ಭವಿಷ್ಯ
ಮೇಷ ರಾಶಿ
ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ. ಬ್ಯಾಂಕ್ ವ್ಯವಹರಗಳಲ್ಲಿ ಕಾಳಜಿ ವಹಿಸಬೇಕು. ನಿಮ್ಮ ಬಿಡುವಿನ ವೇಳೆಯನ್ನು ನಿಮ್ಮ ಮನೆಯ ಸೌಂದರ್ಯ ಹೆಚ್ಚಿಸಲು ಬಳಸಿ. ನೀವು ಕುಟುಂಬಕ್ಕೆ ಇದರಿಂದ ಸಂತೋಷವಾಗುತ್ತದೆ. ನೀವು ಜನಪ್ರಿಯರಾಗಿರುತ್ತೀರಿ ಮತ್ತು ಸುಲಭವಾಗಿ ವಿರುದ್ಧ ಲಿಂಗದ ಸದಸ್ಯರ ಸೆಳೆಯುತ್ತೀರಿ. ಮೊದಲಿನಿಂದ ಕೊನೆಯವರೆಗೂ ದಿನವು ನಿಮ್ಮನ್ನು ಕೆಲಸದಲ್ಲಿ ಚೈತನ್ಯದಾಯಕವಾಗಿಡುತ್ತದೆ. ನಿಮ್ಮ ಆಯಸ್ಕಾಂತೀಯ- ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ ನಿಮ್ಮನ್ನು ಪ್ರಸಿದ್ಧರನ್ನಾಗಿಸುತ್ತದೆ. ಇದು ಮದುವೆಯ ಉಜ್ವಲವಾದ ದಿನವನ್ನು ಅನುಭವಿಸುವ ದಿನವಾಗಿದೆ.
ವೃಷಭ ರಾಶಿ
ನಿಮ್ಮ ಅಧಿಕ ಚೈತನ್ಯವನ್ನು ಇಂದು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಮರ್ಪಣೆ ಮತ್ತು ಶ್ರಮವನ್ನು ಗಮನಿಸಲಾಗುತ್ತದೆ ಮತ್ತು ಇಂದು ನಿಮಗೆ ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ. ಥಿಯೇಟರ್ ಅಥವಾ ನಿಮ್ಮ ಸಂಗಾತಿಯ ಜೊತೆಗಿನ ಊಟ ನಿಮ್ಮನ್ನು ಒಂದು ಶಾಂತವಾದ ಮತ್ತು ಅದ್ಭುತ ಲಹರಿಯಲ್ಲಿರಿಸುವಂತೆ ತೋರುತ್ತದೆ. ಇಂದು ಪ್ರೀತಿಯಲ್ಲಿ ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ. ಸ್ಪರ್ಧೆ ಹೆಚ್ಚಾದ ಹಾಗೆ ಕೆಲಸದ ವೇಳಾಪಟ್ಟಿಯಲ್ಲಿ ಒತ್ತಡ ಉಂಟಾಗುತ್ತದೆ. ನೀವು ತಪ್ಪು ದಾರಿಗೆಳೆಯಲು ಅಥವಾ ನಿಮಗೆ ಹಾನಿ ಮಾಡುವ ಮಾಹಿತಿ ನೀಡಲು ಪ್ರಯತ್ನಿಸುವ ವ್ಯಕ್ತಿಗಳ ಬಗ್ಗೆ ಎಚ್ಚರಿದಿಂದಿರಿ. ಈ ದಿನ ನಿಜವಾಗಿಯೂ ಪ್ರೇಮಭರಿತವಾಗಿದೆ. ಒಳ್ಳೆಯ ಆಹಾರ, ಸುಗಂಧ, ಸಂತೋಷಗಳ ಜೊತೆ ನೀವು ನಿಮ್ಮ ಅರ್ಧಾಂಗಿಯ ಜೊತೆ ಒಳ್ಳೆಯ ಸಮಯ ಕಳೆಯುತ್ತೀರಿ.
ಮಿಥುನ ರಾಶಿ
ನೀವು ಒಂದು ದೀರ್ಘ ಪ್ರಯಾಣಕ್ಕೆ ಹೋಗಲು ಯೋಜನೆ ಹಾಕುತ್ತಿದ್ದ ಹಾಗೆ ನಿಮ್ಮ ಆರೋಗ್ಯ ಮತ್ತು ಇಂಧನ ಸಂರಕ್ಷಣೆಯ ಹವ್ಯಾಸ ನಿಮಗೆ ಅಪಾರವಾದ ಉಪಯೋಗವುಂಟುಮಾಡುತ್ತದೆ. ಬಿಡುವಿಲ್ಲದ ಕೆಲಸಗಳ ಹೊರತಾಗಿಯೂ ನೀವು ಆಯಾಸವನ್ನು ನಿಭಾಯಿಸಲು ಶಕ್ತರಾಗಿರುತ್ತೀರಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ - ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ನೀವು ಮಕ್ಕಳೊಡನೆ ಸ್ವಲ್ಪ ಸಮಯ ಕಳೆಯಬೇಕು ಮತ್ತು ಅವರಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಬೇಕು ಮತ್ತು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಲು ಕಲಿಸಬೇಕು. ಪ್ರೀತಿಯ ಭಾವಪರವಶತೆಯನ್ನು ಅನುಭವಿಸಲು ಯಾರಾದರೂ ದೊರಕಬಹುದು. ಕಲೆ ಮತ್ತು ರಂಗಭೂಮಿಯ ಜೊತೆ ಸಂಪರ್ಕ ಹೊಂದಿರುವವರು ಸೃಜನಶೀಲವಾಗಿ ಅತ್ಯುತ್ತಮವಾದದ್ದನ್ನು ನೀಡಲು ಹೊಸ ಅವಕಾಶಗಳನ್ನು ಪಡೆಯುತ್ತಾರೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ನಿಮ್ಮ ಪ್ರಚೋದಕ ವೈವಾಹಿಕ ಜೀವನದಲ್ಲಿ ಇಂದು ಒಂದು ಸುಂದರ ಬದಲಾವಣೆಯನ್ನು ನೀವು ಅನುಭವಿಸುತ್ತೀರಿ.
ಕರ್ಕ ರಾಶಿ
ಹೊರಾಂಗಣ ಚಟುವಟಿಕೆಗಳು ಇಂದು ದಣವು ಮತ್ತು ಒತ್ತಡ ತರುತ್ತವೆ. ದೀರ್ಘಕಾಲದ ದೃಷ್ಟಿಕೋನದಿಂದ ಹೂಡಿಕೆ ಮಾಡಬೇಕು. ಈಗ ತಾನೇ ಪರಿಚಯವಾದವರ ಜೊತೆ ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ಪ್ರೀತಿಯಲ್ಲಿ ಒಂದು ಅವಸರದ ಹೆಜ್ಜೆಯನ್ನು ತಪ್ಪಿಸಿ. ನೀವು ನಿಮ್ಮ ಕೆಲಸದಲ್ಲಿ ವಹಿಸುವ ಎಲ್ಲಾ ಶ್ರಮವೂ ಇಂದು ಫಲ ನೀಡುತ್ತದೆ. ಪ್ರಯಾಣ ಸಂತೋಷಕರ ಮತ್ತು ಹೆಚ್ಚು ಅನುಕೂಲಕರವಾಗಿರುತ್ತದೆ. ಇಂದು ನಿಮ್ಮ ಮದುವೆಯಲ್ಲಿನ ಒಂದು ಕಠಿಣ ಸಮಯವಾಗಿರಬಹುದು.
ಸಿಂಹ ರಾಶಿ
ಆತುರದ ನಿರ್ಧಾರ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಶಾಂತವಾಗಿ / ತಣ್ಣಗಿನ ಮನಸ್ಸಿನಿಂದ ಆಲೋಚಿಸಿ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ನೀವು ವಿಷಯಗಳನ್ನು ಬಗಹರಿಸಲು ಯತ್ನಿಸುತ್ತಿದ್ದ ಹಾಗೆ ಮನಸ್ಥಿತಿ ಮತ್ತು ಯೋಜನೆಗಳ ಬದಲಾವಣೆ ಆಕ್ರಮಿಸಿಕೊಳ್ಳುತ್ತದೆ. ಪ್ರಣಯ ನಿಮ್ಮ ಹೃದಯವನ್ನು ಆಳುತ್ತದೆ. ನಿಮ್ಮ ನಿರಂತರ ಶ್ರಮ ಇಂದು ನಿಜವಾಗಿಯೂ ಚೆನ್ನಾಗಿ ಫಲ ನೀಡುತ್ತದೆ. ದೇವರು ತಮಗೆ ತಾವೇ ಸಹಾಯ ಮಾಡಿಕೊಳ್ಳುವವರಿಗೆ ಸಹಾಯ ಮಾಡುತ್ತಾನೆಂದು ನೆನಪಿಡಬೇಕು. ನಿಮ್ಮ ಸಂಗಾತಿ ಎಲ್ಲ ಜಗಳಗಳನ್ನು ಮರೆತು ನಿಮ್ಮನ್ನು ಪ್ರೀತಿಯಿಂದ ಆಲಂಗಿಸಲು ಬಂದಾಗ, ಜೀವನ ನಿಜವಾಗಿಯೂ ಅದ್ಭುತವಾಗಿರುತ್ತದೆ.
ಕನ್ಯಾ ರಾಶಿ
ಕೆಲಸದ ಒತ್ತಡ ಇಂದು ಸ್ವಲ್ಪ ಒತ್ತಡ ತರಬಹುದು. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಕುಟುಂಬ ನಿಮ್ಮ ಸಹಯಕ್ಕೆ ಬರುತ್ತದೆ ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತದೆ. ನೀವು ಒಂದು ಅಭ್ಯಾಸವನ್ನು ಕರಗತ ಮಾಡಿಕೊಂಡವರನ್ನು ಗಮನಿಸುವುದರ ಮೂಲಕ ಕೆಲವು ಪಾಠಗಳನ್ನು ಕಲಿಯಬಹುದು. ಇದು ಆತ್ಮ ವಿಶ್ವಾಸವನ್ನು ಬಲಪಡಿಸುವಲ್ಲಿ ಅತ್ಯಂತ ಸಹಾಯಕವಾಗುತ್ತದೆ. ನಿಮ್ಮ ಪ್ರಿಯತಮೆಗೆ ನಿಮ್ಮ ಅಸಡ್ಡೆಯ ಗಮನ ಮನೆಯಲ್ಲಿ ಒತ್ತಡದ ಕ್ಷಣಗಳನ್ನು ತರಬಹುದು. ಕೆಲಸದಲ್ಲಿ ಎಲ್ಲವೂ ಚೆನ್ನಾಗಿರುವಂತೆ ತೋರುತ್ತದೆ. ನಿಮ್ಮ ಮನಸ್ಥಿತಿ ದಿನವಿಡೀ ಚೆನ್ನಾಗಿರುತ್ತದೆ. ಇಂದು ನೀವು ನಿಜವಾಗಿಯೂ ಲಾಭ ಪಡೆಯಬಯಸಿದರೆ – ಇತರರು ನೀಡಿದ ಸಲಹೆಯನ್ನು ಕೇಳಿ. ಇಂದು ನಿಮ್ಮ ವೈವಾಹಿಕ ಜೀವನದಲ್ಲಿನ ಪರಿಸ್ಥಿತಿಗಳು ನಿಮ್ಮ ನಿಯಂತ್ರಣ ಮೀರಬಹುದು.
ತುಲಾ ರಾಶಿ
ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ನೀವು ಆರ್ಥಿಕವಾಗಿ ವ್ಯವಹರಿಸುವರ ಜೊತೆಗೆ ಎಚ್ಚರಿಕೆಯಿಂದಿರಿ. ನೀವು ಪಾರ್ಟಿ ನೀಡಲು ಯೋಜಿಸುತ್ತಿದ್ದಲ್ಲಿ ನಿಮ್ಮ ಎಲ್ಲಾ ಒಳ್ಳೆಯ ಸ್ನೇಹಿತರನ್ನು ಆಮಂತ್ರಿಸಿ – ನಿಮ್ಮನ್ನು ಅಸ್ತುಷ್ಟಗೊಳಿಸುವ ಬಹಳಷ್ಟು ಜನರಿರುತ್ತಾರೆ. ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಮೂಲಕ ಮಾತ್ರ ನೀವು ನಿಮ್ಮ ಪತ್ನಿಗೆ ಭಾವನಾತ್ಮಕ ಬೆಂಬಲ ನೀಡಬಹುದು. ಇತರ ದೇಶಗಳಲ್ಲಿ ವೃತ್ತಿಪರ ಸಂಪರ್ಕಗಳನ್ನು ಅಭಿವೃದ್ಧಿಪಡಿಸಲು ಇದು ಉತ್ತಮ ಸಮಯ. ಧರ್ಮಕಾರ್ಯಗಳು / ಹವನಗಳು / ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳಲಾಗುವುದು. ನಿಮ್ಮ ವೈವಾಹಿಕ ಜೀವನದ ಹಳೆಯ ಪ್ರಣಯದ, ಬೆಂಬತ್ತುವ, ಮತ್ತು ಓಲೈಸುವ ಸುಂದರ ದಿನಗಳನ್ನು ನೀವು ಮತ್ತೆ ಜೀವಿಸುತ್ತೀರಿ.
ವೃಶ್ಚಿಕ ರಾಶಿ
ನೀವು ವ್ಯಾಯಾಮದ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಬಹುದು. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ. ನಿಮ್ಮ ಸ್ನೇಹಿತರು ನಿಮ್ಮ ಉದಾರ ವರ್ತನೆಯ ದುರುಪಯೋಗ ಮಾಡಲು ಬಿಡಬೇಡಿ. ಹಠಾತ್ ಗೆಳೆತನ ಪಶ್ಚಾತ್ತಾಪ ತರುವುದರಿಂದ ಅದನ್ನು ತಪ್ಪಿಸಿ. ಕೆಲಸ ಮಾಡುವಾಗ ಸಾಮಾಜಿಕ ತಾಣವನ್ನು ಬಳಸುವುದು ತೊಂದರೆಯುಂಟುಮಾಡಬಹುದು. ಇಂದು ಕೈಗೊಂಡ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಇಂದು ನೀವು ಎಲ್ಲಾ ಸಲಹೆಗಳನ್ನೂ ಟೀಕೆಗಳೆಂದು ಅಂದುಕೊಳ್ಳಬಹುದು, ಹಾಗೂ ಅಂತಿಮವಾಗಿ ಇದು ನಿಮ್ಮ ಮನಸ್ಥಿತಿಯನ್ನು ಹಾಳುಮಾಡುತ್ತದೆ.
ಧನು ರಾಶಿ
ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿದ್ದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ತರಾತುರಿಯಲ್ಲಿ ಹೂಡಿಕೆಗಳನ್ನು ಮಾಡಬೇಡಿ - ನೀವು ಎಲ್ಲಾ ಸಾಧ್ಯವಿರುವ ಕೋನಗಳಿಂದ ಹೂಡಿಕೆಯನ್ನು ಪರಿಶೀಲಿಸದೇ ಹೋದರೆ ನಷ್ಟ ಖಚಿತ. ನಿಮ್ಮ ನಾಲಗೆ ನಿಮ್ಮ ಅಜ್ಜ ಅಜ್ಜಿಯಂದಿರ ಭಾವನೆಗಳಿಗೆ ಘಾಸಿ ಮಾಡುವುದರಿಂದ ನಿಮ್ಮ ಭಾಷೆಯನ್ನು ನಿಯಂತ್ರಿಸಿ. ಹರಟಿ ನಿಮ್ಮ ಸಮಯ ವ್ಯರ್ಥ ಮಾಡುವುದಕ್ಕಿಂತ ಸುಮ್ಮನಿರುವುದು ಉತ್ತಮ. ನಾವು ಬುದ್ಧಿವಂತ ಚಟುವಟಿಕೆಗಳ ಮೂಲಕ ಜೀವನಕ್ಕೆ ಅರ್ಥ ನೀಡುತ್ತೇವೆಂದು ನೆನಪಿಡಿ. ನೀವು ಅವರ ಕಾಳಜಿ ವಹಿಸುತ್ತೀರೆಂದು ಅವರಿಗೆ ತಿಳಿಯುವಂತೆ ಮಾಡಿ. ಪ್ರೀತಿಯ ಇಂದ್ರಜಾಲ ಇಂದು ನಿಮ್ಮನ್ನು ಕಟ್ಟಿಹಾಕಲಿದೆ. ಕೇವಲ ಈ ಆನಂದವನ್ನು ಆಸ್ವಾದಿಸಿ. ನೀವು ಸಮಯವೇ ಹಣವೆಂದು ನೀವು ನಿಮ್ಮ ಅತ್ಯುತ್ತಮ ಸಂಭಾವ್ಯತಯನ್ನು ತಲುಪಲು ಹೆಜ್ಜೆಗಳನ್ನಿಡಬೇಕು. ಪ್ರವಾಸ ಮನರಂಜನೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇಂದು ನಿಮ್ಮ ಕಾರ್ಯಸೂಚಿಯಲ್ಲಿರುತ್ತವೆ. ಮಳೆ ಪ್ರಣಯದ ದ್ಯೋತಕವಾಗಿದೆ ಮತ್ತು ನೀವು ದಿನವಿಡೀ ನಿಮ್ಮ ಜೀವನ ಸಂಗಾತಿಯ ಜೊತೆ ಇದೇ ಭಾವಪರವಶತೆಯನ್ನು ಹೊಂದುವಿರಿ.
ಮಕರ ರಾಶಿ
ಕೆಲವು ಅನಿವಾರ್ಯ ಸಂದರ್ಭಗಳು ನಿಮಗೆ ಅಹಿತಕರವೆನಿಸಬಹುದು. ಆದರೆ ನೀವು ನಿಮ್ಮ ಸಮತೋಲನ ಕಾಯ್ದುಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಪ್ರತಿಕ್ರಿಯಿಸಬಾರದು. ದುಂದುಗಾರಿಕೆ ಮತ್ತು ಸಂಶಯಾಸ್ಪದವಾದ ಹಣಕಾಸು ಯೋಜನೆಗಳನ್ನು ತಪ್ಪಿಸಿ. ಕುಟುಂಬದ ಸದಸ್ಯರೊಂದಿಗೆ ಕೆಲವು ವಿಶ್ರಾಂತಿಯ ಕ್ಷಣಗಳನ್ನು ಕಳೆಯಿರಿ. ನೀವು ಕಾಳಜಿಯುಳ್ಳ ಮತ್ತು ತಿಳುವಳಿಕೆಯುಳ್ಳ ಸ್ನೇಹಿತರನ್ನು ಭೇಟಿ ಮಾಡುತ್ತೀರಿ. ವೃತ್ತಿಪರ ಗುರಿಗಳನ್ನು ಸಾಧಿಸಲು ನಿಮ್ಮ ಚೈತನ್ಯವನ್ನು ಹೊಂದಿಸಲು ಇದು ಸರಿಯಾದ ಸಮಯ. ದೇವರು ತಮಗೆ ತಾವೇ ಸಹಾಯ ಮಾಡಿಕೊಳ್ಳುವವರಿಗೆ ಸಹಾಯ ಮಾಡುತ್ತಾನೆಂದು ನೆನಪಿಡಬೇಕು. ಮದುವೆ ಮೊದಲೆಂದೂ ಇಂದಿಗಿಂತ ಹೆಚ್ಚು ಅದ್ಭುತವಾಗಿರಲಿಲ್ಲ.
ಕುಂಭ ರಾಶಿ
ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡದೇ ನಿಮಗೂ ಮಾನಸಿಕ ಒತ್ತಡ ನೀಡುತ್ತದೆ. ನೀವು ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಗಳಿಕೆಯ ಸಾಧ್ಯತೆಯನ್ನು ಹೊಂದಿದ್ದೀರಿ. ಏನಾದರೂ ಸರಿಪಡಿಸಲು ಹಾಗೂ ಸ್ನೇಹಿತರ ಜೊತೆ ಏನಾದರೂ ಕುತೂಹಲಕಾರಿ ಹಾಗೂ ಮನರಂಜನೀಯವಾದದ್ದನ್ನು ಮಾಡಲು ಒಂದು ಪರಿಪೂರ್ಣ ದಿನ. ನೀವು ವಾಸ್ತವಾಂಶಗಳನ್ನು ಎದುರಿಸುತ್ತಿದ್ದ ಹಾಗೆ ಪ್ರೀತಿಪಾತ್ರರನ್ನು ಮರೆಬೇಕಾಗುತ್ತದೆ. ನೀವು ಒಂದು ತಂಡವನ್ನು ಒಟ್ಟಾಗಿಸಲು ಹಾಗೂ ಒಂದು ಸಂಘದ ಗುರಿಯನ್ನು ತಲುಪಲು ಕೆಲಸ ಮಾಡಲು ಪ್ರಬಲ ಸ್ಥಾನದಲ್ಲಿರುತ್ತೀರಿ. ಹತ್ತಿರದ ಸಹಯೋಗಿಗಳ ಜೊತೆ ಹಲವಾರು ಭಿನ್ನಾಭಿಪ್ರಾಯಗಳು ಉದ್ಭವಿಸಬಹುದಾದ ಒತ್ತಡ ತುಂಬಿದ ದಿನ. ಸಂಬಂಧಿಕರಿಂದಾಗಿ ವ್ಯಾಜ್ಯವುಂಟಾಗುವ ಸಾಧ್ಯತೆಯಿದೆ, ಆದರೆ ಕೊನೆಯಲ್ಲಿ ಎಲ್ಲವೂ ಸುಂದರವಾಗಿಯೇ ಕೊನೆಗೊಳ್ಳುತ್ತದೆ.
ಮೀನ ರಾಶಿ
ನೀವು ನಿಮ್ಮ ಸಹೋದರರ ಕೆಲಸದಲ್ಲಿ ಮತ್ತೆ ಮತ್ತೆ ಅಡ್ಡಿಪಡಿಸುವ ಮೂಲಕ ಅವರನ್ನು ನೋಯಿಸಬಹುದು. ಬೇಕಾಗಿರದಿದ್ದಲ್ಲಿ ಹಾಗೂ ನಿಮ್ಮ ಸಲಹೆಗಳೂ ಸ್ವೀಕಾರಾರ್ಹವಲ್ಲದಿದ್ದಲ್ಲಿ ಸಲಹೆಗಳನ್ನು ನೀಡಬೇಡಿ ಮಾತನಾಡದಿರುವ ನಿಯಂತ್ರಣ ಹೊಂದಿರಿ ಮತ್ತು ಎಲ್ಲರೊಂದಿಗೂ ಪ್ರಾಮಾಣಿಕರಾಗಿರಿ. ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ- ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ನೀವು ಮನೆಯಲ್ಲಿ ಜನರೊಡನೆ ಏನಾದರೂ ರೋಮಾಂಚಕ ಮತ್ತು ವೈವಿಧ್ಯಮಯವಾದದ್ದನ್ನು ಮಾಡಬೇಕು. ಇಂದು ಯಾರಾದರೂ ನಿಮ್ಮ ಪ್ರೀತಿಯ ನಡುವೆ ಬರಬಹುದು. ವ್ಯವಹಾರದ ಜೊತೆ ಸಂತೋಷವನ್ನು ಬೆರೆಸಬೇಡಿ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ನಿಮ್ಮ ಜೀವನ ಸಂಗಾತಿ ಕೆಲವು ಅಚ್ಚರಿಗಳ ಜೊತೆ ನಿಮ್ಮ ಕೆಟ್ಟ ಮನಸ್ಥಿತಿಯನ್ನು ಸರಿಪಡಿಸುತ್ತಾರೆ.














ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ