ಭವಿಷ್ಯ
ಮೇಷ ರಾಶಿ
ನೀವು ಕೆಲವು ಅನಿವಾರ್ಯ ಅತಿಥಿಗಳನ್ನು ಭೇಟಿಯಗುವುದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಿ. ಈಗಿನ ಅಗತ್ಯವೆಂದರೆ ಸ್ವಯಂ ನಿಯಂತ್ರಣವಾಗಿದ್ದು-ಇದು ನಿಮ್ಮ ಸ್ವಭಾವದ ಮೂಲವಾಗಿದೆ. ಮೀಟಿಂಗ್ ನಿಮಗೆ ಅನುಕೂಲವಾಗುವುದರಿಂಡ ಅನವಶ್ಯಕ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ಒಂದು ಮಂಕು ಕವಿದ ಮತ್ತು ನಿಧಾನ ದಿನದಲ್ಲಿ ಸ್ನೇಹಿತರು ಮತ್ತು ಸಂಗಾತಿ ನಿಮಗೆ ಆರಾಮ ಮತ್ತು ಸಂತೋಷ ತರುತ್ತಾರೆ. ನಿಮ್ಮ ಪ್ರೀತಿಯನ್ನು ಅಮೂಲ್ಯ ವಸ್ತುಗಳಂತೆ ಹೊಸತನದಿಂದಿಡಿ. ಶ್ರೇಷ್ಠ ಜನರೊಡನೆ ಸಂಬಂಧ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮತ್ತು ಯೋಜನೆಗಳನ್ನು ತರುತ್ತದೆ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ನೀವು ವೈವಾಹಿಕ ಜೀವನವೆಂದರೆ ಕೇವಲ ಹೊಂದಾಣಿಕೆಯೆಂದುಕೊಂಡಿದ್ದೀರಾ? ಹೌದಾದಲ್ಲಿ ನೀವು ಇದು ಅದು ನಿಮ್ಮ ಜೀವನದಲ್ಲಿ ಆದ ಅತ್ಯುತ್ತಮ ವಿಷಯವೆಂದು ತಿಳಿದುಕೊಳ್ಳುತ್ತೀರಿ.
ವೃಷಭ ರಾಶಿ
ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ – ನೀವೇನೇ ಮಾಡಿದರೂ ಸಾಮಾನ್ಯವಾಗಿ ನೀವು ತೆಗೆದುಕೊಳ್ಳುವ ಅರ್ಧ ಸಮಯದಲ್ಲಿ ಅದನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಹಣಕಾಸಿನಲ್ಲಿ ಅತೀ ಉದಾರವಾಗಿದ್ದಲ್ಲಿ ನಿಮ್ಮ ದುರುಪಯೋಗ ತೆಗೆದುಕೊಳ್ಳಲಾಗುತ್ತದೆ. ಕೌಟುಂಬಿಕ ಜೀವನಕ್ಕೆ ಸರಿಯಾದ ಸಮಯ ಮತ್ತು ಗಮನವನ್ನು ನೀಡಿ. ಕಚೇರಿಯಲ್ಲಿ ಅತಿಯಾದ ಸಮಯ ಕಳೆಯುವುದು ಮುಂದೆ ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಅವರ ಸಲುವಾಗಿ ಕಾಳಜಿ ವಹಿಸುತ್ತೀರೆಂದು ಅವರಿಗೆ ಅರ್ಥವಾಗಲಿ. ಪ್ರಣಯ ಸಂತೋಷಕರವೂ ಮತ್ತು ಅದ್ಭುತವೂ ಆಗಬಹುದು. ನೀವು ಇಂದು ಚಿಕ್ಕ ಆದರೆ ಪ್ರಮುಖವಾದ ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇಂದು ವಿಷಯಗಳು ನೀವು ಬಯಸುವ ರೀತಿಯಲ್ಲಿ ನಡೆಯದ ದಿನಗಳಲ್ಲಿ ಒಂದು. ಈ ದಿನ ನಿಮ್ಮ ಎಂದಿನ ವೈವಾಹಿಕ ಜೀವನದಲ್ಲಿ ವಿಶೇಷವಾಗಿರುತ್ತದೆ, ನೀವು ಇಂದು ಅಸಾಮಾನ್ಯವಾದದ್ದೇನಾದರೂ ಅನುಭವಿಸುತ್ತೀರಿ.
ಮಿಥುನ ರಾಶಿ
ಒಟ್ಟಾರೆ ಆರೋಗ್ಯ ಉತ್ತಮವಾಗಿದ್ದರೂ ಪ್ರಯಾಣ ಒತ್ತಡಮಯವೂ ಮತ್ತು ಕಷ್ಟಕರವೂ ಆಗಿರುತ್ತದೆ. ಹಣಕಾಸು ಲಾಭಗಳು ವಿವಿಧ ಮೂಲಗಳಿಂದ ಬರುತ್ತದೆ. ಒಬ್ಬ ಹಳೆಯ ಸ್ನೇಹಿತರು ಸಂಜೆ ನಿಮಗೆ ಕರೆ ಮಾಡುತ್ತಾರೆ ಮತ್ತು ಹಳೆಯ ನೆನಪುಗಳನ್ನು ತೆರೆದಿಡುತ್ತಾರೆ. ನಿಮ್ಮ ಹೃದಯಕ್ಕೆ ಪ್ರಿಯವಾಗುವ ಯಾರನ್ನಾದರೂ ಸಂಧಿಸುವ ಅವಕಾಶಗಳು ಇಂದು ಬಲವಾಗಿವೆ. ಪಾಲುದಾರರು ನಿಮ್ಮ ಹೊಸ ಯೋಜನೆಗಳು ಮತ್ತು ಸಾಹಸಗಳ ಬಗ್ಗೆ ಉತ್ಸಾಹ ತೋರಿಸುತ್ತಾರೆ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮಗೆ ಮತ್ತು ನಿಮ್ಮ ಸಂಗಾತಿಗೆ ಇಂದು ಅದ್ಭುತ ಸುದ್ದಿ ಸಿಗುತ್ತವೆ.
ಕರ್ಕ ರಾಶಿ
ಖಿನ್ನತೆಯನ್ನು ಹೊಡೆದೋಡಿಸಿ – ಇದ ನಿಮ್ಮನ್ನು ಆವರಿಸಿಕೊಳ್ಳುತ್ತಿದೆ ಮತ್ತು ನಿಮ್ಮ ಪ್ರಗತಿಗೆ ಅಡ್ಡಿಪಡಿಸುತ್ತಿದೆ. ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ದಿನದ ಕೊನೆಯಲ್ಲಿ ಒಬ್ಬ ಹಳೆಯ ಸ್ನೇಹಿತರ ಭೇಟಿ ನಿಮ್ಮ ಸಂಜೆಯನ್ನು ಬೆಳಗಿಸುತ್ತದೆ. ನೀವು ಆ ಸುವರ್ಣ ದಿನಗಳನ್ನು ನೆನಪಿಸಿಕೊಳ್ಳುವ ಜೊತೆ ನಿಮ್ಮ ಬಾಲ್ಯದ ಸವಿನೆನಪುಗಳನ್ನೂ ಆನಂದಿಸುತ್ತೀರಿ. ಅಧಿಕ ಭಾವನೆಗಳು ನಿಮ್ಮ ದಿನವನ್ನು ನಾಶಮಾಡಬಹುದು - ವಿಶೇಷವಾಗಿ ನೀವು ನಿಮ್ಮ ಪ್ರೀತಿಪಾತ್ರರು ಇತರರೊಂದಿಗೆ ತುಂಬಾ ಸ್ನೇಹದಿಂದಿರುವುದನ್ನು ಕಂಡಾಗ. ಚೆನ್ನಾಗಿ ಅರ್ಥಮಾಡಿಕೊಳ್ಳದೇ ಯಾವುದೇ ವ್ಯಾಪಾರ / ಕಾನೂನುಬದ್ಧ ಕಡತಕ್ಕೆ ಸಹಿ ಮಾಡಬೇಡಿ. ನೀವು ತಪ್ಪು ದಾರಿಗೆಳೆಯಲು ಅಥವಾ ನಿಮಗೆ ಹಾನಿ ಮಾಡುವ ಮಾಹಿತಿ ನೀಡಲು ಪ್ರಯತ್ನಿಸುವ ವ್ಯಕ್ತಿಗಳ ಬಗ್ಗೆ ಎಚ್ಚರಿದಿಂದಿರಿ. ಸುತ್ತಲಿರುವ ಎಲ್ಲವೂ ಕೆಲಸದಲ್ಲಿ ನಿಮಗೆ ಸವಾಲು ಹಾಕುತ್ತವೆ; ಬಲಶಾಲಿಯಾಗಿರಿ.
ಸಿಂಹ ರಾಶಿ
ದೇಹದ ನೋವು ಮತ್ತು ಒತ್ತಡ ಸಂಬಂಧಿತ ಸಮಸ್ಯೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇದು ಮತ್ತೊಂದು ಚೈತನ್ಯದಾಯಕ ದಿನವಾಗಿರುತ್ತದೆ ಮತ್ತು ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ದೂರದ ಸ್ಥಳದ ಸಂಬಂಧಿಗಳು ಇಂದು ನಿಮ್ಮನ್ನು ಸಂಪರ್ಕಿಸಬಹುದು. ನಿಮ್ಮನ್ನು ಯಾರಾದರೂ ಆಕರ್ಷಿಸಲು ಪ್ರಯತ್ನಿಸಬಹುದಾದ್ದರಿಂದ ಎಚ್ಚರಿಕೆಯಿಂದಿರಿ. ನೀವು ಯಾವುದೇ ದುಬಾರಿ ಸಾಹಸಕ್ಕೆ ಕೈಹಾಕುವ ಮೊದಲು ನಿಮ್ಮ ವಿವೇಚನೆ ಬಳಸಿ. ವಿಷಯಗಳು ನಿಮ್ಮ ಪರವಾಗಿರುವಂತೆ ತೋರುವ ಒಂದು ಲಾಭಕರ ದಿನ ಮತ್ತು ನೀವು ತುಂಬ ಉತ್ಸಾಹದಿಂದಿರುತ್ತೀರಿ. ನಿಮ್ಮ ಸಂಗಾತಿ ನಿಮ್ಮ ಒಂದು ಯೋಜನೆಯನ್ನು ಹಾಳುಮಾಡಬಹುದು; ತಾಳ್ಮೆ ಕಳೆದುಕೊಳ್ಳಬೇಡಿ.
ಕನ್ಯಾ ರಾಶಿ
ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಗಳನ್ನು ಅನುಸರಿಸಲೂ ಒಂದು ಒಳ್ಳೆಯ ದಿನ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಸ್ನೇಹಿತರು ಮತ್ತು ಹತ್ತಿರದವರು ನಿಮಗೆ ತಮ್ಮ ಸಹಾಯ ಹಸ್ತ ಚಾಚುತ್ತಾರೆ. ಸಾಮಾಜಿಕ ಅಡೆತಡೆಗಳನ್ನು ದಾಟಲು ಸಾಧ್ಯವಾಗುವುದಿಲ್ಲ. ಪ್ರಯಾಣ ಇಂದು ನಿಮಗೆ ಹೊಸ ವ್ಯಾಪಾರ ಅವಕಾಶಗಳು ತರುತ್ತದೆ. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ಒದಗಿಸುತ್ತಾರೆ. ನಿಮ್ಮ ಸಂಗಾತಿ ಇಂದು ನಿಮ್ಮ ಖ್ಯಾತಿಯ ಮೇಲೆ ಸ್ವಲ್ಪ ಪ್ರತಿಕೂಲ ಪರಿಣಾಮ ಬೀರಬಹುದು.
ತುಲಾ ರಾಶಿ
ನೀವು ಒಂದು ಅಹಿತಕರ, ಮುಜುಗರದ ಮತ್ತು ನಿರುತ್ಸಾಹಿಗಳನ್ನಾಗಿಸುವ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಇದು ನಿಮ್ಮನ್ನು ನಿರುತ್ಸಾಹಿಗಳಾಗಿಸುವ ಬದಲಿಗೆ ನೀವು ಇದರಿಂದ ಕೆಲವು ಪಾಠ ಕಲಿಯಬೇಕು. ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ಇಂದು ನೀವು ನಿಮ್ಮ ಸುತ್ತಲಿರುವವರ ವರ್ತನೆಗಳಿಂದ ಸ್ವಲ್ಪ ಕಿರಿಕಿರಿಗೊಳಗಾಗುತ್ತೀರಿ. ಪ್ರೀತಿಯ ಸಂಗೀತವನ್ನು ಯಾವಾಗಲೂ ಅದರಲ್ಲೇ ಮುಳುಗಿರುವವರು ಕೇಳಬಹುದು. ಇದು ನೀವು ಈ ಪ್ರಪಂಚದ ಎಲ್ಲಾ ಹಾಡುಗಳನ್ನು ಮರೆಯುವಂತೆ ಮಾಡುತ್ತದೆ. ನೀವು ಏನೂ ಮಾಡಿದರೂ ಪರಿಪೂರ್ಣವಾಗಿ ಮಾಡುತ್ತೀರಿ - ನಿಮ್ಮ ಸುತ್ತಲಿನವರಿಗೆ ನೀವೆಷ್ಟು ಪರಿಣಾಮಕಾರಿಯೆಂದು ತೋರಿಸುವ ಮೂಲಕ ನಿಮ್ಮ ಮೌಲ್ಯವನ್ನು ಸಾಬೀತು ಮಾಡಿ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಚುಂಬನ, ಅಪ್ಪುಗೆ, ಪ್ರೀತಿ, ಮತ್ತು ಮೋಜು, ಈ ದಿನ ನಿಮ್ಮ ಅರ್ಧಾಂಗಿಯ ಜೊತೆಗಿನ ಪ್ರಣಯದ ಬಗೆಗಾಗಿದೆ.
ವೃಶ್ಚಿಕ ರಾಶಿ
ನಿಮ್ಮ ಹೆಂಡತಿಯ ಜೊತೆ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಮ್ಮನ್ನು ನೀವೇ ಒಂದು ಪ್ರೀತಿಯ ಪೋಷಿಸುವ ಜೋಡಿಯೆನ್ನುವುದನ್ನು ಪುನಃ ಕಂಡುಹಿಡಿಯಲು ಸ್ವಲ್ಪ ಸಮಯ ಖರ್ಚು ಮಾಡಿ. ನಿಮ್ಮ ಮಕ್ಕಳೂ ಕೂಡ ಮನೆಯಲ್ಲಿನ ಶಾಂತಿ ಸಾಮರಸ್ಯದ ವಾತಾವರಣವನ್ನು ಆವಾಹಿಸಿಕೊಳ್ಳುತ್ತಾರೆ. ಇದು ಪರಸ್ಪರ ಸಂಪರ್ಕದಲ್ಲಿ ನಿಮ್ಮ ಮಾತುಕತೆಗೆ ನಿಮಗೆ ಹೆಚ್ಚಿನ ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯ ನೀಡುತ್ತದೆ. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಸಕಾಲಿಕ ಸಹಾಯ ಇನ್ನೊಬ್ಬರ ಜೀವ ಉಳಿಸುತ್ತದೆ. ಈ ಸುದ್ದಿ ನಿಮ್ಮ ಕುಟುಂಬದ ಸದಸ್ಯರಿಗೆ ಹೆಮ್ಮೆ ತರುತ್ತದೆ ಮತ್ತು ಅವರಿಗೆ ಸ್ಪೂರ್ತಿಯಾಗುತ್ತದೆ. ನಿಮ್ಮ ಸಂಗಾತಿಗೆ ಸಾಕಷ್ಟು ಗಮನ ನೀಡಲಾಗದಿದ್ದಲ್ಲಿ ಅದು ಅವರ ಅಸಮಾಧಾನಕ್ಕೆ ಕಾರಣವಾಗಬಹುದು. ಇಂದು ಮಾಡಿದ ಜಂಟಿ ಯೋಜನೆಗಳು ಕೊನೆಗೂ ಪ್ರಯೋಜನಕಾರಿಯಾದರೂ, ನೀವು ಪಾಲುದಾರರಿಂದ ಕೆಲವು ಪ್ರಮುಖ ವಿರೋಧವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ನೀವು ಖಾದ್ಯಗಳು ಅಥವಾ ಅಪ್ಪುಗೆಯಂಥ ನಿಮ್ಮ ಜೀವನದ ಸಂಗಾತಿಯ ಸಣ್ಣ ಬೇಡಿಕೆಗಳನ್ನು ಕಡೆಗಣಿಸಿದಲ್ಲಿ ಅವರಿಗೆ ಬೇಸರವಾಗಬಹುದು.
ಧನು ರಾಶಿ
ನಿಮ್ಮ ಕುಂದಿದ ಜೀವಂತಿಕೆ ವ್ಯವಸ್ಥೆಯಲ್ಲಿ ದೀರ್ಘಕಾಲೀನ ವಿಷದಂತ ವರ್ತಿಸುತ್ತದೆ. ನಿಮ್ಮನ್ನು ಸೃಜನಶೀಲ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಮತ್ತು ರೋಗದ ವಿರುದ್ಧ ಹೋರಾಡಲು ಪ್ರೇರೇಪಿಸುವುದು ಒಳ್ಳೆಯದು. ಹಣಕಾಸು ಲಾಭ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಬರುತ್ತದೆ. ಮನರಂಜನೆ ಇಡೀ ಕುಟುಂಬವನ್ನು ಒಳಗೊಂಡಿದ್ದಲ್ಲಿ ಅದು ಮೋಜಿನ ವಿಷಯವಾಗಿರುತ್ತದೆ. ನಿಮ್ಮ ಹಠಾತ್ ಪ್ರವೃತ್ತಿ ನಿಮ್ಮ ಸ್ನೇಹವನ್ನು ಹಾಳು ಮಾಡಬಹುದಾದ್ದರಿಂದ ನಿಮ್ಮ ಸ್ವಭಾವವನ್ನು ನಿಯಂತ್ರಿಸಿ. ನಿಮ್ಮ ಮಾರ್ಗದಲ್ಲಿ ಸುಧಾರಣೆ ಮತ್ತು ಆಫೀಸಿನ ಕೆಲಸದಲ್ಲಿ ಗುಣಮಟ್ಟದ ಸುಧಾರಣೆಯನ್ನು ಅನುಭವಿಸುತ್ತೀರಿ. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ. ವೈವಾಹಿಕ ಜೀವನ ಇಂದು ತನ್ನ ಕರಾಳ ಸ್ವರೂಪವನ್ನು ತೋರಿಸಬಹುದು.
ಮಕರ ರಾಶಿ
ಕೆಲಸ ಮತ್ತು ಮನೆಯಲ್ಲಿನ ಕೆಲವು ಒತ್ತಡ ನಿಮ್ಮ ಸಹನೆಯನ್ನು ಪರೀಕ್ಷಿಸುತ್ತದೆ. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ - ಆದರೆ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಸಂಬಂಧಿಗಳು ಕೆಲವು ಒತ್ತಡ ಸೃಷ್ಟಿಸಬಹುದು. ಪರಿಸ್ಥಿತಿಯನ್ನು ನಿಯಂತ್ರಿಸಲು ನಿಮ್ಮ ಶಾಂತತೆ ಕಾಯ್ದುಕೊಳ್ಳಿ. ಯಾವುದೇ ಆತುರದ ನಿರ್ಧಾರ ನಿಮಗೆ ದುಬಾರಿಯಾಗುತ್ತದೆ. ಪ್ರಣಯ ಉಂಟಾಗುವ ಸಾಧ್ಯತೆಯಿದ್ದರೂ ಇಂದ್ರಿಯದ ಭಾವನೆಗಳು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ಬಾಕಿಯಿರುವ ಯೋಜನೆಗಳು ಅಂತಿಮ ರೂಪ ಪಡೆಯುತ್ತವೆ. ವಿಷಯಗಳು ನಿಮ್ಮ ಪರವಾಗಿರುವಂತೆ ತೋರುವ ಒಂದು ಲಾಭಕರ ದಿನ ಮತ್ತು ನೀವು ತುಂಬ ಉತ್ಸಾಹದಿಂದಿರುತ್ತೀರಿ. ನಿಮ್ಮ ವೈವಾಹಿಕ ಜೀವನ ದೈನಂದಿನ ಅಗತ್ಯಗಳ ನೆರವೇರಿಸುವಿಕೆಯ ಕೊರತೆಯಿಂದಾಗಿ ಇಂದು ಒತ್ತಡಕ್ಕೊಳಗಾಗಬಹುದು. ಇದು ಆಹಾರ, ನೈರ್ಮಲ್ಯ, ಹಾಗೂ ಇತರ ಗೃಹಬಳಕೆಯ ಕೆಲಸಗಳಿಂದಾಗಿರಬಹುದು
ಕುಂಭ ರಾಶಿ
ಯೋಗ ಮತ್ತು ಧ್ಯಾನ ನೀವು ಒಳ್ಳೆಯ ದೇಹರಚನೆ ಕಾಯ್ದುಕೊಳ್ಳಲು ಮತ್ತು ಮಾನಸಿಕವಾಗಿ ಸಧೃಢವಾಗಿರಲು ಸಹಾಯ ಮಾಡುತ್ತದೆ. ನೀವು ಕಮಿಷನ್ಗಳಿಂದ – ಡಿವಿಡೆಂಡ್ಗಳಿಂದ- ಅಥವಾ ರಾಯಧನಗಳಿಂದ ಪ್ರಯೋಜನ ಪಡೆಯುತ್ತೀರಿ. ಮನೆಯಲ್ಲಿನ ವಾದಗಳು ಕುಟುಂಬದ ಸದಸ್ಯರೊಂದಿಗೆ ಅಸಮಾಧಾನಕ್ಕೆ ಕಾರಣವಾಗುತ್ತದೆ. ಪ್ರೇಮನಿವೇದನೆ ನಿಮ್ಮ ಹೊರೆಯನ್ನು ಇಳಿಸುವುದರಿಂದ ನಿಮಗೆ ಆನಂದವಾಗಬಹುದು. ಶ್ರೇಷ್ಠ ಜನರೊಡನೆ ಸಂಬಂಧ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮತ್ತು ಯೋಜನೆಗಳನ್ನು ತರುತ್ತದೆ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ನೀವು ಇಂದು ನಿಮ್ಮ ಜೀವನ ಸಂಗಾತಿಯ ಪ್ರೀತಿಯ ಬೆಚ್ಚನೆಯ ಭಾವವನ್ನು ಅನುಭವಿಸುತ್ತೀರಿ.
ಮೀನ ರಾಶಿ
ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರ ತೆಗೆದುಕೊಳ್ಳಿ ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಇಂದು, ನೀವು ಮತ್ತು ನಿಮ್ಮ ಪ್ರೀತಿ ಸಂಗಾತಿ ಪ್ರೀತಿಯ ಸಾಗರದಲ್ಲಿ ತೇಲುತ್ತೀರಿ ಮತ್ತು ಪ್ರೀತಿಯ ಔನ್ನತ್ಯವನ್ನು ಅನುಭವಿಸುತ್ತೀರಿ. ನೀವು ಹಿಂದಿನಿಂದಲೂ ಕೆಲಸದಲ್ಲಿ ಯಾರಾದರ ಜೊತೆಗಾದರೂ ಮಾತನಾಡಲು ಪ್ರಯತ್ನಿಸುತ್ತಿದ್ದಲ್ಲಿ, ಇಂದು ನಿಮ್ಮ ಅದೃಷ್ಟ ಖುಲಾಯಿಸುತ್ತದೆ. ರಹಸ್ಯ ಶತ್ರುಗಳು ನಿಮ್ಮ ಬಗ್ಗೆ ವದಂತಿಗಳು ಹರಡಲು ಉತ್ಸಾಹಿಗಳಾಗಿರುತ್ತಾರೆ. ಹಲವಾರು ವಿಷಯಗಳ ಬಗ್ಗೆ ಹಲವಾರು ಭಿನ್ನಾಭಿಪ್ರಾಯಗಳು ಇರಬಹುದಾದ್ದರಿಂದ ಈ ದಿನ ನಿಮಗೆ ಚೆನ್ನಾಗಿರುವುದಿಲ್ಲ. ಈ ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತದೆ.














ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ