ನವದೆಹಲಿ, ಮೇ 16-ದೇಶದಾದ್ಯಂತ ಕಳೆದ ಐದು ವಾರಗಳಲ್ಲಿ ಭಾರೀ ಬಿರುಗಾಳಿ ಮತ್ತು ಮಳೆಯಿಂದ ಮೃತಪಟ್ಟವರ ಸಂಖ್ಯೆ, 2017ರ ಇಡೀ ವರ್ಷದಲ್ಲಿ ಮಳೆಯ ರುದ್ರನರ್ತನದಲ್ಲಿ ಸಂಭವಿಸಿದ ಸಾವಿಗಿಂತಲೂ ಅಧಿಕ..! ಕಳೆದ ಏಪ್ರಿಲ್ 11ರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಬಿರುಗಾಳಿ ಮತ್ತು ಮಳೆಗೆ ಬಲಿಯಾದವರ ಸಂಖ್ಯೆ 280. ಇದು ಕಳೆದ ವರ್ಷ ಇದೇ ರೀತಿಯ ದುರಂತದಲ್ಲಿ ಮೃತಪಟ್ಟವರ ಸಂಖ್ಯೆಗಿಂತಲೂ ಹೆಚ್ಚು. ಕಳೆದ ಭಾನುವಾರದಿಂದ ಆರು ರಾಜ್ಯಗಳಲ್ಲಿ ಪ್ರಕೃತಿ ವಿಕೋಪದಲ್ಲಿ 94 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಏಪ್ರಿಲ್‍ನಿಂದ ಇಲ್ಲಿಯವರೆಗೆ ಮೃತರ ಸಂಖ್ಯೆ 280ಕ್ಕೇರಿದೆ.
ಈ ವರ್ಷ ಮೇ ತಿಂಗಳ ಮೊದಲ ಎರಡು ವಾರಗಳಲ್ಲಿ 224 ಮಂದಿ ಮಳೆ ಅನಾಹುತಕ್ಕೆ ಬಲಿಯಾಗಿದ್ದಾರೆ. ಏಪ್ರೀಲ್‍ನಲ್ಲಿ 56 ಮಂದಿ ಅಸುನೀಗಿದ್ದಾರೆ. ಕಳೆದ ವರ್ಷ ದೇಶದ ವಿವಿಧೆಡೆ ಭಾರೀ ಬಿರುಗಾಳಿ ಮತ್ತು ಮಳೆಗೆ 197 ಮಂದಿ ಸಾವಗೀಡಾಗಿದ್ದರು. 2016ರಲ್ಲಿ 216 ಜನರು ಮೃತರಾಗಿದ್ದರು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ