ಭವಿಷ್ಯ 17-12-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶನಿವಾರ, ಡಿಸೆಂಬರ್ 16, 2017

ಭವಿಷ್ಯ 17-12-2017

ಭವಿಷ್ಯ
ಮೇಷ ರಾಶಿ
ಒಬ್ಬ ಸಂತನ ಆಶೀರ್ವಾದದಿಂದ ಮನಶ್ಶಾಂತಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ - ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ಜನರು ನಿಮಗೆ ಹೊಸ ಭರವಸೆ ಹಾಗೂ ಕನಸುಗಳನ್ನು ನೀಡುತ್ತಾರೆ –ಇದು ನಿಮ್ಮ ಸ್ವಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಪ್ರೇಮ ಜೀವನ ಸ್ವಲ್ಪ ಕಠಿಣವಾಗಿರಬಹುದು. ನಿಮ್ಮ ಭಾರೀ ಆತ್ಮವಿಶ್ವಾಸದ ಲಾಭ ತೆಗೆದುಕೊಳ್ಳಿ ಮತ್ತು ಕೆಲವು ಹೊಸ ಗೆಳೆಯರು ಮತ್ತು ಸ್ನೇಹಿತರನ್ನು ಸಂಪಾದಿಸಿ. ಈ ದಿನ ಚೆನ್ನಾಗಿ ಹೋಗಬೇಕೆಂದು ನೀವು ಬಯಸಿದರೆ ನಿಮ್ಮ ಸಂಗಾತಿಯ ಮೂಡ್ ಆಫ್ ಆದಾಗ, ಒಂದು ಶಬ್ದವನ್ನೂ ಹೇಳಬೇಡಿ.
ವೃಷಭ ರಾಶಿ
ಒತ್ತಡ ತೊಡೆದುಹಾಕಲು ನಿಮ್ಮ ಮಕ್ಕಳ ಜೊತೆ ನಿಮ್ಮ ಅಮೂಲ್ಯ ಸಮಯ ಕಳೆಯಿರಿ. ನೀವು ಮಗುವಿನ ಗುಣಪಡಿಸುವ ಶಕ್ತಿಯನ್ನು ಅನುಭವಿಸುತ್ತೀರಿ. ಅವರು ಭೂಮಿಯ ಮೇಲೆ ಅತ್ಯಂತ ಶಕ್ತಿಯುತ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ವ್ಯಕ್ತಿತ್ವವಾಗಿರುತ್ತಾರೆ. ನೀವೇ ಮರುಚೈತನ್ಯ ಹೊಂದುತ್ತೀರಿ. ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ಕಿರಿಯ ಸಹೋದರ ಅಥವಾ ಸಹೋದರಿ ನಿಮ್ಮ ಸಲಹೆ ಪಡೆಯಸಬಹುದು. ಪ್ರೀತಿ ಇಂದ್ರಿಯಗಳ ಮಿತಿಯನ್ನು ಮೀರಿದ್ದಾಗಿದೆ, ಆದರೆ ನಿಮ್ಮ ಇಂದ್ರಿಯಗಳು ಇಂದು ಪ್ರೀತಿಯ ಭಾವಪರವಶತೆಯನ್ನು ಅನುಭವಿಸುತ್ತವೆ. ಪ್ರಯಾಣ ತಕ್ಷಣದ ಫಲಿತಾಂಶಗಳು ತರದಿದ್ದರೂ ಭವಿಷ್ಯದ ಪ್ರಯೋಜನಗಳಿಗೆ ಉತ್ತಮ ಅಡಿಪಾಯ ಹಾಕುತ್ತದೆ. ನಿಮ್ಮ ವೈವಾಹಿಕ ಜೀವನಕ್ಕೆ ಬಂದಾಗ ಪರಿಸ್ಥಿತಿಗಳು ನಿಜವಾಗಿಯೂ ಅಸಾಧಾರಣವಾಗಿರುತ್ತವೆ.
ಮಿಥುನ ರಾಶಿ
ನೀವು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಿರದಿದ್ದಲ್ಲಿ ನಿಮಗೆ ತುಂಬಾ ದಣಿವಾದಂತೆನಿಸುತ್ತದೆ ಮತ್ತು ನಿಮಗೆ ಅಧಿಕ ವಿಶ್ರಾಂತಿ ಬೇಕಾಗುತ್ತದೆ. ತರಾತುರಿಯಲ್ಲಿ ಹೂಡಿಕೆಗಳನ್ನು ಮಾಡಬೇಡಿ - ನೀವು ಎಲ್ಲಾ ಸಾಧ್ಯವಿರುವ ಕೋನಗಳಿಂದ ಹೂಡಿಕೆಯನ್ನು ಪರಿಶೀಲಿಸದೇ ಹೋದರೆ ನಷ್ಟ ಖಚಿತ. ಕುಟುಂಬ ಅಥವಾ ಹತ್ತಿರದ ಸ್ನೇಹಿತರ ಜೊತೆ ಇದನ್ನು ಒಂದು ಅತ್ಯುತ್ತಮ ದಿನವಾಗಿಸಿ. ಹಠಾತ್ ಪ್ರಣಯ ಪ್ರಸಂಗಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ನಿಮ್ಮ ಜೀವನ ಸಂಗಾತಿ ಇಂದು ಒಬ್ಬ ದೇವತೆಯಂತೆ ನಿಮ್ಮ ಬಗ್ಗೆ ಹೆಚ್ಚುವರಿ ಕಾಳಜಿ ತೆಗೆದುಕೊಳ್ಳಬಹುದು.
ಕರ್ಕ ರಾಶಿ
ಮನರಂಜನೆ ಮತ್ತು ಮೋಜಿನ ಒಂದು ದಿನ. ನೀವು ಇಂದು ಹಣ ಉಳಿಸುವುದು ಕಷ್ಟ – ನೀವು ಇಂದು ಅತಿಯಾಗಿ ಖರ್ಚು ಮಾಡುವ ಅಥವಾ ನಿಮ್ಮ ಪರ್ಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ –ನಿರ್ಲಕ್ಷ್ಯತನದಿಂದ ಕೆಲವು ಸಮಸ್ಯೆಗಳು ಖಂಡಿತ. ದೂರದ ಸ್ಥಳದ ಸಂಬಂಧಿಗಳು ಇಂದು ನಿಮ್ಮನ್ನು ಸಂಪರ್ಕಿಸಬಹುದು. ನಿಮ್ಮ ಹೃದಯಕ್ಕೆ ಪ್ರಿಯವಾಗುವ ಯಾರನ್ನಾದರೂ ಸಂಧಿಸುವ ಅವಕಾಶಗಳು ಇಂದು ಬಲವಾಗಿವೆ. ನಿಮ್ಮ ನೋಟವನ್ನು ವರ್ಧಿಸುವ ಮತ್ತು ಪ್ರಬಲ ಪಾಲುದಾರರನ್ನು ಆಕರ್ಷಿಸಲು ಬದಲಾವಣೆಗಳನ್ನು ಮಾಡಿ. ನಿಮ್ಮ ಸಂಗಾತಿ ಇಂದು ನಿಜವಾಗಿಯೂ ವಿಶೇಷವಾದದ್ದೇನಾದರೂ ಮಾಡುತ್ತಾರೆ
ಸಿಂಹ ರಾಶಿ
ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಆಶೀರ್ವಾದ ಮಾಡುತ್ತಾರೆ ಮತ್ತು ಮನಸ್ಸಿನ ಶಾಂತಿ ತರುತ್ತಾರೆ. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ - ಆದರೆ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಕುಟುಂಬದ ಸದಸ್ಯರ ಖುಷಿಯ ಸ್ವಭಾವ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸುತ್ತದೆ. ನಿಮ್ಮ ಪ್ರೀತಿಪಾತ್ರರ ತೋಳುಗಳಲ್ಲಿ ಆರಾಮ- ಆನಂದ ಮತ್ತು ಭಾವಪರವಶತೆಯನ್ನು ನೀವು ಕಾಣುವುದರಿಂದ ನಿಮ್ಮ ಕೆಲಸ ಹಿಂದೆ ಬೀಳುತ್ತದೆ. ಘಟನೆಗಳು ಉತ್ತಮ ಮತ್ತು ಗೊಂದಲಮಯವಾಗಿರುವ ಒಂದು ದಿನ – ಇದು ನಿಮ್ಮನ್ನು ದಣಿವು ಹಾಗೂ ಗೊಂದಲದಲ್ಲಿರಿಸುತ್ತದೆ. ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಎಲ್ಲವೂ ಸಂತೋಷಕರವಾಗಿರುತ್ತದೆ.
ಕನ್ಯಾ ರಾಶಿ
ಒತ್ತಡ ತೊಡೆದುಹಾಕಲು ಯಾವುದಾದರೂ ಹಿತವಾದ ಸಂಗೀತ ಆಲಿಸಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟುಮಾಡುತ್ತದೆ. ಈಗ ತಾನೇ ಪರಿಚಯವಾದವರ ಜೊತೆ ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ಇಂದು ನೀವು ನಿಮ್ಮ ಪ್ರೀತಿಪಾತ್ರರಿಗಾಗಿ ಪರಿತಪಿಸಬಹುದು. ಧರ್ಮಾರ್ಥ ಮತ್ತು ಸಮಾಜ ಸೇವೆ ಇಂದು ನಿಮ್ಮನ್ನು ಸೆಳೆಯುತ್ತವೆ - ನೀವು ಧರ್ಮಾರ್ಥ ಕಾರಣಕ್ಕಾಗಿ ನಿಮ್ಮ ಸಮಯ ವ್ಯಯಿಸಿದಲ್ಲಿ ಅಗಾಧವಾದ ವ್ಯತ್ಯಾಸ ಉಂಟುಮಾಡಬಹುದು. ಈ ದಿನ ನಿಮ್ಮ ವೈವಾಹಿಕ ಜೀವನದಲ್ಲಿ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ನಿಯಂತ್ರಣ ಕಾಯ್ದುಕೊಳ್ಳಲು ಶಾಂತವಾಗಿರಿ.
ತುಲಾ ರಾಶಿ
ನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ನಿಮ್ಮ ವೆಚ್ಚಗಳಲ್ಲಿ ಏರಿಕೆಯಾಗುತ್ತದೆ ಹಾಗೂ ಇದರಿಂದ ನಿಮ್ಮ ಮನಸ್ಸಿಗೆ ತೊಂದರೆಯಾಗುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು. ಇಂದು ಯಾರನ್ನೂ ಚುಡಾಯಿಸಬೇಡಿ. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ. ನಿಮ್ಮ ಸಂಗಾತಿ ನೀವು ಹೊಂದಿರುವ ಅಷ್ಟೇನೂ ಸಾಮರಸ್ಯವಿರದ ವೈವಾಹಿಕ ಜೀವನದ ಬಗ್ಗೆ ನಿಮ್ಮ ಜೊತೆ ಜಗಳವಾಡಬಹುದು.
ವೃಶ್ಚಿಕ ರಾಶಿ
ನಿಮ್ಮ ಕುಂದಿದ ಜೀವಂತಿಕೆ ವ್ಯವಸ್ಥೆಯಲ್ಲಿ ದೀರ್ಘಕಾಲೀನ ವಿಷದಂತ ವರ್ತಿಸುತ್ತದೆ. ನಿಮ್ಮನ್ನು ಸೃಜನಶೀಲ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಮತ್ತು ರೋಗದ ವಿರುದ್ಧ ಹೋರಾಡಲು ಪ್ರೇರೇಪಿಸುವುದು ಒಳ್ಳೆಯದು. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಸ್ನೇಹಿತರ ಸಂಗ ಆರಾಮ ಒದಗಿಸುತ್ತದೆ. ಪ್ರೇಮ ಜೀವನ ಕಡಿಮೆ ಚೈತನ್ಯದಾಯಕವಾಗಿರುವ ಸಾಧ್ಯತೆಯಿದೆ. ಹತ್ತಿರದ ಸಹಯೋಗಿಗಳ ಜೊತೆ ಹಲವಾರು ಭಿನ್ನಾಭಿಪ್ರಾಯಗಳು ಉದ್ಭವಿಸಬಹುದಾದ ಒತ್ತಡ ತುಂಬಿದ ದಿನ. ಇಂದು ನಿಮ್ಮ ಸಂಗಾತಿ ಕೆಟ್ಟ ಮೂಡ್‌ನಲ್ಲಿರುವಂತೆ ತೋರುತ್ತಿದೆ.
ಧನು ರಾಶಿ
ಗ್ಯಾಸ್ ಸಮಸ್ಯೆಯಿರುವ ರೋಗಿಗಳಿಗೆ ಎಣ್ಣೆಯುಕ್ತ ಮತ್ತು ಕೊಬ್ಬಿನ ಆಹಾರ ಅವರ ಅನಾರೋಗ್ಯವನ್ನು ಹೆಚ್ಚಿಸಬಹುದಾದ್ದರಿಂದ ಅವರು ಅವುಗಳನ್ನು ಸೇವಿಸಬಾರದು. ಹೂಡಿಕೆ ಮಾಡಲು ಮತ್ತು ಊಹಪೋಹಗಳಿಗೆ ಒಳ್ಳೆಯ ದಿನವಲ್ಲ. ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ಇಂದು ಪ್ರೀತಿಯಲ್ಲಿ ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮ್ಮ ಜೀವನ ಸಂಗಾತಿಯ ಜೊತೆ ನೀವು ಹೊಂದಿದ ಹಳೆಯ ಸುಂದರ ನೆನಪುಗಳನ್ನು ಮತ್ತೆ ನೆನಪಿಸಬಹುದು.
ಮಕರ ರಾಶಿ
ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ ವ್ಯಾಪಾರ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ನಾಳೆ ಬಹಳ ತಡವಾಗುವುದರಿಂದ ನೀವು ನಿಮ್ಮ ಪ್ರಿಯತಮೆಗೆ ನಿಮ್ಮ ಸಂದೇಶವನ್ನು ಕೂಡಲೇ ತಿಳಿಸಬೇಕು. ಘಟನೆಗಳು ಉತ್ತಮ ಮತ್ತು ಗೊಂದಲಮಯವಾಗಿರುವ ಒಂದು ದಿನ – ಇದು ನಿಮ್ಮನ್ನು ದಣಿವು ಹಾಗೂ ಗೊಂದಲದಲ್ಲಿರಿಸುತ್ತದೆ. ಇದು ಮದುವೆಯ ಉಜ್ವಲವಾದ ದಿನವನ್ನು ಅನುಭವಿಸುವ ದಿನವಾಗಿದೆ.
ಕುಂಭ ರಾಶಿ
ತೊಂದರೆಗಳ ಬಗ್ಗೆ ಚಿಂತಿಸುವ ಮತ್ತು ಅವುಗಳನ್ನು ದೊಡ್ಡದಾಗಿಸುವ ನಿಮ್ಮ ಸ್ವಭಾವ ನಿಮ್ಮ ನೈತಿಕತೆಯನ್ನು ದುರ್ಬಲಗೊಳಿಸಬಹುದು. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಸಂಬಂಧಿಕರ ಭೇಟಿ ನೀವು ಆಲೋಚಿಸಿದ್ದಕ್ಕಿಂತಲೂ ಹೆಚ್ಚು ಒಳ್ಳೆಯವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ. ನಿಮ್ಮ ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ಇದನ್ನು ಒಂದು ಸ್ಮರಣೀಯ ದಿನವಾಗಿಸಬಹುದು. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ನಿಮಗನಿಸಬಹುದು, ಆದರೆ ಕೊನೆಯಲ್ಲಿ ಅವರು ನಿಮಗಾಗಿಯೇ ವ್ಯವಸ್ಥೆಗಳನ್ನು ಮಾಡುತ್ತಿದ್ದರೆಂದು ನಿಮಗೆ ಅರಿವಾಗುತ್ತದೆ.
ಮೀನ ರಾಶಿ
ಖಿನ್ನತೆ ಅಥವಾ ಉದ್ವಿಗ್ನತೆ ಮನಶ್ಯಾಂತಿಯನ್ನು ಹಾಳು ಮಾಡಬಹುದು. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಆರೋಗ್ಯ ಚೆನ್ನಾಗಿಲ್ಲದ ಒಬ್ಬ ಸಂಬಂಧಿಯನ್ನು ಭೇಟಿ ಮಾಡಿ. ಪ್ರೀತಿಯಲ್ಲಿ ನಿರಾಶೆಯಾಗಬಹುದಾದರೂ ಪ್ರೇಮಿಗಳು ಯಾವತ್ತೂ ಮುಖಸ್ತುತಿ ಮಾಡುವವರಾದ್ದರಿಂದ ನೀವು ಧೃತಿಗೆಡಬೇಡಿ. ಧರ್ಮಕಾರ್ಯಗಳು / ಹವನಗಳು / ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳಲಾಗುವುದು. ಒಂದು ತಮಾಷೆಯ ಮಾತುಕತೆಯಲ್ಲಿ ಒಂದು ಹಳೆಯ ಸಮಸ್ಯೆ ಭುಗಿಲೇಳಬಹುದು, ಹಾಗೂ ಇದು ಅಂತಿಮವಾಗಿ ವಾದಕ್ಕೀಡುಮಾಡಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here