ಭವಿಷ್ಯ 28-12-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಬುಧವಾರ, ಡಿಸೆಂಬರ್ 27, 2017

ಭವಿಷ್ಯ 28-12-2017

ಭವಿಷ್ಯ
ಮೇಷ ರಾಶಿ
ಸಣ್ಣ ಸಣ್ಣ ವಿಷಯಗಳು ನಿಮ್ಮ ಮನಸ್ಸು ಕೆಡಿಸಲು ಬಿಡಬೇಡಿ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಹೆತ್ತವರೆದುರಿಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗದಿರುವುದರಿಂದ ನಿಮ್ಮನ್ನು ಇಂದು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆ. ನೀವು ಅದನ್ನು ಸರಿಯಾಗಿ ತಿಳಿಸುತ್ತೀರೆಂದು ಖಚಿತಪಡಿಸಿಕೊಳ್ಳಿ. ಇಂದು ನಿಮ್ಮ ಪ್ರೇಮಿಯು ಅನಗತ್ಯ ಬೇಡಿಕೆಗಳನ್ನು ಮಾಡಲು ಬಿಡಬೇಡಿ. ಪ್ರಮುಖ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರ ಒತ್ತಡಕ್ಕೆ ಮಣಿಯಬೇಡಿ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ಒಂದು ನಷ್ಟ ನಿಮ್ಮ ವೈವಾಹಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ವೃಷಭ ರಾಶಿ
ದುಃಖಿತರಾಗಿ ಮತ್ತು ಖಿನ್ನರಾಗಿರಬೇಡಿ. ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ಮಕ್ಕಳು ಅವರ ವೃತ್ತಿಯನ್ನು ಯೋಜಿಸುವುದಕ್ಕಿಂತ ಹೆಚ್ಚಾಗಿ ಹೊರಾಂಗಣ ಚಟುವಟಿಕೆಗಳಲ್ಲೇ ಸಮಯ ಕಳೆಯುವುದರಿಂದ ಅವರು ನಿರಾಸೆ ಉಂಟುಮಾಡಬಹುದು. ಸಾಮಾಜಿಕ ಅಡೆತಡೆಗಳನ್ನು ದಾಟಲು ಸಾಧ್ಯವಾಗುವುದಿಲ್ಲ. ಕೆಲಸದಲ್ಲಿ ನಿಮಗೆ ಕಠಿಣವಾದ ದಿನದಂತೆ ತೋರುತ್ತದೆ. ಶಾಪಿಂಗ್ ಮತ್ತು ಇತರ ಚಟುವಟಿಕೆಗಳು ನಿಮ್ಮನ್ನು ದಿನವಿಡೀ ಬಿಡುವಿಲ್ಲದಂತಿಡುತ್ತವೆ. ನಿಮ್ಮ ಆರೋಗ್ಯ ನಿಮ್ಮ ಸಂಗಾತಿಯ ನೀಡಿದ ಒತ್ತಡದಿಂದಾಗಿ ಬಳಲಬಹುದು.
ಮಿಥುನ ರಾಶಿ
ಅನಾವಶ್ಯಕವಾಗಿ ವಾದ ಮಾಡಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನೀವು ಒಂದು ವಾದದಿಂದ ಏನನ್ನೂ ಪಡೆಯದಿದ್ದರೂ ಏನಾದರೂ ಕಳೆದುಕೊಳ್ಳುತ್ತೀರೆಂದು ನೆನಪಿಟ್ಟುಕೊಳ್ಳಿ. ನಿಮ್ಮ ಖರ್ಚುಗಳು ನಿಮ್ಮ ಬಜೆಟ್ ಅನ್ನು ಮೀರಬಹುದು ಹಾಗೂ ಅನೇಕ ಪ್ರಗತಿಯಲ್ಲಿರುವ ಯೋಜನೆಗಳನ್ನು ಹಠಾತ್ತನೆ ಸ್ಥಗಿತಗೊಳಿಸಬಹುದು. ನಿಕಟ ಕುಟುಂಬದ ಸದಸ್ಯರು ನಿಮಗೆ ಅಸೂಯೆಯುಂಟಾಗುವಂತೆ ಮತ್ತು ಕಿರಕಿರಿಯುಂಟಾಗುವಂತೆ ಮಾಡುತ್ತಾರೆ- ಇದನ್ನು ದೊಡ್ಡದಾಗಿಸುವ ಬದಲು ನಿಮಗೆ ಏನನಿಸುತ್ತಿದೆಯೆಂದು ನೀವು ಹೇಳಬೇಕು. ನಿಮ್ಮ ಪ್ರೀಪಾತ್ರರಲ್ಲಿ ತಪ್ಪು ಹುಡುಕುತ್ತ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಇಂದು ಕೆಲಸದಲ್ಲಿ ನಿಮಗೆ ನಿಜಕ್ಕೂ ಒಳ್ಳೆಯದಾಗಬಹುದು, ಇಂದು ನಿಮ್ಮನ್ನು ದ್ವೇಷಿಸುವವರಿಗೆ "ಹಲೋ" ಎಂದಲ್ಲಿ. ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಲು ಹಿಂಜರಿಯದಿರಿ. ಈ ದಿನ ನಿಮ್ಮ ಸಂಗಾತಿಗೆ ಬೇಸರವಾಗಿ ನಿಮ್ಮ ಸಂಬಂಧದ ಬೆಚ್ಚಗಿನ ಭಾವ ಹೋಗಬಹುದು.
ಕರ್ಕ ರಾಶಿ
ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಖರ್ಚು ಮಾಡಲು ಮುಂದೆಹೋದಲ್ಲಿ ನೀವು ಖಾಲಿ ಜೇಬಿನಿಂದ ಮನೆ ಸೇರಬೇಕಾಗುತ್ತದೆ. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ. ನಿಮ್ಮ ಪ್ರೀತಿ ಸಂಗಾತಿಯ ಸಾಮಾಜಿಕ ಮಾಧ್ಯಮದ ಕಳೆದ ಕೆಲವು ಸ್ಟೇಟಸ್‌ಗಳನ್ನು ಪರಿಶೀಲಿಸಿ, ನೀವು ಒಂದು ಸುಂದರ ಅಚ್ಚರಿಯನ್ನು ಪಡೆಯುತ್ತೀರಿ. ಸುತ್ತಲಿರುವ ಎಲ್ಲವೂ ಕೆಲಸದಲ್ಲಿ ನಿಮಗೆ ಸವಾಲು ಹಾಕುತ್ತವೆ; ಬಲಶಾಲಿಯಾಗಿರಿ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ವಿವಾಹಿತ ಜೋಡಿಗಳು ಒಟ್ಟಾಗಿ ವಾಸಿಸುತ್ತಾರೆ, ಆದರೆ ಅದು ಯಾವಾಗಲೂ ಪ್ರಣಯಭರಿತವಾಗಿರಲೇಬೇಕೆಂದಿಲ್ಲ. ಆದ್ದರಿಂದ ಇಂದು, ಇದು ನಿಜವಾಗಿಯೂ ಪ್ರಣಯಭರಿತವಾಗಿರುತ್ತದೆ.
ಸಿಂಹ ರಾಶಿ
ನೀವು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದಲ್ಲಿ ಖಿನ್ನತೆಗೊಳಗಾಗಬೇಡಿ. ಆಹಾರದ ಸ್ವಾದಕ್ಕೆ ಉಪ್ಪು ಬೇಕಾದ ಹಾಗೆ ಅತೃಪ್ತಿಯಿಂದ ಮಾತ್ರ ನೀವು ಸಂತೋಷದ ಮೌಲ್ಯವನ್ನು ಅರ್ಥ ಮಾಡಿಕೊಳ್ಳುತ್ತೀರಿ. ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಕೆಲವು ಸಾಮಾಜಿಕ ಸಮಾರಂಭಗಳಿಗೆ ಹಾಜರಾಗಿ. ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಇಂದು ಹಾಜರಾಗುವ ಸಮಾರಂಭದಲ್ಲಿ ಹೊಸ ಸ್ನೇಹ ಅಭಿವೃದ್ಧಿಯಾಗುತ್ತದೆ. ಹರ್ಷಚಿತ್ತದಿಂದಿರಿ ಹಾಗೂ ಪ್ರೀತಿಯಲ್ಲಿನ ಏಳುಬೀಳುಗಳನ್ನು ಎದುರಿಸುವ ಧೈರ್ಯ ಹೊಂದಿರಿ. ಕೆಲಸದಲ್ಲಿ ಸ್ವಲ್ಪ ತೊಂದರೆಯಿದ್ದಂತೆ ತೋರುತ್ತದೆ. ಶತ್ರುಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಬೇಕು. ಯಾರೋ ಒಬ್ಬ ವ್ಯಕ್ತಿ ಇಂದು ನಿಮ್ಮ ಸಂಗಾತಿಯಲ್ಲಿ ತುಂಬಾ ಆಸಕ್ತಿ ತೋರಿಸಬಹುದು, ಆದರೆ ಕೊನೆಗೆ ಇಲ್ಲಿ ಏನೂ ತಪ್ಪು ನಡೆಯುತ್ತಿಲ್ಲ ಎಂದು ನಿಮಗೆ ಅರಿವಾಗುತ್ತದೆ.
ಕನ್ಯಾ ರಾಶಿ
ನಿಮ್ಮ ಕಚೇರಿಯನ್ನು ಬೇಗನೆ ಬಿಡಲು ಮತ್ತು ನೀವು ನಿಜವಾಗಿಯೂ ಆನಂದಿಸುವದನ್ನು ಮಾಡಲು ಪ್ರಯತ್ನಿಸಿ. ಬ್ಯಾಂಕ್ ವ್ಯವಹರಗಳಲ್ಲಿ ಕಾಳಜಿ ವಹಿಸಬೇಕು. ನಿಮ್ಮ ಪೋಷಕರನ್ನು ಸಂತುಷ್ಟಪಡಿಸುವುದು ನಿಮಗೆ ಕಷ್ಟವೆನಿಸಬಹುದು. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಅವರ ದೃಷ್ಟಿಯಲ್ಲಿ ನೋಡಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿ. ಅವರು ನಿಮ್ಮ ಎಲ್ಲಾ ಗಮನ, ಪ್ರೀತಿ ಮತ್ತು ಸಮಯದ ಹಕ್ಕುದಾರರಾಗಿದ್ದಾರೆ. ಒಬ್ಬ ಸುಂದರ ನಗುವಿನಿಂದ ನಿಮ್ಮ ಪ್ರೇಮಿಯ ದಿನವನ್ನು ಪ್ರಕಾಶಮಾನವಾಗಿಸಿ. ಕೆಲಸದಲ್ಲಿ ವಿಚಿತ್ರಗಳಾಗಬಹುದು; ನೀವು ಎಲ್ಲವೂ ನಿಮ್ಮ ವಿರುದ್ಧ ಹೋಗುವುದನ್ನು ನೋಡುತ್ತೀರಿ. ಆದರೆ, ಇದು ನಿಜವಲ್ಲ. ಇಂದು ವಿಷಯಗಳು ನೀವು ಬಯಸುವ ರೀತಿಯಲ್ಲಿ ನಡೆಯದ ದಿನಗಳಲ್ಲಿ ಒಂದು. ನೀವು ಹಿಂದಿನಿಂದಲೂ ಶಾಪಗ್ರಸ್ತವಾಗಿದ್ದೀರೆನ್ನುವ ಭಾವನೆ ಹೊಂದಿದ್ದಲ್ಲಿ, ಇಂದು ನೀವು ಆಶೀರ್ವಾದ ಹೊಂದಿದಂತೆ ಅನಿಸುತ್ತದೆ.
ತುಲಾ ರಾಶಿ
ಹತಾಶೆಯ ಭಾವನೆ ನಿಮ್ಮನ್ನುಅವರಿಸಲು ಬಿಡಬೇಡಿ. ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ಕುಟುಂಬದಲ್ಲಿ ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಬದಲಾಯಿಸಿಕೊಳ್ಳಲು ಇದು ಒಳ್ಳೆಯ ಸಮಯ. ಜೀವನದ ಏಳುಬೀಳುಗಳನ್ನು ಹಂಚಿಕೊಳ್ಳಲು ಅವರ ಸಹಕಾರದೊಂದಿಗೆ ಕೆಲಸ ಮಾಡಿ. ನಿಮ್ಮ ಬದಲಾದ ಧೋರಣೆ ಅವರಿಗೆ ಅನಿಯಮಿತ ಆನಂದ ನೀಡುತ್ತದೆ. ಮನೆಯ ಕರ್ತವ್ಯಗಳನ್ನು ತಪ್ಪಿಸುವುದು ಮತ್ತು ಹಣಕ್ಕಾಗಿ ಪರಿತಪಿಸುವುದು ನಿಮ್ಮ ವೈವಾಹಿಕ ಜೀವನಕ್ಕೆ ಹಾನಿ ತರಬಹುದು ನಿಮ್ಮ ಪಾಲುದಾರರು ಅವರ ಮಾತು ನಡೆಸದಿದ್ದರೆ ಬೇಸರಿಸಿಕೊಳ್ಳಬೇಡಿ-ನೀವು ಕುಳಿತುಕೊಂಡು ಮಾತನಾಡಬೇಕಾದ ಅಗತ್ಯವಿದೆ. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ಇಂದು, ನಿಮ್ಮ ಸಂಗಾತಿಯ ಜೊತೆಗಿನ ಒಂದು ಜಗಳದಿಂದಾಗಿ ನಿಮ್ಮ ವೈವಾಹಿಕ ಬಂಧ ಶಿಥಿಲಗೊಂಡಿದೆಯೆಂದು ನೀವು ಭಾವನಾತ್ಮಕವಾಗಿ ಭಾವಿಸಬಹುದು.
ವೃಶ್ಚಿಕ ರಾಶಿ
ವಿಶೇಷವಾಗಿ ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ. ಸಮೂಹ ಪಾಲ್ಗೊಳ್ಳುವಿಕೆ ಮನರಂಜನಾತ್ಮಕವಾಗಿದ್ದರೂ ನೀವು ಇತರರ ಮೇಲೆ ಖರ್ಚು ಮಾಡುವುದನ್ನು ನಿಲ್ಲಿಸದಿದ್ದರೆ ಅದು ದುಬಾರಿಯಾಗಬಹುದು. ನೀವು ವಿಷಯಗಳನ್ನು ಬಗಹರಿಸಲು ಯತ್ನಿಸುತ್ತಿದ್ದ ಹಾಗೆ ಮನಸ್ಥಿತಿ ಮತ್ತು ಯೋಜನೆಗಳ ಬದಲಾವಣೆ ಆಕ್ರಮಿಸಿಕೊಳ್ಳುತ್ತದೆ. ನೀವು ಯಾರಾದರೂ ವಿಶೇಷವಾದವರ ಗಮನ ಸೆಳೆಯುತ್ತೀರಿ –ನೀವು ನಿಮ್ಮ ಗುಂಪಿನಲ್ಲಿ ಚಲಿಸಿದಲ್ಲಿ. ಸಹಭಾಗಿತ್ವದ ಅವಕಾಶಗಳು ಚೆನ್ನಾಗಿ ಕಂಡರೂ ಎಲ್ಲವನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಿ. ರಹಸ್ಯ ಶತ್ರುಗಳು ನಿಮ್ಮ ಬಗ್ಗೆ ವದಂತಿಗಳು ಹರಡಲು ಉತ್ಸಾಹಿಗಳಾಗಿರುತ್ತಾರೆ. ನೀವು ಕೆಲಸದಲ್ಲಿ ಅಭಿನಂದನೆಗಳನ್ನು ಪಡೆಯಬಹುದು.
ಧನು ರಾಶಿ
ನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ನಿಮ್ಮ ಹಣಕಾಸಿನಲ್ಲಿ ಅತೀ ಉದಾರವಾಗಿದ್ದಲ್ಲಿ ನಿಮ್ಮ ದುರುಪಯೋಗ ತೆಗೆದುಕೊಳ್ಳಲಾಗುತ್ತದೆ. ಕಚೇರಿಯ ಒತ್ತಡವನ್ನು ನಿಮ್ಮ ಮನೆಗೆ ತರಬೇಡಿ. ಇದು ನಿಮ್ಮ ಕುಟುಂಬದ ಸಂತೋಷವನ್ನು ಹಾಳು ಮಾಡಬಹುದು. ಸಮಸ್ಯೆಯನ್ನು ಕಚೇರಿಯಲ್ಲೇ ಎದುರಿಸುವುದು ಮತ್ತು ನಿಮ್ಮ ಕೌಟುಂಬಿಕ ಜೀವನವನ್ನು ಆನಂದಿಸುವುದು ಉತ್ತಮ. ಇವತ್ತು ಡೇಟ್‌ಗೆ ಹೋದಲ್ಲಿ ವಿವಾದಾತ್ಮಕ ವಿಷಯಗಳನ್ನು ಕೆದಕುವುದನ್ನು ತಪ್ಪಿಸಿ. ನೀವು ಇಂದು ಪಡೆದ ಹೆಚ್ಚುವರಿ ಜ್ಞಾನವು ಸಮಕಾಲೀನರೊಂದಿಗೆ ವ್ಯವಹರಿಸುವಾಗ ನಿಮಗೆ ಸಹಾಯ ಮಾಡುತ್ತದೆ. ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಿ. ನೀವು ನಿಮ್ಮ ಸಂಗಾತಿಯ ಜೊತೆ ಒಂದು ಆರಾಮವಾದ ದಿನವನ್ನು ಕಳೆಯುತ್ತೀರಿ.
ಮಕರ ರಾಶಿ
ನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ. ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುವಂತೆ ತೋರುತ್ತಿರುವುದರಿಂದ ನಿಮ್ಮ ಮಾತುಗಳ ಬಗ್ಗೆ ಎಚ್ಚರ ವಹಿಸಿ. ಪ್ರೀತಿಯ ಸಂಕಟವನ್ನು ಎದುರಿಸುವ ಸಾಧ್ಯತೆಗಳು ಇಂದು ಹೆಚ್ಚಿವೆ. ನಿಮ್ಮ ಸರ್ವಾಧಿಕಾರಿ ಧೋರಣೆ ನಿಮ್ಮ ಸಹೋದ್ಯೋಗಿಗಳಿಂದ ಟೀಕೆಗೆ ಗುರಿಯಾಗುತ್ತದೆ. ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಬೇಕು. ಕೆಲಸದ ಒತ್ತಡ ಹಿಂದಿನಿಂದಲೂ ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸುತ್ತಿದೆ. ಆದರೆ ಇಂದು, ಎಲ್ಲಾ ಕುಂದುಕೊರತೆಗಳೂ ಮಾಯವಾಗುತ್ತವೆ.
ಕುಂಭ ರಾಶಿ
ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೊಸ ಒಪ್ಪಂದಗಳು ಲಾಭದಾಯಕವೆಂದು ಕಂಡರೂ ಬಯಸಿದ ಲಾಭ ತರುವುದಿಲ್ಲ - ಹಣವನ್ನು ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರಗಳನ್ನು ಮಾಡಬೇಡಿ. ನಿಮ್ಮ ಕುಟುಂಬದ ಸದಸ್ಯರ ಅಗತ್ಯಗಳ ಮೇಲೆ ಗಮನ ಹರಿಸುವುದು ಇಂದು ನಿಮ್ಮ ಆದ್ಯತೆಯಾಗಿರಬೇಕು. ಪ್ರೀತಿಗಾಗಿ ವಿಶೇಷ ದಿನ- ರಾತ್ರಿಗಾಗಿ ಯಾವುದಾದರೂ ಯೋಜನೆ ಹಾಕಿ ಮತ್ತು ಇದನ್ನು ಸಾಧ್ಯವಾದಷ್ಟು ಪ್ರಣಯಮಯವಾಗಿಸಲು ಪ್ರಯತ್ನಿಸಿ. ಪ್ರಮುಖ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರ ಒತ್ತಡಕ್ಕೆ ಮಣಿಯಬೇಡಿ. ನೀವು ಇಂದು ಜನರೊಡನೆ ಬೆರೆಯಲು ಬಿಡುವಿನ ವೇಳೆಯನ್ನು ಹೊಂದಿದ್ದೀರಿ ಮತ್ತು ನೀವು ಅಧಿಕವಾಗಿ ಮಾಡಬಯಸುವ ವಿಷಯಗಳನ್ನು ಮಾಡುತ್ತೀರಿ. ಸ್ವಲ್ಪವೇ ಪ್ರಯತ್ನಗಳನ್ನು ಮಾಡಿದಲ್ಲಿ, ಈ ದಿನ ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನವಾಗಬಹುದು.
ಮೀನ ರಾಶಿ
ಅನಂತ ಜೀವನದ ಉತ್ಕೃಷ್ಟ ವೈಭವವನ್ನು ಆನಂದಿಸಲು ನಿಮ್ಮ ಜೀವನವನ್ನು ಹೆಚ್ಚು ಭವ್ಯಗೊಳಿಸಿ. ಚಿಂತೆಯ ಅನುಪಸ್ಥಿತಿ ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ. ಅನಿರೀಕ್ಷಿತ ಬಿಲ್‌ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತದೆ. ನಿಮ್ಮ ಹತ್ತಿರದ ಜನರು ವೈಯಕ್ತಿಕ ಮಟ್ಟದಲ್ಲಿ ನಿಮಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಏಕಪಕ್ಷೀಯ ಪ್ರೇಮ ನಿಮ್ಮನ್ನು ನಿರಾಸೆಗೊಳಿಸುತ್ತದೆ. ನೀವು ಪ್ರಮುಖ ಭೂಮಿ ಒಪ್ಪಂದಗಳನ್ನು ಮಾಡಲು ಹಾಗೂ ಮನರಂಜನಾ ಯೋಜನೆಗಳಿಗಾಗಿ ಅನೇಕರನ್ನು ಸಂಘಟಿಸುವ ಒಂದು ಸ್ಥಾನದಲ್ಲಿರುತ್ತೀರಿ. ಜಾಗ್ರತೆಯ ನಡವಳಿಕೆಗಳಿರಬಹುದಾದ ಒಂದು ದಿನ - ಇಲ್ಲಿ ನಿಮ್ಮ ಮನಸ್ಸಿಗಿಂತ ನಿಮ್ಮ ಹೃದಯದ ಅಗತ್ಯ ಹೆಚ್ಚಿರುತ್ತದೆ. ಕೆಲವೊಮ್ಮೆ, ವೈವಾಹಿಕ ಜೀವನ ನಿಜವಾಗಿಯೂ ಕಿರಿಕಿರಿಯುಂಟುಮಾಡುತ್ತದೆ. ಇದು ನಿಮ್ಮ ಕಿರಿಕಿರಿಗೊಳ್ಳುವ ದಿನದಂತೆ ತೋರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here