್ತಿಕವಾದ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ಚೆನ್ನಾಗಿ ಅರ್ಥಮಾಡಿಕೊಳ್ಳದೇ ಯಾವುದೇ ವ್ಯಾಪಾರ / ಕಾನೂನುಬದ್ಧ ಕಡತಕ್ಕೆ ಸಹಿ ಮಾಡಬೇಡಿ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ನೀವು ಇಂದು ನಿಮ್ಮ ಸಂಗಾತಿಯ ಒಂದು ಭಾವಪೂರ್ಣ ಚರ್ಚೆಯನ್ನು ಹೊಂದುತ್ತೀರಿ.
ಕುಂಭ ರಾಶಿ
ಒತ್ತಡ ಸಣ್ಣ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಮ್ಮ ವೆಚ್ಚಗಳಲ್ಲಿ ಏರಿಕೆಯಾಗುತ್ತದೆ ಹಾಗೂ ಇದರಿಂದ ನಿಮ್ಮ ಮನಸ್ಸಿಗೆ ತೊಂದರೆಯಾಗುತ್ತದೆ. ನಿಮ್ಮ ಸಾಮಾಜಿಕ ಜೀವನವನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಿಡುವಿರದ ಕೆಲಸದಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ ಹಾಗೂ ನಿಮ್ಮ ಕುಟುಂಬದೊಂದಿಗೆ ಯಾವುದಾದರೂ ಪಾರ್ಟಿಗೆ ಹೋಗಿ. ಇದು ನಿಮ್ಮ ಒತ್ತಡ ನಿವಾರಿಸುವುದಲ್ಲದೇ ಆದರೆ ನಿಮ್ಮ ಹಿಂಜಿರಿಕೆಯನ್ನೂ ತೆಗೆದುಹಾಕುತ್ತದೆ. ನಿಮ್ಮ ಪ್ರೀತಿಪಾತ್ರರನ್ನು ಸಂತೋಷಪಡಿಸುವುದು ಕಷ್ಟವಾಗುತ್ತದೆ. ನೀವು ಸಮಯವೇ ಹಣವೆಂದು ನೀವು ನಿಮ್ಮ ಅತ್ಯುತ್ತಮ ಸಂಭಾವ್ಯತಯನ್ನು ತಲುಪಲು ಹೆಜ್ಜೆಗಳನ್ನಿಡಬೇಕು. ನೀವು ಅತುರದ ನಿರ್ಣಯಗಳನ್ನು ಕೈಗೊಂಡರೆ ಮತ್ತು ಅನಗತ್ಯ ಕ್ರಮಗಳನ್ನು ಕೈಗೊಂಡರೆ ಈ ದಿನ ನಿಮ್ಮನ್ನು ನಿರಾಸೆಗೊಳಿಸುತ್ತದೆ. ನೀವು ಶಾಂತವಾಗಿರದಿದ್ದಲ್ಲಿ ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ನಿಜವಾಗಿಯೂ ತೊಂದರೆ ಅನುಭವಿಸಬಹುದು.
ಮೀನ ರಾಶಿ
ಧ್ಯಾನ ಪರಿಹಾರ ತರುತ್ತದೆ. ದೊಡ್ಡ ಯೋಜನೆಗಳನ್ನು ಮತ್ತು ಕಲ್ಪನೆಗಳಿರುವ ಯಾರಾದರೂ ನಿಮ್ಮ ಗಮನ ಸೆಳೆಯುತ್ತಾರೆ - ಯಾವುದೇ ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ. ಸ್ನೇಹಿತರು ನಿಮಗೆ ಬೆಂಬಲ ನೀಡಿದರೂ -ಆದರೆ ಮಾತುಗಳ ಬಗ್ಗೆ ಎಚ್ಚರದಿಂದಿರಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ಕಷ್ಟವಾಗಬಹುದು. ಇಂದು ನೀವು ನಿಮ್ಮ ಗಳಿಕೆಯ ಶಕ್ತಿಯನ್ನು ಹೆಚ್ಚಿಸಲು ತ್ರಾಣ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ನಿಮ್ಮ ಪ್ರೇಮಿಯಾದ ನಿಮ್ಮ ಜೀವನ ಸಂಗಾತಿಯ ಆರೋಗ್ಯ ಇಂದು ಉಲ್ಬಣಗೊಳ್ಳಬಹುದು. ಜಾಗ್ರತೆಯಿಂದಿರಿ.














ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ