ಕ್ಯಾಬ್, ಆಟೋ, ಬೈಕ್ ನಂತ್ರ ಈಗ `ಓಲಾ ಪೆಡಲ್'...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಭಾನುವಾರ, ನವೆಂಬರ್ 12, 2017

ಕ್ಯಾಬ್, ಆಟೋ, ಬೈಕ್ ನಂತ್ರ ಈಗ `ಓಲಾ ಪೆಡಲ್'...!

ಆಯಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಹಾಗೂ ಉಬರ್ ಪ್ರಯಾಣಿಕರ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದೆ. ಪ್ರತಿಯೊಂದು ವರ್ಗಕ್ಕೂ ಹತ್ತಿರವಾಗಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ತನ್ನ ಕಾರ್ಯಕ್ಷೇತ್ರವನ್ನು ಅಭಿವೃದ್ಧಿಪಡಿಸಿಕೊಳ್ತಿದೆ.
ಇತ್ತೀಚಿಗೆ ಹೊಸ ಸೇವೆಯನ್ನು ಓಲಾ ಶುರುಮಾಡಿದೆ. ಕ್ಯಾಬ್, ಆಟೋ, ಬೈಕ್ ನಂತ್ರ ಈಗ ಸೈಕಲನ್ನು ಬಾಡಿಗೆಗೆ ನೀಡ್ತಿದೆ. ಕಡಿಮೆ ದೂರ ತಲುಪಲು ಸೈಕಲ್ ಬೆಸ್ಟ್. ಪರಿಸರ ರಕ್ಷಣೆ ಜೊತೆಗೆ ಆರೋಗ್ಯ ವೃದ್ಧಿಗೂ ಇದು ಸಹಕಾರಿ. ಪ್ರಾಯೋಗಿಕ ಯೋಜನೆಯಾಗಿ `ಓಲಾ ಪೆಡಲ್' ಹೆಸರಿನ ಹೊಸ ಸೇವೆ ಶುರುಮಾಡಿದೆ.
ಕಾನ್ಪುರದ ಐಐಟಿ ಕ್ಯಾಂಪಸ್ ನಲ್ಲಿ ಈ ಸೇವೆ ಶುರುವಾಗಿದೆ. ಕ್ಯಾಂಪಸ್ ಒಳಗೆ ಬರಲು ಹಾಗೂ ಹೊರಗೆ ಹೋಗಲು ವಿದ್ಯಾರ್ಥಿಗಳಿಗೆ ಸೈಕಲ್ ಸೇವೆ ನೀಡ್ತಾಯಿದೆ ಓಲಾ. ಈ ಯೋಜನೆಯಡಿ 600 ಸೈಕಲ್ ಕ್ಯಾಂಪಸ್ ನಲ್ಲಿ ಲಭ್ಯವಿದೆ. ಆಯಪ್ ಮೂಲಕ ಸೈಕಲ್ ಬುಕ್ ಮಾಡಬೇಕಾಗುತ್ತದೆ. ಇದಕ್ಕೆ ಒಂದು ಕೋಡ್ ನೀಡಲಾಗುತ್ತದೆ. ಆ ಕೋಡ್ ಸಹಾಯದಿಂದ ಸೈಕಲ್ ಲಾಕ್ ತೆಗೆಯಬಹುದು. ಕೆಲಸ ಮುಗಿದ ತಕ್ಷಣ ಸ್ಥಳೀಯ ಓಲಾ ಪಾರ್ಕಿಂಗ್ ಪ್ಲೇಸ್ ಗೆ ಇದನ್ನು ತಲುಪಿಸಬೇಕಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here