ಭವಿಷ್ಯ 29-01-2018 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಭಾನುವಾರ, ಜನವರಿ 28, 2018

ಭವಿಷ್ಯ 29-01-2018

ಭವಿಷ್ಯ
ಮೇಷ ರಾಶಿ
ಬಸುರಿಯು ನೆಲದ ಮೇಲೆ ನಡೆದುಕೊಂಡು ಹೋಗುವಾಗ ವಿಶೇಷ ಕಾಳಜಿ ವಹಿಸಬೇಕು ಮತ್ತು ಸಾಧ್ಯವಾದರೆ ನಿಮ್ಮ ಸ್ನೇಹಿತರು ಧೂಮಪಾನ ಮಾಡುವಾಗ ಅವರ ಜೊತೆ ನಿಲ್ಲಬೇಡಿ. ಏಕೆಂದರೆ ಅದು ಮಗುವನ್ನು ಬಾಧಿಸಬಹುದು. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ. ನೀವು ಸಾಮಾಜಿಕ ಕಾರ್ಯಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸಿದಲ್ಲಿ ಸ್ನೇಹಿತರು ಮತ್ತು ಹೊಸ ಪರಿಚಯಸ್ಥರನ್ನು ಪಡೆಯುತ್ತೀರಿ. ಪ್ರೀತಿ ನಿಮ್ಮ ಪ್ರೀತಿಪಾತ್ರರೊಡನೆ ಹಂಚಿಕೊಳ್ಳಬೇಕಾದ ಭಾವನೆ. ನೀವು ಕೆಲಸದಲ್ಲಿ ಸಂಭವಿಸುವ ಬದಲಾವಣೆಗಳಿಂದ ಪ್ರಯೋಜನ ಪಡೆಯುತ್ತೀರಿ. ಹೆಚ್ಚಿನ ವಿಷಯಗಳು ನೀವು ಬಯಸಿದಂತೆ ಅಗುವ –ಒಂದು ಉಜ್ವಲವಾದ ಹಾಸ್ಯದಿಂದ ತುಂಬಿದ ದಿನ. ಈ ದಿನ ನಿಮ್ಮ ವೈವಾಹಿಕ ಜೀವನದಲ್ಲಿ ನಿಜಕ್ಕೂ ಅದ್ಭುತವಾಗಿದೆ. ನೀವು ನಿಮ್ಮ ಸಂಗಾತಿಯನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಅವರಿಗೆ ತಿಳಿಯಲಿ.
ವೃಷಭ ರಾಶಿ
ನಿಮ್ಮ ಕುಟುಂಬದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಿಮ್ಮ ಕೋಪವನ್ನುನಿಯಂತ್ರಿಸಿ. ನೀವು ಆರ್ಥಿಕವಾಗಿ ವ್ಯವಹರಿಸುವರ ಜೊತೆಗೆ ಎಚ್ಚರಿಕೆಯಿಂದಿರಿ. ಕೌಟುಂಬಿಕ ಶಾಂತಿ ಕೆಲವು ಅನಿರೀಕ್ಷಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಸಮಯವೇ ಇದನ್ನು ಬಗೆಹರಿಸುವುದರಿಂದ ಚಿಂತಿಸುವ ಅಗತ್ಯವಿಲ್ಲ. ಅವುಗಳನ್ನು ಲಘುವಾಗಿ ತಗೆದುಕೊಳ್ಳಬೇಕು. ಪ್ರೇಮ ಧನಾತ್ಮಕ ಕಂಪನಗಳನ್ನು ತೋರಿಸುತ್ತದೆ ನಿಮ್ಮ ಪ್ರೀತಿ ಸಂಗಾತಿಯ ಸಾಮಾಜಿಕ ಮಾಧ್ಯಮದ ಕಳೆದ ಕೆಲವು ಸ್ಟೇಟಸ್‌ಗಳನ್ನು ಪರಿಶೀಲಿಸಿ, ನೀವು ಒಂದು ಸುಂದರ ಅಚ್ಚರಿಯನ್ನು ಪಡೆಯುತ್ತೀರಿ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ನಿಮ್ಮ ವೈವಾಹಿಕ ಜೀವನ ಇಂದು ಮೋಜು, ಸಂತೋಷ, ಮತ್ತು ಆನಂದದ ಬಗೆಗಾಗಿರುತ್ತದೆ.
ಮಿಥುನ ರಾಶಿ
ಸೃಜನಶೀಲ ಆಸಕ್ತಿಗಳು ನಿಮ್ಮನ್ನು ಶಾಂತವಾಗಿರಿಸುತ್ತವೆ. ಮೌಲ್ಯ ಹೆಚ್ಚಾಗುವ ವಸ್ತುಗಳನ್ನು ಖರೀದಿಸಲು ಪರಿಪೂರ್ಣ ದಿನ. ಮೊಮ್ಮಕ್ಕಳು ಅಪಾರ ಸಂತೋಷದ ಮೂಲವಾಗುತ್ತಾರೆ. ವೈಯಕ್ತಿಕ ಮಾರ್ಗದರ್ಶನ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ಇದು ನಿಮ್ಮನ್ನು ವ್ಯಕ್ತಪಡಿಸಲು ಮತ್ತು ಸೃಜನಶೀಲ ಸ್ವರೂಪದ ಯೋಜನೆಗಳಲ್ಲಿ ಕೆಲಸ ಮಾಡಲು ಒಳ್ಳೆಯ ಸಮಯ. ಕೃತಕತೆ ನಿಮಗೆ ಯಾವ ಲಾಭವನ್ನೂ ತರದಿರುವುದರಿಂದ ನಿಮ್ಮ ಸಂಭಾಷಣೆಯಲ್ಲಿ ನೈಜತೆಯಿರಲಿ. ಇಂದು, ನಿಮ್ಮ ಮದುವೆಯಲ್ಲಿ ಮಾಡಿದ ಎಲ್ಲಾ ಪ್ರತಿಜ್ಞೆಗಳೂ ನಿಜವೆಂದು ನಿಮಗೆ ಅರಿವಾಗುತ್ತದೆ. ನಿಮ್ಮ ಸಂಗಾತಿ ನಿಮ್ಮ ಆತ್ಮೀಯಳಾಗಿದ್ದಾಳೆ.
ಕರ್ಕ ರಾಶಿ
ನಿಮ್ಮ ಉತ್ತಮ ಆರೋಗ್ಯದ ಸಲುವಾಗಿ ದೀರ್ಘ ನಡಿಗೆಗೆ ಹೋಗಿ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಮನೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಿ. ಅದೇ ಸಮಯದಲ್ಲಿ ಈ ಲಯವನ್ನು ಮುಂದುವರಿಸಲು ಮತ್ತು ನಿಮ್ಮ ದೇಹವನ್ನು ಚೈತನ್ಯದಾಯಕವಾಗಿರಿಸಲು ಮನರಂಜನಾ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆಯಿರಿ. ನಿಮ್ಮ ಪ್ರೇಮಿಯ ಜೊತೆ ಹೊರಹೋದಾಗ ನಿಮ್ಮ ರೂಪ ಮತ್ತು ವರ್ತನೆಯಲ್ಲಿ ನೈಜತೆಯಿರಲಿ. ಮೊದಲಿನಿಂದ ಕೊನೆಯವರೆಗೂ ದಿನವು ನಿಮ್ಮನ್ನು ಕೆಲಸದಲ್ಲಿ ಚೈತನ್ಯದಾಯಕವಾಗಿಡುತ್ತದೆ. ರಹಸ್ಯ ಶತ್ರುಗಳು ನಿಮ್ಮ ಬಗ್ಗೆ ವದಂತಿಗಳು ಹರಡಲು ಉತ್ಸಾಹಿಗಳಾಗಿರುತ್ತಾರೆ. ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಎಲ್ಲವೂ ಸಂತೋಷಕರವಾಗಿರುತ್ತದೆ.
ಸಿಂಹ ರಾಶಿ
ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ನಿಮಗೆ ಕಷ್ಟವಾಗಬಹುದು - ನಿಮ್ಮ ಅಸಾಮಾನ್ಯ ವರ್ತನೆ ನಿಮ್ಮ ಸುತ್ತಲಿನ ಜನರನ್ನು ಗೊಂದಲದಲ್ಲಿ ಕೆಡವಬಹುದು ಮತ್ತು ನಿಮ್ಮನ್ನು ನಿರಾಸೆಗೊಳಿಸಬಹುದು. ಆಸ್ತಿ ವ್ಯವಹಾರಗಳು ಅಸಾಧಾರಣ ಲಾಭ ತರುತ್ತವೆ. ನಿಮ್ಮ ಕುಟುಂಬದ ಸದಸ್ಯರು ಕಡ್ಡಿಯನ್ನು ಗುಡ್ಡ ಮಾಡುವ ಸಾಧ್ಯತೆಯಿದೆ. ನಿಮ್ಮ ಪ್ರೇಮಿಯೆಡೆಗೆ ಸೇಡು ಹೊಂದುವುದು ಯಾವುದೇ ಫಲ ತರುವುದಿಲ್ಲ – ಅದರ ಬದಲಿಗೆ ನೀವು ಶಾಂತರಾಗಿರಬೇಕು ಮತ್ತು ನಿಮ್ಮ ಪ್ರೇಮಿಗೆ ನಿಮ್ಮ ನಿಜವಾದ ಪ್ರೀತಿಯನ್ನು ವಿವರಿಸಬೇಕು. ಕೆಲಸದಲ್ಲಿ ಇಂದು ಎಲ್ಲವೂ ನಿಮ್ಮ ಪರವಾಗಿರುತ್ತವೆ. ಇಂದು ಜನರು ಹೊಗಳಿಕೆಗಳನ್ನು ನೀಡುತ್ತಾರೆ-ಇವುಗಳನ್ನು ನೀವು ಯಾವಾಗಲೂ ಕೇಳಬಯಸಿರುತ್ತೀರಿ. ನಿಮ್ಮ ಸಂಗಾತಿಯ ನಿಮ್ಮ ಆರೋಗ್ಯದೆಡೆಗೆ ಇಂದು ಅಸಂವೇದನಾಶೀಲರಾಗಿರಬಹುದು.
ಕನ್ಯಾ ರಾಶಿ
ಕ್ರೀಡೆಗಳು ಸಾರ್ವಕಾಲಿಕ ಯೌವನದ ರಹಸ್ಯವಾಗಿದ್ದರಿಂದ ಯಾವುದಾದರೂ ಆಟಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಆರ್ಥಿಕ ನಿರ್ಬಂಧಗಳನ್ನು ತಪ್ಪಿಸಲು ನಿಮ್ಮ ಬಜೆಟ್‌ಗೆ ಅಂಟಿಕೊಳ್ಳಿ. ಇಂದು ನೀವು ಸಲಹೆ ಕೊಟ್ಟರೆ ಅದನ್ನು ಸ್ವೀಕರಿಸಲೂ ಸಿದ್ಧವಾಗಿರಿ. ನಿಮ್ಮ ಪ್ರೇಮಿಯ ಭಾವನಾತ್ಮಕ ಬೆದರಿಕೆಯ ಬೇಡಿಕೆಗಳಿಗೆ ಸಮ್ಮತಿಸಬೇಡಿ. ಸಹೋದ್ಯೋಗಿಗಳು ಮತ್ತು ಹಿರಿಯರ ಸಂಪೂರ್ಣ ಸಹಕಾರದಿಂದ ಕಛೇರಿಯಲ್ಲಿ ಕೆಲಸ ಬೇಗ ಮುಗಿಯುತ್ತದೆ. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ಚಟುವಟಿಕೆಗಳ ನಿಮ್ಮ ಆಯ್ಕೆ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ನಿಮ್ಮ ಸಂಗಾತಿ ನೀವು ಹೊಂದಿರುವ ಅಷ್ಟೇನೂ ಸಾಮರಸ್ಯವಿರದ ವೈವಾಹಿಕ ಜೀವನದ ಬಗ್ಗೆ ನಿಮ್ಮ ಜೊತೆ ಜಗಳವಾಡಬಹುದು.
ತುಲಾ ರಾಶಿ
ವಿಪರೀತ ಮದ್ಯಪಾನ ಮತ್ತು ಅಜಾಗರೂಕ ಚಾಲನೆಯನ್ನು ತಪ್ಪಿಸಿ. ಆರ್ಥಿಕ ಸಮಸ್ಯೆ ರಚನಾತ್ಮಕವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯವನ್ನು ಹಾಳುಮಾಡುತ್ತದೆ. ಅನಿರೀಕ್ಷಿತ ಜವಾಬ್ದಾರಿಗಳು ನಿಮ್ಮ ದಿನದ ಯೋಜನೆಗಳಿಗೆ ಅಡ್ಡಿಪಡಿಸುತ್ತವೆ – ನೀವು ಇತರರಿಗೆ ಹೆಚ್ಚು ಮತ್ತು ನಿಮಗಾಗಿ ಕಡಿಮೆ ಮಾಡಿಕೊಳ್ಳುತ್ತೀರಿ. ನಿಮ್ಮ ಸಂಗಾತಿಯು ಇಂದು ಇಡೀ ದಿನ ನಿಮ್ಮ ಬಗ್ಗೆ ಚಿಂತಿಸುತ್ತೀರಿ. ನೀವು ಬಹಳ ಹಿಂದೆ ಆರಂಭವಾದ ಒಂದು ಯೋಜನೆಯನ್ನು ಇಂದು ಪೂರ್ಣಗೊಳಿಸುವುದರಿಂದ ಇಂದು ನಿಮಗೆ ತೃಪ್ತಿ ಸಾಕಷ್ಟು ಸಿಗುತ್ತದೆ. ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಬೇಕು. ಉತ್ತಮ ಆಹಾರ, ಪ್ರಣಯದ ಕ್ಷಣಗಳು; ಇವೆಲ್ಲವನ್ನೂ ನೀವು ಇಂದು ನಿರೀಕ್ಷಿಸಬಹುದಾಗಿದೆ.
ವೃಶ್ಚಿಕ ರಾಶಿ
ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಪ್ರಯತ್ನ ಮತ್ತು ಸಮರ್ಪಣೆಯನ್ನು ಪ್ರಶಂಸಿಸುತ್ತಾರೆ ಪ್ರೀತಿಯಲ್ಲಿ ನಿಮ್ಮ ಅಸಭ್ಯ ವರ್ತನೆಗೆ ಕ್ಷಮೆ ಕೋರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗುತ್ತಿರುವವರು ಶಾಂತವಾಗಿರಬೇಕು. ಪರೀಕ್ಷೆಯ ಭಯ ನೀವು ದೈರ್ಯಗೆಡಿಸುವುದು ಬೇಡ. ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ಸಕಾರಾತ್ಮಕ ಫಲಿತಾಂಶ ತರುತ್ತವೆ. ಜಾಗ್ರತೆಯ ನಡವಳಿಕೆಗಳಿರಬಹುದಾದ ಒಂದು ದಿನ - ಇಲ್ಲಿ ನಿಮ್ಮ ಮನಸ್ಸಿಗಿಂತ ನಿಮ್ಮ ಹೃದಯದ ಅಗತ್ಯ ಹೆಚ್ಚಿರುತ್ತದೆ. ನಿಮ್ಮ ದಿನದ ಯೋಜನೆ ನಿಮ್ಮ ಸಂಗಾತಿಯ ತುರ್ತು ಕೆಲಸದಿಂದಾಗಿ ಹಾಳಾಗಬಹುದು, ಆದರೆ ಕೊನೆಗೆ ನಿಮಗೆ ಅದು ಒಳ್ಳೆಯದಕ್ಕೇ ಆಗಿತ್ತೆಂದು ಅರಿವಾಗುತ್ತದೆ.
ಧನು ರಾಶಿ
ಇತರರ ವಿರುದ್ಧ ದ್ವೇಷ ಕಾರುವುದು ಮಾನಸಿಕ ಒತ್ತಡವನ್ನು ನೀಡುತ್ತದೆ. ಇವುಗಳು ಜೀವನವನ್ನು ವ್ಯರ್ಥಗೊಳಿಸುವುದರಿಂದ ಮತ್ತು ನಿಮ್ಮ ಸಾಮರ್ಥ್ಯವನ್ನು ಕೊಲ್ಲುವುದರಿಂದ ನೀವು ಈ ರೀತಿಯ ಆಲೋಚನೆಗಳನ್ನು ತಪ್ಪಿಸಬೇಕು. ಹೊಸ ಹಣಗಳಿಕೆಯ ಅವಕಾಶಗಳು ಲಾಭದಾಯಕವಾಗಿರುತ್ತವೆ. ನೀವು ಮನೆಯಲ್ಲಿ ಜನರೊಡನೆ ಏನಾದರೂ ರೋಮಾಂಚಕ ಮತ್ತು ವೈವಿಧ್ಯಮಯವಾದದ್ದನ್ನು ಮಾಡಬೇಕು. ಸುಳ್ಳು ಹೇಳುವುದು ನಿಮ್ಮ ಪ್ರೀತಿಯನ್ನು ಹಾಳುಗೆಡವಬಹುದಾದ್ದರಿಂದ ಹಾಗೆ ಮಾಡಬೇಡಿ. ಸಹಭಾಗಿತ್ವದ ಅವಕಾಶಗಳು ಚೆನ್ನಾಗಿ ಕಂಡರೂ ಎಲ್ಲವನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಿ. ನೀವು ತಪ್ಪು ದಾರಿಗೆಳೆಯಲು ಅಥವಾ ನಿಮಗೆ ಹಾನಿ ಮಾಡುವ ಮಾಹಿತಿ ನೀಡಲು ಪ್ರಯತ್ನಿಸುವ ವ್ಯಕ್ತಿಗಳ ಬಗ್ಗೆ ಎಚ್ಚರಿದಿಂದಿರಿ. ಇಂದು, ನಿಮ್ಮ ಸಂಗಾತಿ ನಿಮ್ಮ ಅಥವಾ ನಿಮ್ಮ ಮದುವೆಯ ಬಗೆಗಿನ ಎಲ್ಲಾ ಕೆಟ್ಟ ಸಂಗತಿಗಳನ್ನು ಹೇಳಬಹುದು.
ಮಕರ ರಾಶಿ
ಕುಟುಂಬದ ವೈದ್ಯಕೀಯ ವೆಚ್ಚದಲ್ಲಿ ಹೆಚ್ಚಳವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಒಬ್ಬ ಕುಟುಂಬದ ಸದಸ್ಯರ ಆರೋಗ್ಯದ ಸ್ಥಿತಿ ಸ್ವಲ್ಪ ಒತ್ತಡಕ್ಕೆ ಕಾರಣವಾಗುತ್ತದೆ. ನಿಮ್ಮ ಪ್ರಿಯತಮೆಯ ಜೊತೆಗಿನ ಸಂಬಂಧ ಯಾರಾದರೊಬ್ಬರ ಹಸ್ತಕ್ಷೇಪದಿಂದ ಹಾಳಾಗಬಹುದು. ಇಂದು ನೀವು ಕೇಂದ್ರಬಿಂದುವಾಗಿರುತ್ತೀರಿ- ಮತ್ತು ಯಶಸ್ಸು ನಿಮ್ಮ ನಿಲುಕಿನೊಳಗಿದೆ. ಕೆಲವು ಮನರಂಜನೆ ಮತ್ತು ಉಲ್ಲಾಸಕ್ಕೆ ಒಳ್ಳೆಯ ದಿನ. ಇಂದು ನಿಮ್ಮ ವೈವಾಹಿಕ ಜೀವನ ಅಂತರಕ್ಕಾಗಿ ಹಂಬಲಿಸುತ್ತದೆ.
ಕುಂಭ ರಾಶಿ
ನಿಮ್ಮ ನಗು ಖಿನ್ನತೆಯ ವಿರುದ್ಧ ಕೆಲಸ ಮಾಡುತ್ತದೆ. ಆಶೀರ್ವಾದ ಹಾಗೂ ಅದೃಷ್ಟ ನಿಮ್ಮ ಬಳಿ ಬರುತ್ತಿದ್ದ ಹಾಗೆ ನಿಮ್ಮ ಬಯಕೆಗಳು ಪೂರೈಸಲ್ಪಡುತ್ತವೆ - ಮತ್ತು ಹಿಂದಿನ ದಿನಗಳ ಶ್ರಮ ಈಗ ಫಲ ನೀಡುತ್ತದೆ. ನಿಮ್ಮನ್ನು ಕೆಳಗೆಳೆಯಲು ಪ್ರಯತ್ನಿಸುತ್ತಿರುವ ಜನರನ್ನು ನಿರ್ವಹಿಸುವುದು ನಿಮಗೆ ಅತ್ಯಂತ ಕಷ್ಟವಾಗಬಹುದು. ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿರುತ್ತವೆ. ನೀವು ಕೆಲಸದಲ್ಲಿ ಸಂಭವಿಸುವ ಬದಲಾವಣೆಗಳಿಂದ ಪ್ರಯೋಜನ ಪಡೆಯುತ್ತೀರಿ. ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಿ. ಈ ದಿನ ನಿಮ್ಮ ಜೀವನ ಸಂಗಾತಿಗೆ ಸಾಮಾನ್ಯ ದಿನಗಳಿಗಿಂತ ಉತ್ತಮವಾಗಿರುವಂತೆ ತೋರುತ್ತದೆ.
ಮೀನ ರಾಶಿ
ಇತರರನ್ನು ಟೀಕಿಸಲು ನಿಮ್ಮ ಸಮಯ ವ್ಯರ್ಥ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಹಾಗೆ ಮಾಡಬೇಡಿ. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಸ್ನೇಹಿತರು ಇಂದು ರಾತ್ರಿ ರೋಮಾಂಚಕವಾದದ್ದನ್ನೇನಾದರೂ ಯೋಜಿಸಿ ನಿಮಗೆ ಆನಂದ ತರುತ್ತಾರೆ. ಪ್ರೀತಿ ಯಾವಾಗಲೂ ಭಾವಪೂರ್ಣವಾಗಿದೆ, ಮತ್ತು ನೀವು ಇಂದು ಇದನ್ನು ಅನುಭವಿಸುತ್ತೀರಿ. ಇಂದು ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿರುವಂತೆ ತೋರುತ್ತದೆ. ನೀವೇನಾದರೂ ಮೋಸದ್ದನ್ನು ಮಾಡಿದಲ್ಲಿ ಅಧಿಕಾರಿಗಳು ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಕಡಿಮೆಯಿರುವುದರಿಂದ ನಿಮ್ಮ ಕಾರ್ಯಗಳು ಹಾಗೂ ಮಾತುಗಳ ಬಗ್ಗೆ ಎಚ್ಚರವಿರಲಿ. ಮದುವೆಯ ನಂತರ ಪ್ರೀತಿ ಕಷ್ಟವೆಂದು ತೋರುತ್ತದೆ, ಆದರೆ ಅದು ನಿಮ್ಮ ಜೊತೆ ಇದು ದಿನವಿಡೀ ನಡೆಯುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here