ಮಂಡ್ಯ: ಕೆಆರ್ಎಸ್ನ ಬೃಂದಾವನದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರಕ್ಕೆ ಮೂವರು ಪ್ರವಾಸಿಗರು ಬಲಿಯಾಗಿದ್ದಾರೆ. ಮಂಗಳವಾರ ಸಂಜೆ ಮರ ಬಿದ್ದು ಮೂವರು ಪ್ರವಾಸಿಗರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳು ಕೇರಳ ಮೂಲದ ವಿನೋದ್, ಹಿಲಾರ್ ಮತ್ತು ತಮಿಳು ನಾಡು ಮೂಲದ ರಾಜಶೇಖರ್ ಎಂದು ತಿಳಿದು ಬಂದಿದೆ.
ಭಾರೀ ಬಿರುಗಾಳಿಯೊಂದಿಗೆ ಮಳೆ ಸುರಿದಾಗ ಪ್ರವಾಸಿಗರು ಮರದ ಅಡಿಯಲ್ಲಿ ನಿಂತಿದ್ದು ಬೃಹತ್ ಮರ ದೊಪ್ಪನೆ ಬಿದ್ದ ಕಾರಣ ಮೂವರು ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಪ್ರವಾಸಿಗ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆ ಆರ್ಎಸ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ