ಟೀಂ ಇಂಡಿಯಾ ವರ್ಷಾಂತ್ಯದಲ್ಲಿ ಆಸೀಸ್ ಪ್ರವಾಸ - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಮಂಗಳವಾರ, ಮೇ 1, 2018

ಟೀಂ ಇಂಡಿಯಾ ವರ್ಷಾಂತ್ಯದಲ್ಲಿ ಆಸೀಸ್ ಪ್ರವಾಸ

ಸಿಡ್ನಿ[ಮೇ.01]: ಈ ವರ್ಷಾಂತ್ಯದಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಟೀಂ ಇಂಡಿಯಾ ಸುಮಾರು 2 ತಿಂಗಳ ದೀರ್ಘಪ್ರವಾಸವನ್ನು ಕೈಗೊಳ್ಳಲಿದೆ.
ಸರಣಿಗಳ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ್ದು, ನ.21ರಿಂದ 25ರ ವರೆಗೂ ಟಿ20 ಸರಣಿ ನಡೆದರೆ, ಡಿ.6-10 ಅಡಿಲೇಡ್‌'ನಲ್ಲಿ ಮೊದಲ ಟೆಸ್ಟ್, ಡಿ.14-18 ಪರ್ತ್‌ನಲ್ಲಿ 2ನೇ ಟೆಸ್ಟ್, ಡಿ.26-30 ಮೆಲ್ಬರ್ನ್‌'ನಲ್ಲಿ 3ನೇ ಟೆಸ್ಟ್, ಜ.3-7 ಸಿಡ್ನಿಯಲ್ಲಿ 4ನೇ ಟೆಸ್ಟ್ ನಡೆಯಲಿದೆ. ಟೆಸ್ಟ್ ಸರಣಿ ಬಳಿಕ ಜ.12-18ರವರೆಗೂ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಭಾಗಿಯಾಗಿ ಒಂದು ವರ್ಷದ ಶಿಕ್ಷೆಗೆ ಗುರಿಯಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಈ ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ 9 ತಿಂಗಳು ಶಿಕ್ಷೆಗೆ ಗುರಿಯಾಗಿರುವ ಕ್ಯಾಮರೋನ್ ಬೆನ್'ಕ್ರಾಫ್ಟ್ ಏಕದಿನ ಸರಣಿಗೆ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. 
ಇಂಡೀ-ಆಸ್ಟ್ರೇಲಿಯಾ ವೇಳಾಪಟ್ಟಿ ಹೀಗಿದೆ:
ಟಿ20 ಸರಣಿ: 
ನವೆಂಬರ್: 21 - ಮೊದಲ ಟಿ20 ಪಂದ್ಯ- ಗಾಬಾ
ನವೆಂಬರ್: 23 - ಎರಡನೇ ಟಿ20 ಪಂದ್ಯ- ಎಂಸಿಜಿ
ನವೆಂಬರ್: 25 - ಮೂರನೇ ಟಿ20 ಪಂದ್ಯ- ಎಸ್'ಸಿಜಿ
ಟೆಸ್ಟ್ ಸರಣಿ: 
ಡಿಸೆಂಬರ್: 6-10 - ಮೊದಲ ಟೆಸ್ಟ್ - ಅಡಿಲೇಡ್
ಡಿಸೆಂಬರ್: 14-18 - ಎರಡನೇ ಟೆಸ್ಟ್ - ಪರ್ತ್
ಡಿಸೆಂಬರ್: 26-30 - ಮೂರನೇ ಟೆಸ್ಟ್ - ಎಂಸಿಜಿ
ಜನವರಿ: 03-07 - ನಾಲ್ಕನೇ ಟೆಸ್ಟ್ - ಎಸ್'ಸಿಜಿ
ಏಕದಿನ ಸರಣಿ: 
ಜನವರಿ 12: ಮೊದಲ ಪಂದ್ಯ- ಎಸ್'ಸಿಜಿ
ಜನವರಿ 15: ಎರಡನೇ ಪಂದ್ಯ- ಅಡಿಲೇಡ್ 
ಜನವರಿ 18: ಮೂರನೇ ಪಂದ್ಯ- ಎಂಸಿಜಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here