ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪ್ರಕ್ರಿಯೆ ಮತ್ತೆ ಚುರುಕು!ಕೇಂದ್ರ ಸರ್ಕಾರ ಬಿಎಂಟಿಸಿಗೆ ಅನುಮತಿ ನೀಡಿದೆ... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಗುರುವಾರ, ಮೇ 17, 2018

ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪ್ರಕ್ರಿಯೆ ಮತ್ತೆ ಚುರುಕು!ಕೇಂದ್ರ ಸರ್ಕಾರ ಬಿಎಂಟಿಸಿಗೆ ಅನುಮತಿ ನೀಡಿದೆ...

ಬೆಂಗಳೂರು, ಮೇ 17: ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪ್ರಕ್ರಿಯೆ ಚುರುಕುಗೊಂಡಿದೆ. ಚುನಾವಣಾ ನೀತಿ ಸಂಹಿತೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಿದ್ಧತೆ ಆರಂಭವಾಗಿದೆ.
ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಬಸ್ ಪಡೆಯಲು ಕೇಂದ್ರ ಸರ್ಕಾರ ಬಿಎಂಟಿಸಿಗೆ ಅನುಮತಿ ನೀಡಿದೆ. ಮೌಖಿಕವಾಗಿ ಈ ಕುರಿತು ಕೇಂದ್ರದಿಂದ ಪ್ರತಿಕ್ರಿಯೆ ಬಂದಿದ್ದು, ಆದೇಶಕ್ಕಾಗಿ ಬಿಎಂಟಿಸಿ ಕಾಯುತ್ತಿದೆ. ನೀತಿ ಸಂಹಿತೆ ಮೇ 18ರವರೆಗೂ ಜಾರಿಯಲ್ಲಿದ್ದು ಆದೇಶ ಪ್ರತಿ ಮೇ 21-22ರಂದು ನಿಗಮದ ಕೈ ಸೇರುವ ಸಾಧ್ಯತೆ ಇದೆ.
ಫಾಸ್ಟರ್ ಅಡಾಪ್ಷನ್‌ ಅಂಡ್ ಮಾನ್ಯುಫಾಕ್ಚರಿಂಗ್ ಆಫ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌ ಅನುದಾನದಡಿ ಪ್ರತಿ ಎಲೆಕ್ಟ್ರಿಕ್ ಬಸ್‌ಗೆ 1 ಕೋಟಿ ರೂ. ವರೆಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿತ್ತು. ಆದರೆ, ಹೊಸ ಬಸ್‌ ಖರೀದಿಗೆ 2-3 ಕೋಟಿ ರೂ. ವೆಚ್ಚವಾಗುವ ಕಾರಣದಿಂದ ಗುತ್ತಿಗೆ ಆಧಾರದಲ್ಲಿ 150 ಎಲೆಕ್ಟ್ರಿಕ್‌ ಬಸ್ ಪಡೆಯಲು ಬಿಎಂಟಿಸಿ ನಿರ್ಧರಿಸಿತ್ತು. ಅದರಂತೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್‌ ಕಂಪನಿ ಕನಿಷ್ಠ ಬಿಡ್ ಸಲ್ಲಿಸಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣವಾದ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ಬಸ್ ಪಡೆದರೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ತಿಳಿಸಿತ್ತು.
ಗುತ್ತಿಗೆ ಪಡೆದ ಗೋಲ್ಡ್‌ಸ್ಟೋನ್‌ ಕಂಪನಿ ಫೈನಾನ್ಸಿಯಲ್‌ ಬಿಡ್‌ನಲ್ಲಿ 12 ಮೀ.ಉದ್ದದ ಬಸ್‌ಗೆ ಪ್ರತಿ ಕಿ.ಮೀಗೆ 37.5 ರೂ. ಬಿಡ್ ಮಾಡಿತ್ತು. ಬಸ್ ನೋಂದಣಿ, ವಿಮೆ, ಮೋಟಾರು ವಾಹನ ತೆರಿಗೆ , ಸೇವಾ ತೆರಿಗೆ ಎಲ್ಲವೂ ಇದರಲ್ಲಿ ಸೇರಿದೆ. ಪ್ರಯಾಣಿಕರ ತೆರಿಗೆ ಮತ್ತು ಸ್ಟೇಜ್‌ ಕ್ಯಾರಿಯೇಜ್ ರಹದಾರಿ, ವಿದ್ಯುತ್, ನಿರ್ವಾಹಕನ ನೇಮಕವಷ್ಟೇ ಬಿಎಂಟಿಸಿ ವಹಿಸಲಿದೆ. ಎಲೆಕ್ಟ್ರಿಕ್‌ ಬಸ್ ಕಾರ್ಯಾಚರಣೆಯಿಂದ ನಿಗಮಕ್ಕೆ 10-15 ರೂ. ಉಳಿತಾಯವಾಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here