ಭವಿಷ್ಯ 2-11-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಬುಧವಾರ, ನವೆಂಬರ್ 1, 2017

ಭವಿಷ್ಯ 2-11-2017

ಭವಿಷ್ಯ 
ಮೇಷ ರಾಶಿ 
ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೂಡಿಕೆ ಶಿಫಾರಸು ಮಾಡಲಾಗಿದ್ದರೂ ಸರಿಯಾದ ಸಲಹೆ ಪಡೆಯಬೇಕು. ನಿಮ್ಮ ಸಹೋದರನಿಗೆ ವಿಷಯಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಹಾಯ ಮಾಡಿ. ವ್ಯಾಜ್ಯಗಳನ್ನು ಅನಗತ್ಯವಾಗಿ ಹೆಚ್ಚಿಸದೇ ಅವುಗಳನ್ನು ಸೌಹಾರ್ದತೆಯಿಂದ ಪರಿಹರಿಸಲು ಪ್ರಯತ್ನಿಸಿ. ನೀವು ಇಂದು ಪ್ರೀತಿ ಮಾಡುವ ಅವಕಾಶವನ್ನು ಕಳೆದುಕೊಳ್ಳದಿದ್ದಲ್ಲಿ, ನಿಮ್ಮ ಇಡೀ ಜೀವನದಲ್ಲಿ ಈ ದಿನವನ್ನು ಎಂದಿಗೂ ಮರೆಯುವುದಿಲ್ಲ. ನೀವೇನೇ ಮಾಡಿದರೂ ನೀವು ಅಧಿಕಾರಯುತ ಸ್ಥಾನದಲ್ಲಿರುತ್ತೀರಿ. ಪ್ರಯಾಣ ಹೊಸ ಸ್ಥಳಗಳನ್ನು ನೋಡಲು ಮತ್ತು ಪ್ರಮುಖರನ್ನು ಭೇಟಿಯಾಗಲು ನಿಮಗೆ ಅವಕಾಶ ನೀಡುತ್ತದೆ. ಇಂದು ಜಗತ್ತೇ ಮುಳುಗಿದರೂ ನೀವು ನಿಮ್ಮ ಪ್ರೀತಿಪಾತ್ರರ ಬಾಹುಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ.
ವೃಷಭ ರಾಶಿ
ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗಿನ ಸಂತಸದ ಪ್ರಯಾಣ ನಿಮಗೆ ಸಮಾಧಾನ ನೀಡುತ್ತದೆ. ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ. ಆಕಾಶ ಪ್ರಕಾಶಮಾನವಾಗಿ ಕಾಣುತ್ತದೆ, ಹೂಗಳು ಹೆಚ್ಚು ವರ್ಣರಂಜಿತವಾಗಿ ತೋರುತ್ತದೆ, ನಿಮ್ಮ ಸುತ್ತಲೂ ಎಲ್ಲವೂ ಮಿನುಗುತ್ತದೆ; ಏಕೆಂದರೆ ನೀವು ಪ್ರೀತಿಯಲ್ಲಿದ್ದೀರಿ! ನಿಮ್ಮ ನಿರಂತರ ಶ್ರಮ ಇಂದು ನಿಜವಾಗಿಯೂ ಚೆನ್ನಾಗಿ ಫಲ ನೀಡುತ್ತದೆ. ರಹಸ್ಯ ಶತ್ರುಗಳು ನಿಮ್ಮ ಬಗ್ಗೆ ವದಂತಿಗಳು ಹರಡಲು ಉತ್ಸಾಹಿಗಳಾಗಿರುತ್ತಾರೆ. ಚುಂಬನ, ಅಪ್ಪುಗೆ, ಪ್ರೀತಿ, ಮತ್ತು ಮೋಜು, ಈ ದಿನ ನಿಮ್ಮ ಅರ್ಧಾಂಗಿಯ ಜೊತೆಗಿನ ಪ್ರಣಯದ ಬಗೆಗಾಗಿದೆ.
ಮಿಥುನ ರಾಶಿ
ಕಿಕ್ಕಿರಿದ ಬಸ್‌ನಲ್ಲಿ ಪ್ರಯಾಣಿಸುವಾಗ ರಕ್ತದೊತ್ತಡವಿರುವ ರೋಗಿಗಳು ಅವರ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟುಮಾಡುತ್ತದೆ. ಕೋಪ ಅಲ್ಪಾವಧಿ ಹಾಗೂ ಅದು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸಬಹುದೆಂದು ಅರ್ಥ ಮಾಡಿಕೊಳ್ಳುವ ಸಮಯ. ಸಮಯ, ಕೆಲಸ, ಹಣ, ಸ್ನೇಹಿತರು, ಕುಟುಂಬ, ಬಂಧುಗಳು; ಎಲ್ಲವೂ ಒಂದು ಕಡೆ ಮತ್ತು ನಿಮ್ಮ ಸಂಗಾತಿಯ ಜೊತೆ ನೀವು ಇನ್ನೊಂದು ಕಡೆಗಿರುತ್ತೀರಿ. ನೀವು ದೀರ್ಘಕಾಲದ ಪ್ರಯೋಜನಗಳನ್ನು ಹೊಂದಿರುವ ಯೋಜನೆಗಳ ಮೇಲೆ ಕೆಲಸ ಮಾಡಬೇಕು. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ಮದುವೆಯ ನಂತರ ಪ್ರೀತಿ ಕಷ್ಟವೆಂದು ತೋರುತ್ತದೆ, ಆದರೆ ಅದು ನಿಮ್ಮ ಜೊತೆ ಇದು ದಿನವಿಡೀ ನಡೆಯುತ್ತಿದೆ.
ಕರ್ಕ ರಾಶಿ
ಸಂಜೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ಹಣಕಾಸಿನಲ್ಲಿ ಸುಧಾರಣೆ ನೀವು ಪ್ರಮುಖ ಖರೀದಿಗಳನ್ನು ಮಾಡುವುದನ್ನು ಅನುಕೂಲಕರವಾಗಿಸುತ್ತದೆ. ಕುಟುಂಬದ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ಮೂಲಕ .ನೀವು ನಿಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತೀರಿ. ಇಂದು ಪ್ರೇಮನಿವೇದನೆ ತಿರುಗೇಟು ನೀಡಬಹುದಾದ್ದರಿಂದ ನಿಮ್ಮ ಸೋಲುಗಳಿಂದ ನೀವು ಪಾಠ ಕಲಿಯಬೇಕು ಮೋಸದಿಂದ ನಿಮ್ಮನ್ನು ಕಾಪಾಡಿಕೊಳ್ಳಲು ವ್ಯವಹಾರದಲ್ಲಿ ಎಚ್ಚರದಿಂದಿರಿ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ನಿಮ್ಮ ಸಂಗಾತಿ ಇಂದು ನಿಮ್ಮ ದೈನಂದಿನ ಅಗತ್ಯಗಳನ್ನು ಈಡೇರಿಸುವುದನ್ನು ನಿಲ್ಲಿಸಬಹುದು ಹಾಗೂ ಅಂತಿಮವಾಗಿ ಇದು ನಿಮ್ಮ ಮನಸ್ಥಿತಿಯನ್ನು ಹಾಳುಗೆಡವಬಹುದು.
ಸಿಂಹ ರಾಶಿ
ವಿಶೇಷವಾಗಿ ದಾಟುವಿಕೆಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ ಮತ್ತು ನಿಮ್ಮ ಸ್ನೇಹಿತರ ಜೊತೆ ಕೆಲವು ಆಹ್ಲಾದಕರ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ನಿಮ್ಮ ಕಚೇರಿ ಕೆಲಸದ ಕಾರಣ ಹಾಳಾಗಬಹುದು. ನಿಮ್ಮ ಸಂಬಂಧದಲ್ಲಿ ವಾಸ್ತವವಾದಿಗಳಾಗಿರಲು ಪ್ರಯತ್ನಿಸಿ. ಸಹಭಾಗಿತ್ವ ಯೋಜನೆಗಳು ಲಾಭಕ್ಕಿಂತ ಹೆಚ್ಚಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತವೆ - ನೀವು ಯಾರಾದರೂ ನಿಮ್ಮ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ನಿಮ್ಮ ಮೇಲೆ ನೀವೇ ಕೋಪಗೊಳ್ಳುತ್ತೀರಿ. ಪ್ರವಾಸದ ಅವಕಾಶಗಳನ್ನು ಪರಿಶೋಧಿಸಬೇಕು. ತೊಂದರೆಗಳು ಜೀವನದ ಭಾಗವಾಗಿದೆ. ಇಂದು, ನಿಮ್ಮ ವೈವಾಹಿಕ ಜೀವನ ಅದಕ್ಕೆ ಬಲಿಪಶುವಾಗಬಹುದು.
ಕನ್ಯಾ ರಾಶಿ
ಕೆಲವು ಹಿನ್ನಡೆ ಎದುರಿಸುವ ಸಾಧ್ಯತೆಯಿದೆ. ಧೃತಿಗೆಡಬೇಡಿ ಹಾಗೂ ನಿರೀಕ್ಷಿತ ಫಲಿತಾಂಶ ಪಡೆಯಲು ಕಠಿಣ ಪರಿಶ್ರಮಪಡಿ. ಈ ಹಿನ್ನಡೆಗಳು ನಿಮ್ಮ ಯಶಸ್ಸಿನ ಸೋಪಾನಗಳಾಗಿರಲಿ. ಬಿಕ್ಕಟ್ಟಿನ ಸಮಯದಲ್ಲಿ ಸಂಬಂಧಿಗಳೂ ಸಹಾಯ ಮಾಡುತ್ತಾರೆ. ನೀವು ಸರಿಯಾದ ಸಲಹೆ ಪಡೆಯದೆ ಹೂಡಿಕೆ ಮಾಡಿದಲ್ಲಿ ಸೋಲಿನ ಸಾಧ್ಯತೆಗಳಿವೆ. ಮಕ್ಕಳು ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿ ನಿಮಗೆ ನಿರಾಶೆಯುಂಟುಮಾಡಬಹುದು. ನಿಮ್ಮ ಕನಸು ನನಸಾಗಿಸಲು ನೀವು ಅವರನ್ನು ಪ್ರೋತ್ಸಾಹಿಸಬೇಕು. ಇಂದು ಆನಂದ. ನೀವು ನಿಮ್ಮ ಕೆಲಸದಲ್ಲಿ ವಹಿಸುವ ಎಲ್ಲಾ ಶ್ರಮವೂ ಇಂದು ಫಲ ನೀಡುತ್ತದೆ. ಪ್ರಯಾಣ ಸಂತೋಷಕರ ಮತ್ತು ಹೆಚ್ಚು ಅನುಕೂಲಕರವಾಗಿರುತ್ತದೆ. ನೀವು ಇಂದು ನಿಮ್ಮ ಸಂಗಾತಿಯ ಒಂದು ಕಠಿಣ ಸ್ವರೂಪವನ್ನು ನೋಡಬಹುದು.
ತುಲಾ ರಾಶಿ
ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ - ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಕುಟುಂಬದ ಸದಸ್ಯರೊಂದಿಗೆ ಒಂದು ಶಾಂತಿಯುತ ಮತ್ತು ಶಾಂತ ದಿನವನ್ನು ಆನಂದಿಸಿ  ಜನರು ಸಮಸ್ಯೆಗಳೊಡನೆ ನಿಮ್ಮನ್ನು ಸಮೀಪಿಸಿದರೆ - ಅವರನ್ನು ನಿರ್ಲಕ್ಷಿಸಿ ಮತ್ತು ನಿಮ್ಮ ಮನಸ್ಸಿನಲ್ಲಿ ಈ ಚಿಂತೆ ಬೇರೂರಲು ಅವಕಾಶ ನೀಡಬೇಡಿ. ಇಂದು ನೀವು ಒಂದು ಹೃದಯ ಒಡೆಯುವುದನ್ನು ತಪ್ಪಿಸುತ್ತೀರಿ. ಇಂದು ಕೆಲಸದಲ್ಲಿ ಎಲ್ಲರೂ ನಿಮಗೆ ಪ್ರೀತಿ ಮತ್ತು ಬೆಂಬಲ ನೀಡುತ್ತಾರೆ. ಧರ್ಮಕಾರ್ಯಗಳು / ಹವನಗಳು / ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳಲಾಗುವುದು. ಹಾಗೆ, ನೀವು ನಿಮ್ಮ ಸಂಗಾತಿಯ ಮೇಲೆ ಇಂದು ಬಹಳ ಹಣ ಖರ್ಚು ಮಾಡುವಂತೆ ತೋರುತ್ತದೆ, ಆದರೆ ಒಳ್ಳೆಯ ಸಮಯವನ್ನಂತೂ ಹೊಂದಿರುತ್ತೀರಿ.
ವೃಶ್ಚಿಕ ರಾಶಿ 
ನಿಮ್ಮ ಸಂಗಾತಿಯ ನಿಷ್ಠಾವಂತ ಹೃದಯ ಮತ್ತು ಅದ್ಭುತ ಚೈತನ್ಯ ನಿಮಗೆ ಸಂತೋಷ ನೀಡಬಹುದು. ದೊಡ್ಡ ಗುಂಪಿನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮನರಂಜನಾತ್ಮಕವಾಗಿರುತ್ತದೆ - ಆದರೆ ನಿಮ್ಮ ವೆಚ್ಚಗಳು ಹಚ್ಚಾಗುತ್ತವೆ. ಕಲ್ಪನೆಗಳ ಹಿಂದೆ ಓಡಬೇಡಿ ಹಾಗೂ ಸಾಧ್ಯವಾದಷ್ಟೂ ವಾಸ್ತವವಾದಿಗಳಾಗಿರಿ. ನಿಮ್ಮ ಸ್ನೇಹಿತರ ಜೊತೆ ಸಮಯ ಕಳೆಯಿರಿ –ಇದು ಒಳ್ಳೆಯದನ್ನು ಮಾಡುತ್ತದೆ. ಪ್ರಣಯದ ಮನೋಭಾವದಲ್ಲಿನ ಹಠಾತ್ ಬದಲಾವಣೆ ನಿಮಗೆ ಅಸಮಾಧಾನ ಇರಬಹುದು. ನೌಕರರೊಡನೆ - ಸಹೋದ್ಯೋಗಿಗಳು ಮತ್ತು ಸಹಭಾಗಿಗಳೊಂದಿಗೆ ತೊಂದರೆಗಳ ಸಾಧ್ಯತೆಯನ್ನು ತಳ್ಳಿಹಾಕಲಾಗದು. ನೀವು ಒಂದು ಪರಿಸ್ಥಿತಿಯಿಂದ ಓಡಿಹೋದಲ್ಲಿ - ಇದು ನಿಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಸರಿಸುತ್ತದೆ. ನಿಮ್ಮ ಸಂಗಾತಿ ನಿಮ್ಮ ಒಂದು ಯೋಜನೆಯನ್ನು ಹಾಳುಮಾಡಬಹುದು; ತಾಳ್ಮೆ ಕಳೆದುಕೊಳ್ಳಬೇಡಿ.
ಧನು ರಾಶಿ
ಇಂದು ನೀವು ಪ್ರಮುಖ ನಿರ್ಧಾರ ಕೈಗೊಳ್ಳಬೇಕು – ಇದು ನಿಮ್ಮನ್ನು ಒತ್ತಡ ಹಾಗೂ ಉದ್ವೇಗಕ್ಕೆ ಒಳಪಡಿಸುತ್ತದೆ. ನೀವು ಜನರು ನಿಮ್ಮಿಂದ ಏನು ಬಯಸುತ್ತಾರೆಂದು ನಿಖರವಾಗಿ ತಿಳಿದಿರುವಂತೆ ತೋರುತ್ತದೆ -ಆದರೆ ಇಂದು ನಿಮ್ಮ ಖರ್ಚುಗಳಲ್ಲಿ ತುಂಬಾ ಉದಾರಿಯಾಗದಿರಲು ಪ್ರಯತ್ನಿಸಿ. ಮಕ್ಕಳಿಗೆ ಅವರ ಮನೆಗೆಲಸ ಪೂರ್ಣಗೊಳಿಸಲು ಸಹಾಯ ಮಾಡುವ ಸಮಯ. ನಿಮ್ಮನ್ನು ದೀರ್ಘಕಾಲ ಹಿಡಿದಿಟ್ಟಿರುವ ಒಂದು ಏಕಾಂಗಿ ಹಂತ ನಿಮ್ಮ ಜೀವನ ಸಂಗಾತಿ ದೊರಕಿದ ತಕ್ಷಣ ಕೊನೆಗೊಳ್ಳುತ್ತದೆ. ಇಂದು ಮಾಡಿದ ಹೂಡಿಕೆ ಲಾಭದಾಯಕವಾಗಿದ್ದರೂ ನೀವು ಬಹುಶಃ ಪಾಲುದಾರರಿಂದ ವಿರೋಧ ಎದುರಿಸುತ್ತೀರಿ. ಪ್ರವಾಸಗಳು ಮತ್ತು ಪ್ರಯಾಣಗಳು ಆನಂದ ತರುತ್ತವೆ ಮತ್ತು ಹೆಚ್ಚು ಶಿಕ್ಷಣ ನೀಡುತ್ತವೆ. ಸ್ವಲ್ಪವೇ ಪ್ರಯತ್ನಗಳನ್ನು ಮಾಡಿದಲ್ಲಿ, ಈ ದಿನ ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನವಾಗಬಹುದು.
ಮಕರ ರಾಶಿ 
ಭಾವನಾತ್ಮಕವಾಗಿ ನಿಮಗೇನು ನಿಜವಾಗಿಯೂ ಏನು ಬೇಕು ಎನ್ನುವ ಬಗ್ಗೆ ನೀವು ಚಂಚಲ ಮನೋಭಾವ ಹೊಂದಿರುತ್ತೀರಿ. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಅದರೆ ಹಾಗೆ ಮಾಡಿದಲ್ಲಿ ನೀವು ವಿಷಾದಿಸುತ್ತೀರಿ. ನಿಮ್ಮ ಸಂಗಾತಿ ಬೆಂಬಲ ನೀಡುತ್ತಾರೆ ಹಾಗೂ ಸಹಾಯ ಮಾಡುತ್ತಾರೆ. ಹಠಾತ್ ಗೆಳೆತನ ಪಶ್ಚಾತ್ತಾಪ ತರುವುದರಿಂದ ಅದನ್ನು ತಪ್ಪಿಸಿ. ಸಕಾರಾತ್ಮಕ ಧೋರಣೆಯ ನಿಮ್ಮ ಆಂತರಿಕ ಮೌಲ್ಯಗಳು ನಿಮಗೆ ಕೆಲಸದ ಸ್ಥಳದಲ್ಲಿ ಯಶಸ್ಸು ತರುತ್ತವೆ. ಆಂತರಿಕ ಗುಣಗಳು ನಿಮಗೆ ತೃಪ್ತಿ ತರುತ್ತವೆ-ಸಕಾರಾತ್ಮಕ ದೃಷ್ಟಿಕೋನ ಬಯಸಿದ ಯಶಸ್ಸು ನೀಡುತ್ತದೆ. ಪ್ರವಾಸದ ಅವಕಾಶಗಳನ್ನು ಪರಿಶೋಧಿಸಬೇಕು. ನಿಮ್ಮ ಸಂಗಾತಿ ನಿಮ್ಮ ಜೊತೆ ಸ್ವಲ್ಪ ವಿಚಿತ್ರವಾಗಿ ನಡೆದುಕೊಳ್ಳಬಹುದು. ನಿಮ್ಮ ತಾಳ್ಮೆ ಕದಡಲು ಬಿಡಬೇಡಿ.
ಕುಂಭ ರಾಶಿ 
ಮಾನಸಿಕ ಶಾಂತಿಗಾಗಿ ನಿಮ್ಮ ಒತ್ತಡವನ್ನು ಪರಿಹರಿಸಿ. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು. ದೂರದ ಸಂಬಂಧಿಗಳಿಂದ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು ತರುವುದು. ನಿಮ್ಮ ಪ್ರೀತಿಪಾತ್ರರ ಅನಗತ್ಯ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಡಿ. ನೀವೇನೇ ಮಾಡಿದರೂ ನೀವು ಅಧಿಕಾರಯುತ ಸ್ಥಾನದಲ್ಲಿರುತ್ತೀರಿ. ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಬೇಕು. ಒಂದು ಸಂಬಂಧಿಕರು ಇಂದು ನಿಮ್ಮನ್ನು ಅಚ್ಚರಿಗೊಳಿಸಬಹುದು, ಆದರೆ ಇದು ನಿಮ್ಮ ಯೋಜನೆಗೆ ತೊಂದರೆಯುಂಟುಮಾಡಬಹುದು.
ಮೀನ ರಾಶಿ
ಚಿಂತೆಯ ಆಲೋಚನೆಗಳು ನಿಮ್ಮ ಸಂತೋಷವನ್ನು ಹಾಳುಮಾಡಬಹುದು. ಇದು ಕೇವಲ ವಿನಾಶಕಾರಿ ಶಕ್ತಿಯನ್ನು ಮಾತ್ರ ಪಾಲಿಸಿ ಖಿನ್ನತೆಯ ಬೀಜ ಬಿತ್ತುವುದರಿಂದ ಅದಕ್ಕೆ ಅವಕಾಶ ನೀಡಬೇಡಿ. ಯಾವಾಗಲೂ ಒಳ್ಳೆಯದನ್ನು ನಿರೀಕ್ಷಿಸಲು ನಿಮ್ಮನ್ನು ಪ್ರೋತ್ಸಾಹಿಸಕೊಳ್ಳಿ ಹಾಗೂ ದುರ್ಘಟನೆಗಳಲ್ಲೂ ಹಾಸ್ಯವನ್ನು ನೋಡಲು ಪ್ರಯತ್ನಿಸಿ. ಹಣಕಾಸು ಲಾಭ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಬರುತ್ತದೆ. ಇಂದು ನೀವು ನಿಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಂದ ಬೆಂಬಲ ಪಡೆದು ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯುತ್ತೀರಿ. ಸಂತೋಷಕ್ಕಾಗಿ ಹೊಸ ಸಂಬಂಧವನ್ನು ಎದುರುನೋಡಬಹುದು ಕೆಲವರಿಗೆ ವೃತ್ತಿಪರ ಬೆಳವಣಿಗೆ. ಹೆಚ್ಚಿನ ವಿಷಯಗಳು ನೀವು ಬಯಸಿದಂತೆ ಅಗುವ –ಒಂದು ಉಜ್ವಲವಾದ ಹಾಸ್ಯದಿಂದ ತುಂಬಿದ ದಿನ. ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮ್ಮ ಜೀವನ ಸಂಗಾತಿಯ ಜೊತೆ ನೀವು ಹೊಂದಿದ ಹಳೆಯ ಸುಂದರ ನೆನಪುಗಳನ್ನು ಮತ್ತೆ ನೆನಪಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here