ಭವಿಷ್ಯ
ಮೇಷ ರಾಶಿ
ಸಾಮಾಜಿಕ ಜೀವನಕ್ಕಿಂತ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಎಲ್ಲಾ ಹೂಡಿಕೆಗಳನ್ನು ಎಚ್ಚರಿಕೆಯಿಂದ ಮಾಡಬೇಕು ಮತ್ತು ಸರಿಯಾದ ಸಮಾಲೋಚನೆಯಿಂದ ಅನಗತ್ಯ ನಷ್ಟವನ್ನು ತಪ್ಪಿಸಬಹುದು ಮಕ್ಕಳೊಂದಿಗೆ ವಾದ ಮಾನಸಿಕ ಒತ್ತಡ ತರುತ್ತದೆ - ಕೆಲವು ಸಮಸ್ಯೆಗಳನ್ನು ಕೆದಕದಿರುವುದೇ ಉತ್ತಮವಾದ್ದರಿಂದ ಒಂದು ಹಂತಕ್ಕಿಂತ ಹೆಚ್ಚು ತೊಂದರೆ ತೆಗೆದುಕೊಳ್ಳಬೇಡಿ. ಇಂದು ಪ್ರೇಮ ಜೀವನದ ವಿವಾದಾತ್ಮಕವಾಗಿರಬಹುದು. ಕೆಲಸದ ಒತ್ತಡ ಇನ್ನೂ ನಿಮ್ಮ ಮನಸ್ಸನ್ನು ಆವರಿಸುತ್ತದೆ ಹಾಗೂ ಇದು ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಸಮಯವಿಲ್ಲದಂತೆ ಮಾಡುತ್ತದೆ. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಸಂಗಾತಿಗೆ ನಿಮ್ಮ ಒತ್ತಡದ ವೇಳಾಪಟ್ಟಿಯಿಂದಾಗಿ ತಾವು ಅಪ್ರಾಮುಖ್ಯರು ಎಂದೆನಿಸಬಹುದು, ಮತ್ತು ಅವರು ಸಂಜೆ ತಮ್ಮ ಅಸಮಾಧಾನವನ್ನು ತೋರಿಸಬಹುದು.
ವೃಷಭ ರಾಶಿ
ಅನಾವಶ್ಯಕ ಉದ್ವೇಗ ಮತ್ತು ಚಿಂತೆ ನಿಮ್ಮ ಜೀವನದ ರಸ ಹೀರಬಹುದು ಮತ್ತು ನಿಮ್ಮನ್ನು ಖಾಲಿಯಾಗಿಸಬಹುದು. ಇವುಗಳನ್ನು ತೊಡೆದುಹಾಕದಿದ್ದಲ್ಲಿ ಅವು ಕೇವಲ ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ವೆಚ್ಚದ ಏರಿದರೂ ಆದಾಯದಲ್ಲಿನ ಹೆಚ್ಚಳ ನಿಮ್ಮ ಖರ್ಚುಗಳನ್ನು ನೋಡಿಕೊಳ್ಳುತ್ತದೆ. ಬಾಕಿಯಿರುವ ಮನೆಕೆಲಸಗಳು ನಿಮ್ಮ ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ತಪ್ಪು ಸಂವಹನೆ ಅಥವಾ ಒಂದು ಸಂದೇಶ ನಿಮ್ಮ ದಿನವನ್ನು ಅವರಿಸಬಹುದು. ಕೆಲಸದಲ್ಲಿ ವಿಚಿತ್ರಗಳಾಗಬಹುದು; ನೀವು ಎಲ್ಲವೂ ನಿಮ್ಮ ವಿರುದ್ಧ ಹೋಗುವುದನ್ನು ನೋಡುತ್ತೀರಿ. ಆದರೆ, ಇದು ನಿಜವಲ್ಲ. ಹೊಸ ಆಲೋಚನೆಗಳನ್ನು ಪರೀಕ್ಷಿಸಲು ಪರಿಪೂರ್ಣ ದಿನ. ಜನರ ಹಸ್ತಕ್ಷೇಪ ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧಕ್ಕೆ ಇಂದು ಧಕ್ಕೆ ತರಬಹುದು.
ಮಿಥುನ ರಾಶಿ
ಸಂತೋಷದ ದಿನಕ್ಕಾಗಿ ಮಾನಸಿಕ ಒತ್ತಡವನ್ನು ತಪ್ಪಿಸಿ. ಗೃಹ ಸೌಕರ್ಯಗಳ ಮೇಲೆ ಅಧಿಕವಾಗಿ ಖರ್ಚು ಮಾಡಬೇಡಿ. ಇಂದು ನೀವು ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ - ಆದರೆ ವಾಸ್ತವವಾದಿಗಳಾಗಿರಿ ಮತ್ತು ಸಹಾಯ ಮಾಡುವವರಿಂದ ಪವಾಡಗಳನ್ನು ನಿರೀಕ್ಷಿಸಬೇಡಿ. ಪ್ರೇಮನಿವೇದನೆ ನಿಮ್ಮ ಹೊರೆಯನ್ನು ಇಳಿಸುವುದರಿಂದ ನಿಮಗೆ ಆನಂದವಾಗಬಹುದು. ಇಂದು ಕೆಲಸದಲ್ಲಿ ಎಲ್ಲರೂ ನಿಮಗೆ ಪ್ರೀತಿ ಮತ್ತು ಬೆಂಬಲ ನೀಡುತ್ತಾರೆ. ಹೆಚ್ಚಿನ ವಿಷಯಗಳು ನೀವು ಬಯಸಿದಂತೆ ಅಗುವ –ಒಂದು ಉಜ್ವಲವಾದ ಹಾಸ್ಯದಿಂದ ತುಂಬಿದ ದಿನ. ನಿಮ್ಮ ಸಂಗಾತಿ ಇಂದು ಅವರ ದೈವೀಕ ಬದಿಯನ್ನು ನಿಮಗೆ ತೋರಿಸುತ್ತಾರೆ.
ಕರ್ಕ ರಾಶಿ
ನಗು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವಾದ್ದರಿಂದ ನಕ್ಕುಬಿಡಿ. ಇಂದು ಹೂಡಿಕೆಗಳನ್ನು ಮಾಡಬಾರದು. ಪ್ರೀತಿಪಾತ್ರರೊಡನೆ ನೀವು ಸಮಯ ಕಳೆಯದಿದ್ದರೆ ಅವರಿಗೆ ಕೋಪ ಬರಬಹುದು. ನಿಮ್ಮ ಪ್ರೀತಿಪಾತ್ರರಿಂದ ಕರೆ ಪಡೆಯುತ್ತೀರಿ ಹಾಗೂ ಇದು ನಿಮಗೆ ರೋಮಾಂಚಕ ದಿನವಾಗಿರುತ್ತದೆ. ನಿಮ್ಮ ಮೇಲಿನವರಿಗೆ ನೆಪಗಳಲ್ಲಿ ಆಸಕ್ತಿಯಿಲ್ಲ – ಅವರ ಬಳಿ ಒಳ್ಳೆಯ ಅಭಿಪ್ರಾಯ ಇರಿಸಿಕೊಳ್ಳಲು ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿ. ವಿಷಯಗಳು ನಿಮ್ಮ ಪರವಾಗಿರುವಂತೆ ತೋರುವ ಒಂದು ಲಾಭಕರ ದಿನ ಮತ್ತು ನೀವು ತುಂಬ ಉತ್ಸಾಹದಿಂದಿರುತ್ತೀರಿ. ಈ ದಿನ ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದಾಗಿರಬಹುದು.
ಸಿಂಹ ರಾಶಿ
ಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ತರಾತುರಿಯಲ್ಲಿ ಹೂಡಿಕೆಗಳನ್ನು ಮಾಡಬೇಡಿ - ನೀವು ಎಲ್ಲಾ ಸಾಧ್ಯವಿರುವ ಕೋನಗಳಿಂದ ಹೂಡಿಕೆಯನ್ನು ಪರಿಶೀಲಿಸದೇ ಹೋದರೆ ನಷ್ಟ ಖಚಿತ. ಸಂಜೆ ಸ್ನೇಹಿತರೊಡನೆ ಹೋಗಿ – ಇದು ತುಂಬ ಒಳ್ಳೆಯದನ್ನು ಮಾಡುತ್ತದೆ. ಇಂದು ನಿಮ್ಮ ಪ್ರಿಯತಮೆ ಉಡುಗೊರೆಗಳ ಜೊತೆ ನಿಮ್ಮ ಸ್ವಲ್ಪ ಸಮಯವನ್ನೂ ಅಪೇಕ್ಷಿಸಬಹುದು. ಎಚ್ಚರದಿಂದಿರಿ- ಜನರೊಡನೆ ವ್ಯವಹರಿಸುವಾಗ ಬುದ್ಧಿವಂತಿಕೆ ಮತ್ತು ತಾಳ್ಮೆಯಿಂದಿರಿ. ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ವೈವಾಹಿಕ ಜೀವನದ ಹಳೆಯ ಪ್ರಣಯದ, ಬೆಂಬತ್ತುವ, ಮತ್ತು ಓಲೈಸುವ ಸುಂದರ ದಿನಗಳನ್ನು ನೀವು ಮತ್ತೆ ಜೀವಿಸುತ್ತೀರಿ.
ಕನ್ಯಾ ರಾಶಿ
ಅತೃಪ್ತಿ ದೈಹಿಕ ಮತ್ತು ಮಾನಸಿಕ ಅನಾರೋಗ್ಯದ ಕಾರಣವಾಗಿರಬಹುದು. ನೀವು ಸ್ವಲ್ಪ ಹೆಚ್ಚುವರಿ ಹಣ ಮಾಡಲು ಯೋಜಿಸುತ್ತದ್ದಲ್ಲಿ ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುವಂತೆ ತೋರುತ್ತಿರುವುದರಿಂದ ನಿಮ್ಮ ಮಾತುಗಳ ಬಗ್ಗೆ ಎಚ್ಚರ ವಹಿಸಿ. ನೀವು ಪ್ರಣಯದ ಮನೋಭಾವ ಹೊಂದಿರುತ್ತೀರಿ- ನೀವು ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ವಿಶೇಷ ಯೋಜನೆಗಳನ್ನು ಮಾಡಲು ಮರೆಯಬೇಡಿ. ಯಾರಾದರೂ ಇಂದು ಕೆಲಸದಲ್ಲಿ ನಿಮಗೆ ಸಂತೋಷವಾಗುವ ಏನನ್ನಾದರೂ ಮಾಡಬಹುದು. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ನೀವು ಇಂದು ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನವನ್ನು ಅನುಭವಿಸುತ್ತೀರಿ.
ತುಲಾ ರಾಶಿ
ನಿಮ್ಮ ಅಹಾರ ಕ್ರಮದ ಬಗ್ಗೆ, ವಿಶೇಷವಾಗಿ ಮೈಗ್ರೇನ್ ರೋಗಿಗಳು ಸೂಕ್ತ ಎಚ್ಚರ ತೆಗೆದುಕೊಳ್ಳಬೇಕು. ಅವರು ತಮ್ಮ ಊಟ ತಪ್ಪಿಸಿಕೊಂಡಲ್ಲಿ ಅದು ಅವರಿಗೆ ಅನಗತ್ಯ ಭಾವನಾತ್ಮಕ ಒತ್ತಡವನ್ನು ಉಂಟುಮಾಡಬಹುದು. ಪ್ರಮುಖ ಜನರು ವಿಶೇಷ ವರ್ಗ ಹೊಂದಿರುವ ಯಾವುದಕ್ಕಾದರೂ ಹಣಕಾಸು ನೀಡಲು ಸಿದ್ಧವಾಗಿರುತ್ತಾರೆ. ಕೋಪ ಅಲ್ಪಾವಧಿ ಹಾಗೂ ಅದು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸಬಹುದೆಂದು ಅರ್ಥ ಮಾಡಿಕೊಳ್ಳುವ ಸಮಯ. ಚಿಕ್ಕ ವ್ಯತ್ಯಾಸಗಳು ಉದ್ಭವಿಸುವುದರಿಂದ ಪ್ರಣಯಕ್ಕೆ ಹಿನ್ನೆಡೆಯುಂಟಾಗುತ್ತದೆ. ನೀವು ನೇರವಾದ ಉತ್ತರ ಕೊಡದಿದ್ದರೆ ನಿಮ್ಮ ಸಹವರ್ತಿಗಳು ಸಿಟ್ಟಾಗುವ ಸಂಭವವಿದೆ. ಇವತ್ತು ನೀವು ಶಾಪಿಂಗ್ ಹೋದಲ್ಲಿ ನಿಮಗಾಗಿ ಒಂದು ಒಳ್ಳೆಯ ಉಡುಗೆಯನ್ನು ಖರೀದಿಸುವ ಸಾಧ್ಯತೆಗಳಿವೆ. ನೀವು ಕೆಲಸದಲ್ಲಿ ಇಂದು ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳುತ್ತೀರಿ. ಈ ದಿನ ನಿಜವಾಗಿಯೂ ಕಷ್ಟಕರವಾಗಿದೆ.
ವೃಶ್ಚಿಕ ರಾಶಿ
ದೇಹದ ನೋವಿನಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ನಿಮ್ಮ ದೇಹದ ಮೇಲೆ ಹೆಚ್ಚು ಒತ್ತಡ ಹಾಕುವ ಯಾವುದೇ ದೈಹಿಕ ಪರಿಶ್ರಮವನ್ನು ತಪ್ಪಿಸಲು ಪ್ರಯತ್ನಿಸಿ. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಸಂಶಯಾಸ್ಪದ ಹಣಕಾಸಿನ ಸಾಹಸಗಳಲ್ಲಿ-ಹೂಡಿಕೆ ಮಾಡಬೇಡಿ – ಹೂಡಿಕೆಯನ್ನು ತೀವ್ರ ಎಚ್ಚರಿಕೆಯಿಂದ ನಿರ್ವಹಿಸಬೇಕು. ಕೆಲವರು ಅವರಿಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ನೀಡುವ ಭರವಸೆ ನೀಡುತ್ತಾರೆ – ಕೇವಲ ಮಾತನಾಡುವ ಮತ್ತು ಯಾವುದೇ ಫಲಿತಾಂಶಗಳ ನೀಡದ ಇಂಥ ಜನರನ್ನು ಮರೆತುಬಿಡಿ. ನಿಮ್ಮ ಪ್ರೀತಿಯ ಸಂಬಂಧ ಮಾಂತ್ರಿಕ ತಿರುವು ಪಡೆಯುತ್ತಿದೆ; ಸುಮ್ಮನೇ ಅದನ್ನು ಅನುಭವಿಸಿ. ನಿಮ್ಮ ವೃತ್ತಿಪರ ತಡೆಗಳನ್ನು ಪರಿಹರಿಸಲು ನಿಮ್ಮ ಅನುಭವವನ್ನು ಬಳಸಿ. ನಿಮ್ಮ ಸ್ವಲ್ಪ ಪ್ರಯತ್ನ ಎಲ್ಲ ಸಮಸ್ಯೆಗಳನ್ನು ಒಮ್ಮೆಗೇ ಪರಿಹರಿಸಬಹುದು. ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಬೇಕು. ನೀವು ಇಂದು ನಿಮ್ಮ ಜೀವನ ಸಂಗಾತಿ ನಿಮ್ಮೆಡೆಗೆ ಹೆಚ್ಚು ಕಾಳಜಿಯಿದ್ದಂತೆ ತೋರಬಹುದು.
ಧನು ರಾಶಿ
ಭಾವನಾತ್ಮಕವಾಗಿ ನಿಮಗೇನು ನಿಜವಾಗಿಯೂ ಏನು ಬೇಕು ಎನ್ನುವ ಬಗ್ಗೆ ನೀವು ಚಂಚಲ ಮನೋಭಾವ ಹೊಂದಿರುತ್ತೀರಿ. ಹಣಕಾಸಿನ ಮುಗ್ಗಟ್ಟು ಟೀಕೆ ಮತ್ತು ವಾದಗಳಿಗೆ ಕಾರಣವಾಗಬಹುದು -ನಿಮ್ಮಿಂದ ಬಹಳಷ್ಟು ನಿರೀಕ್ಷಿಸುವವರಿಗೆ ಇಲ್ಲ ಎಂದು ಹೇಳಲು ಸಿದ್ಧರಾಗಿರಿ. ನಿಮ್ಮ ಸ್ನೇಹಿತರು ನಿಮ್ಮ ಉದಾರ ವರ್ತನೆಯ ದುರುಪಯೋಗ ಮಾಡಲು ಬಿಡಬೇಡಿ. ನೀವು ಪ್ರೀತಿಯಲ್ಲಿ ನಿಧಾನವಾಗಿ ಆದರೆ ಸ್ಥಿರವಾಗಿ ಉರಿಯಬಹುದು. ಕೆಲಸದ ಬಗ್ಗೆ ಅಸಮಾಧಾನ ಹೊಂದಿರಲು ಜೀವನ ತುಂಬಾ ಅಮೂಲ್ಯವಾಗಿದೆ. ಪರಿಸ್ಥಿತಿಗಳು ನಿಮ್ಮ ತಾಳ್ಮೆ ಪರೀಕ್ಷಿಸಬಹುದು. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಕೆಲಸದ ಒತ್ತಡ ಹಿಂದಿನಿಂದಲೂ ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸುತ್ತಿದೆ. ಆದರೆ ಇಂದು, ಎಲ್ಲಾ ಕುಂದುಕೊರತೆಗಳೂ ಮಾಯವಾಗುತ್ತವೆ.
ಮಕರ ರಾಶಿ
ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು- ಆದರೆ ನಿಮಗೆ ಮುಖ್ಯವಾದವರಿಗೆ ನೀವು ನಿಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುತ್ತದೆ. ನೀವು ಸಂತೋಷ ನೀಡುವ ಮೂಲಕ ಮತ್ತು ಹಿಂದಿನ ತಪ್ಪುಗಳನ್ನು ಮನ್ನಿಸುವ ಮೂಲಕ ನಿಮ್ಮ ಜೀವನವನ್ನು ಸಮರ್ಥಗೊಳಿಸಲಿದ್ದೀರಿ. ನಿಮ್ಮ ಕೆಲಸಕ್ಕೆ ಅಂಟಿಕೊಳ್ಳಿ ಮತ್ತು ಇಂದು ನಿಮಗೆ ಸಹಾಯ ಮಾಡಲು ಇತರರನ್ನು ಅವಲಂಬಿಸಬೇಡಿ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ಪ್ರೀತಿಭರಿತ ಹಾಡುಗಳು, ಸುಗಂಧಭರಿತ ಮೇಣದಬತ್ತಿಗಳು, ಉತ್ತಮ ಆಹಾರ, ಮತ್ತು ಕೆಲವು ಪಾನೀಯಗಳು; ಈ ದಿನವೆಲ್ಲ ನಿಮ್ಮ ಸಂಗಾತಿಯ ಜೊತೆ ಕಳೆಯುವ ಬಗೆಗಾಗಿದೆ.
ಕುಂಭ ರಾಶಿ
ಒಬ್ಬ ಸ್ನೇಹಿತರೊಡನೆ ಭಿನ್ನಾಭಿಪ್ರಾಯ ನಿಮ್ಮ ಸಹನೆಯನ್ನು ಪರೀಕ್ಷಿಸಬಹುದು. ನೀವು ಅನಗತ್ಯ ಒತ್ತಡವನ್ನು ತಪ್ಪಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ನಿಮ್ಮ ಜೊತೆಗಿರುವ ನಿಮ್ಮೊಂದಿಗೆ ಬಹಳ ಸಂತೋಷದಿಂದಿರುವುದಿಲ್ಲ – ನೀವು ಅವರನ್ನು ಸಂತೋಷಗೊಳಿಸಲು ಏನೇ ಮಾಡಿದರೂ ಕೂಡ. ಪ್ರೀತಿಯಲ್ಲಿ ನಿರಾಶೆ ನಿಮ್ಮನ್ನು ಕಂಗೆಡಿಸುವುದಿಲ್ಲ. ಕೆಲಸದ ಒತ್ತಡ ಇನ್ನೂ ನಿಮ್ಮ ಮನಸ್ಸನ್ನು ಆವರಿಸುತ್ತದೆ ಹಾಗೂ ಇದು ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಸಮಯವಿಲ್ಲದಂತೆ ಮಾಡುತ್ತದೆ. ಇಂದು ಜನರು ಹೊಗಳಿಕೆಗಳನ್ನು ನೀಡುತ್ತಾರೆ-ಇವುಗಳನ್ನು ನೀವು ಯಾವಾಗಲೂ ಕೇಳಬಯಸಿರುತ್ತೀರಿ. ನಿಮ್ಮ ಸಂಗಾತಿ ನಿಮ್ಮ ಜೊತೆಗಿರುವ ಬಗ್ಗೆ ನಿಮಗೆ ಕೆಲವು ಅಷ್ಟೇನೂ ಒಳ್ಳೆಯದಲ್ಲದ ವಿಷಯಗಳನ್ನು ಹೇಳಬಹುದು.
ಮೀನ ರಾಶಿ
ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನೀವು ಅತೀ ಉದಾರಿಯಾಗಿದ್ದಲ್ಲಿ - ನಿಮ್ಮ ನಿಕಟ ಜನರು ನಿಮ್ಮ ಅನುಚಿತ ಲಾಭ ತೆಗೆದುಕೊಳ್ಳಬಹುದು. ನಿಮ್ಮ ಪ್ರೇಮಿಯ ಅನಗತ್ಯ ಬೇಡಿಕೆಗಳಿಗೆ ಮಣಿಯಬೇಡಿ. ಹೊಸ ಉದ್ಯಮಗಳು ಆಕರ್ಷಕವಾಗಿರುತ್ತವೆ ಮತ್ತು ಒಳ್ಳೆಯ ಆದಾಯದ ಭರವಸೆ ಕಾಣಿಸುತ್ತದೆ. ಪ್ರವಾಸ ಮನರಂಜನೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇಂದು ನಿಮ್ಮ ಕಾರ್ಯಸೂಚಿಯಲ್ಲಿರುತ್ತವೆ. ನೀವು ಇಂದು ನಿಮ್ಮ ಸಂಗಾತಿಯ ಒಂದು ಕಠಿಣ ಸ್ವರೂಪವನ್ನು ನೋಡಬಹುದು.














ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ