ಹೊಸದಿಲ್ಲಿ, ಮೇ 4: ಈ ಬಾರಿ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸುವುದಿಲ್ಲ ಎಂದು ಪ್ರಶಸ್ತಿಗಾಗಿ ವಿಜೇತರನ್ನು ಆಯ್ಕೆ ಮಾಡುವ, ಲೈಂಗಿಕ ದೌರ್ಜನ್ಯ ಹಗರಣದ ವಿವಾದದಲ್ಲಿ ಸಿಲುಕಿದ್ದ ಸ್ವೀಡಿಶ್ ಅಕಾಡಮಿ ಶುಕ್ರವಾರ ಘೋಷಿಸಿದೆ.
ಸದಸ್ಯೆಯೊಬ್ಬರ ಪತಿಯ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ನಿರ್ವಹಿಸಿದ ವಿಚಾರದಲ್ಲಿ ಈ ಅಕಾಡಮಿಯು ವಿವಾದಕ್ಕೆ ಸಿಲುಕಿತ್ತು. ವಿವಾದದ ನಂತರ ಸದಸ್ಯೆ ಅಕಾಡಮಿಯನ್ನು ತೊರೆದಿದ್ದರು.
ಮುಂದಿನ ವರ್ಷದ 2019ರ ನೊಬೆಲ್ ಸಾಹಿತ್ಯ ಪ್ರಶಸ್ತಿಯ ಜೊತೆಗೆ 2018ರ ಪ್ರಶಸ್ತಿ ವಿಜೇತರನ್ನೂ ಘೋಷಿಸಲಾಗುವುದು ಎಂದು ಅಕಾಡಮಿ ತಿಳಿಸಿದೆ. "ಈ ಬಾರಿ ಪ್ರಶಸ್ತಿ ಪ್ರದಾನಿಸುವುದಿಲ್ಲ ಎಂದು ನಾವು ಹಲವು ಚರ್ಚೆಗಳ ನಂತರ ನಿರ್ಧಾರಕ್ಕೆ ಬಂದಿದ್ದೇವೆ. ಮುಂದಿನ ವರ್ಷ 2019ರ ಜೊತೆಗೆ 2018ರ ಪ್ರಶಸ್ತಿಯನ್ನೂ ಪ್ರದಾನಿಸಲಿದ್ದೇವೆ" ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ